ಹೊಸನಗರ

ಹೊಸನಗರ ಮಾರಿಕಾಂಬಾ ಜಾತ್ರಾ ಆಡಳಿತ ಸಮಿತಿ ವಿರುದ್ಧ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ ; ಸೂಕ್ತ ತನಿಖೆ ನಡೆಸಲು ತಹಶೀಲ್ದಾರ್‌ಗೆ ಮನವಿ

ಹೊಸನಗರ ; ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಮಾರಿಕಾಂಬಾ ಜಾತ್ರೆ ಆಚರಣೆಯಲ್ಲಿ ಪ್ರಸಕ್ತ ಆಡಳಿತ ಸಮಿತಿ ಸದಸ್ಯರಿಂದ ವ್ಯಾಪಕ ಭ್ರಷ್ಠಾಚಾರ ನಡೆದು ಸಾರ್ವಜನಿಕರಿಗೆ ಜಾತ್ರೆಯ ಆಯ-ವ್ಯಯ ಪತ್ರ ನೀಡದೆ ಲಕ್ಷಾಂತರ ಹಣ ವಂಚಿಸಿ, ಅಕ್ರಮವಾಗಿ ಭಕ್ತರ ಹಣ ದೋಚುವ ಹುನ್ನಾರ ನಡೆದಿದೆ. ಇದು ಕಳೆದ ಸುಮಾರು 20 ವರ್ಷಗಳಿಂದ ನಿರಂತರವಾಗಿ ನಡೆದಿದ್ದರೂ, ಸಂಬಂಧಪಟ್ಟ ಯಾವುದೇ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ಭಕ್ತಾದಿಗಳ ಸಕೇದಾಶ್ರ‍್ಯಕ್ಕೆ ಕಾರಣವಾಗಿದೆ. ಈ ಕುರಿತು ಶೀಘ್ರವಾಗಿ ತನಿಖೆ ನಡೆಸಿ, ಭಕ್ತರ ನಂಬಿಕೆಗಳಿಗೆ ಚ್ಯುತಿಬಾರದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಮೇಶ್ವರ ದೂದೂರು, ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಗಣೇಶ್ ಬೆಳ್ಳಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಉದ್ಯಮಿ ಬಿ.ಜಿ.ನಾಗರಾಜ್ ತಹಶೀಲ್ದಾರ್ ರಶ್ಮಿ ಅವರಿಗೆ ಮನವಿಪತ್ರ ಸಲ್ಲಿಸುವ ಮೂಲಕ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಪತ್ರಕರ್ತ/ಸಾಮಾಜಿಕ ಹೋರಾಟಗಾರ ಗಣೇಶ್ ಬೆಳ್ಳಿ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಪಟ್ಟಣದ ಶ್ರೀ ಮಾರಿಕಾಂಬಾ ಜಾತ್ರೆ ಆಚರಣೆ ಸಮಿತಿಗೆ ಸುಮಾರು 65 ವರ್ಷಗಳ ಇತಿಹಾಸವಿದೆ. ಸೀನಪ್ಪ ಶೆಟ್ಟಿ ಅವರಿಂದ ಆರಂಭಗೊಂಡು ನಂತರದಲ್ಲಿ ನರಸಿಂಹಯ್ಯ, ಸರ್ಕಲ್ ಶ್ರೀನಿವಾಸ್, ಸುಬ್ರಾವ್, ಪಿ.ಆರ್. ಸಂಜೀವಾ, ಮಹಾಬಲರಾವ್, ನಿಂಗಮೂರ್ತಿ, ಕೆ.ಗೋವಿಂದಪ್ಪ, ಮಹಾಬಲ ಸೇರಿದಂತೆ ಹಲವರು ದೇವಸ್ಥಾನ/ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿ ಅದ್ದೂರಿಯಾಗಿ ಶ್ರೀ ದೇವಿಯ ಗದ್ದುಗೆ ನಿರ್ಮಿಸಿದ್ದು ಈಗ ಇತಿಹಾಸ. ನಾಗರಾಜು ನಂತರದಲ್ಲಿ ಕಳೆದ 20 ವರ್ಷಗಳ ಹಿಂದಿನಿಂದ ಲಕ್ಷ್ಮಿನಾರಾಯಣ ಎಂಬುವವರು ದೇವಸ್ಥಾನದ ಆಡಳಿತ ಹಾಗೂ ಜಾತ್ರಾ ಸಮಿತಿಯ ಅಧ್ಯಕ್ಷತೆ ವಹಿಸಿದ್ದು, ಈವರೆಗೂ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ಆಡಳಿತ ಸಮಿತಿ ಅಧಿಕೃತವಾಗಿ ನೊಂದಣಿ ಆಗಿಲ್ಲ. ವಾರ್ಷಿಕ ಲೆಕ್ಕಪತ್ರವನ್ನು ಸಾರ್ವಜನಿಕಗೊಳಿಸಿಲ್ಲ. ಪ್ರತಿ ವರ್ಷದ ಜಾತ್ರೆಯ ವಾರ್ಷಿಕ ಆಡಳಿತ ವರದಿಯಾಗಲಿ, ಉಳಿತಾಯ ಕುರಿತಂತೆ ಸಾರ್ವಜನಿಕವಾಗಿ ಗುಟ್ಟು ಕೊಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಹೊಸನಗರ ಉಪ ನೊಂದಣಿ ಕಚೇರಿಯಲ್ಲಿ ಈ ಸಂಬಂಧ ನೂತನ ಟ್ರಸ್ಟ್ ನೊಂದಣಿ ಆಗಿದ್ದರೂ, ನೊಂದಾಯಿತಿ ಸಮಿತಿಯಲ್ಲಿ ಸರ್ಕಾರದ ಕಾಯ್ದೆಯ ಆದೇಶಗಳನ್ನು ಗಾಳಿಗೆ ತೂರಿದ್ದು, ಒಂದೇ ಕುಟುಂಬ/ಜಾತಿಯ ಸುಮಾರು ಎಂಟು ಮಂದಿಗೆ ಸಮಿತಿಯಲ್ಲಿ ಮಣೆ ಹಾಕಲಾಗಿದೆ. ಬೆರಳೆಣಿಕೆ ಮಾತ್ರಕ್ಕೆ ತಮ್ಮ ಹಿತ ಕಾಪಾಡುವ ಕೆಲವೇ ಸದಸ್ಯರನ್ನು ಸಮಿತಿಯಲ್ಲಿ ಸರ‍್ಪಡೆಗೊಳಿಸಲಾಗಿದೆ. ಸಮಿತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಮೀಸಲಾತಿಯನ್ನು ಕಡೆಗಣಿಸಲಾಗಿದೆ. ಮೇಲ್ನೋಟಕ್ಕೆ ಕೇವಲ ಒಂದು ವರ್ಗ/ಜಾತಿ/ಕುಟುಂಬಕ್ಕೆ ದೇವಸ್ಥಾನ ನೂತನ ಟ್ರಸ್ಟ್ ನೊಂದಣಿ ಆದಂತೆ ತೋರಿಬರುತ್ತಿದೆ. ಅಲ್ಲದೆ, ಜಾತ್ರಾ ಮಹೋತ್ಸವದಿಂದ ವಾರ್ಷಿಕ ಒಂದು ಕೋಟಿಗೂ ಅಧಿಕ ಆದಾಯವಿದ್ದು, ಪಟ್ಟಣ ಪಂಚಾಯತಿಗೆ ಸೇರಿದ 11 ವಾರ್ಡ್‌ನಲ್ಲಿ ನಡೆಯುವ ಜಾತ್ರೆಗೆ ಬರುವ ವ್ಯಾಪಾರಿಗಳಿಂದ ನೆಲಬಾಡಿಗೆ ರೂಪದಲ್ಲಿ 10×10 ಅಡಿ ಸ್ಥಳ ಒಂದಕ್ಕೆ ರೂ. 2 ಸಾವಿರ ಹಣ ಅಕ್ರಮ ವಸೂಲಾತಿ ನಡೆದಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ನಿರಂತರವಾಗಿ ಕೇಳಿ ಬರುತ್ತಲೇ ಇದೆ. ಪಟ್ಟಣ ಪಂಚಾಯತಿ ಆಸ್ತಿಯನ್ನು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಜಾತ್ರಾ ಮಹೋತ್ಸವ ಆಚರಣಾ ಸಮಿತಿಯು ಅಕ್ರಮವಾಗಿ ಸದ್ಬಳಕೆ ಮಾಡಿಕೊಳ್ಳುತ್ತ ಲಕ್ಷಾಂತರ ಹಣ ಬಾಡಿಗೆ ವಸೂಲಿಗೆ ಮುಂದಾಗಿದೆ. ಇದರಲ್ಲಿ ಪಟ್ಟಣ ಪಂಚಾಯತಿ ಆಡಳಿತ ಸಮಿತಿಯ ಕೈವಾಡ ಸಹ ಇದೆ ಎಂಬ ಸಂಶಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಜಾತ್ರೆಯಲ್ಲಿನ ವ್ಯಾಪಾರಿಗಳಿಗೆ ನೀಡುವ ವಿದ್ಯುತ್ ಸಂಪರ್ಕದಿಂದ ಕೆಲವು ಸಮಿತಿ ಸದಸ್ಯರು ಪ್ರತಿದಿನ ಅಕ್ರಮ ಬಾಡಿಗೆ ವಸೂಲಿಗೆ ಮುಂದಾಗುತ್ತಾರೆ. ಈ ಎಲ್ಲಾ ಕಾರಣಗಳಿಂದ ಪಟ್ಟಣ ಪಂಚಾಯತಿಗೆ ಸೇರಿದ್ದ ಜಾಗದಲ್ಲಿ ನಡೆಯವ ಜಾತ್ರೆಗೆ ಬರುವ ವ್ಯಾಪಾರಿಗಳಿಗೆ ಸ್ಥಳೀಯ ಆಡಳಿತ ಬಹಿರಂಗ ಹರಾಜಿನ ಮೂಲಕ ಸ್ಥಳಾವಕಾಶ ಕಲ್ಪಿಸಿ, ಪಂಚಾಯತ್ತಿಗೆ ಬರುವ ಆದಾಯವನ್ನು ಹೆಚ್ಚಿಸಿಕೊಳ್ಳುಬೇಕು. ವಿದ್ಯುತ್ ಸಂಪರ್ಕವನ್ನು ಓರ್ವ ಗುತ್ತಿಗೆದಾರನಿಗೆ ನಿಗದಿತ ಆದಾಯಕ್ಕೆ ನಿಗದಿಗೊಳಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಸಾರ್ವಜನಿಕರ ಆಸ್ತಿಯಾದ ಈ ದೇವಸ್ಥಾನಕ್ಕೆ ಸದಸ್ಯತ್ವ ನೊಂದಣಿ ಅಭಿಯಾನದ ಬಳಿಕ ಮುಜರಾಯಿ ಇಲಾಖೆಗೆ ಹಸ್ತಾಂತರಿಸಿ ಬಳಿಕ ಆಡಳಿತ ಸಮಿತಿ ರಚನೆಗೆ ಜಿಲ್ಲಾಡಳಿತ ಮಂದಾಗಬೇಕು. ಟ್ರಸ್ಟ್ ಕಾಯ್ದೆ ಅಡಿಯಲ್ಲಿ ನೊಂದಾವಣೆ ಆಗದ ಅಕ್ರಮ ಟ್ರಸ್ಟ್ ಅನ್ನುನ್ನು ತತಕ್ಷಣ ವಜಾಗೊಳಿಸಬೇಕು. ಈ ಎಲ್ಲಾ ಕಾರ್ಯಗಳನ್ನು ಜಿಲ್ಲಾಡಳಿತ ಬರುವ ಫೆಬ್ರವರಿ 4ರ ಜಾತ್ರಾ ಮಹೋತ್ಸವದ ದಿನದೊಳಗೆ ಜಾರಿಗೊಳಿಸಬೇಕು. ತಪ್ಪಿದಲ್ಲಿ ತಹಶೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]