ಶಿವಮೊಗ್ಗ: ಕೆರೆ ಪಕ್ಕದಲ್ಲಿ ಪುರುಷನ ಶವ ಪತ್ತೆ – ಕೊಲೆ ಶಂಕೆ!

Written by Koushik G K

Published on:

ಶಿವಮೊಗ್ಗ– ನಗರದಲ್ಲಿ ಭೀಕರ ಘಟನೆ ನಡೆದಿದೆ. ಹಳೆ ಬೊಮ್ಮನಕಟ್ಟೆಯ ಕೆಂಚಮ್ಮ ದೇವಸ್ಥಾನದ ಹಿಂಬದಿಯ ಕೆರೆ ಪಕ್ಕದಲ್ಲಿ 35 ವರ್ಷದ ಪುರುಷನ ಶವವೊಂದು ರಕ್ತಸಿಕ್ತ ಸ್ಥಿತಿಯಲ್ಲಿ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ. ಮೃತನನ್ನು ಅವಿನಾಶ್ ಎಂದು ಗುರುತಿಸಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಘಟನೆ ಸ್ಥಳದಲ್ಲಿ ಮದ್ಯದ ಬಾಟಲಿ, ಖಾರಾ ಮಿಕ್ಸ್ಚರ್ ಮುಂತಾದ ವಸ್ತುಗಳು ಬಿದ್ದಿದ್ದು, ಈ ವ್ಯಕ್ತಿ ತಡರಾತ್ರಿ ಸ್ನೇಹಿತರ ಜೊತೆ ಮದ್ಯಪಾನ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬಳಿಕ ಜಗಳವೊಂದು ಉಂಟಾಗಿ, ಕೊಲೆಯಲ್ಲಿ ಅಂತ್ಯವಾಗಿರಬಹುದು ಎಂಬ ಪೋಲೀಸರ ಪ್ರಾಥಮಿಕ ಅಂದಾಜು.

ಈ ಘಟನೆ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತುಂಗಾನಗರ ಠಾಣೆಯಿಂದ ಫೊರೆನ್ಸಿಕ್ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು, ಶ್ವಾನದಳ ಕೂಡ ಸ್ಥಳಕ್ಕೆ ಕರೆತರಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯ ನಿರೀಕ್ಷೆಯಿದೆ

ದೇಹ-ಮನಸ್ಸು-ಆತ್ಮದ ಸಂಯೋಜನೆಯಾದ ಯೋಗವನ್ನು ಅಳವಡಿಸಿಕೊಳ್ಳಬೇಕು: ಸಂಸದ ಬಿ.ವೈ. ರಾಘವೇಂದ್ರ

Leave a Comment