ಅವಳಿ ಸಹೋದರಿಯರಿಗೆ ಪಿಯುಸಿಯಲ್ಲಿ ಸಮಾನ ಅಂಕ

0 6,587

ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕ ಪಡೆದು ಫಲಿತಾಂಶದಲ್ಲೂ ಹೋಲಿಕೆ ಮೆರೆದ ಸಹೋದರಿಯರು…..

ಕಳಸ : ಅವಳಿ ಸಹೋದರಿಯರಿಬ್ಬರು ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಸಮಾನ ಅಂಕ ಪಡೆಯುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

ಇಲ್ಲಿನ ಮುನ್ನೂರುಪಾಲು ಅವಳಿ ಸಹೋದರಿಯರ ಪೈಕಿ ಹಿತಾ ಹೆಬ್ಬಾರ್ ಮತ್ತು ಹರ್ಷಿತಾ ಹೆಬ್ಬಾರ್ ಸಮಾನ ಅಂಕ ಗಳಿಸಿ ರಿಸಲ್ಟ್ ನಲ್ಲೂ ಹೋಲಿಕೆ ಮೆರೆದು ಗಮನ ಸೆಳೆದಿದ್ದಾರೆ.

ಮೂಡಬಿದಿರೆಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಅವಳಿ ಜವಳಿಗಳಾದ ಹರ್ಷಿತಾ ಹೆಬ್ಬಾರ್ ಮತ್ತು ಹಿತಾ ಹೆಬ್ಬಾರ್ ಈ ಬಾರಿ ಪಿಯುಸಿಯಲ್ಲಿ ತಲಾ 576 ಅಂಕ ಪಡೆಯುವ ಮೂಲಕ ಶೇ.96 ಫಲಿತಾಂಶ ಪಡೆದಿದ್ದಾರೆ.


ಮೂಲತಃ ಕಳಸ ಮುನ್ನೂರುಪಾಲು ನಿವಾಸಿ ಕೃಷಿಕ ಅರುಣ್ ಮತ್ತು ಸಂಧ್ಯಾ ದಂಪತಿಯ ಅವಳಿ ಮಕ್ಕಳ ಪೈಕಿ ಹಿತಾ ಹೆಬ್ಬಾರ್ ವಿಜ್ಞಾನ ವಿಭಾಗ ಮತ್ತು ಹರ್ಷಿತಾ ಹೆಬ್ಬಾರ್ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದವರು. ಹರ್ಷಿತಾ ಎಕನಾಮಿಕ್ಸ್ ನಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದು, ಹಿತಾ ಸಂಸ್ಕೃತ ಜೊತೆಗೆ ಗಣಿತದಲ್ಲೂ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

ಬೇರೆ ಬೇರೆ ಕೋರ್ಸ್ ಆಯ್ದುಕೊಂಡ ಈ ಅವಳಿಗಳ ಪೈಕಿ ಹರ್ಷಿತಾ ಬಿಕಾಂ ಪದವಿ ಪಡೆದು ಜತೆಗೆ ಎಸಿಸಿಎ ತರಬೇತಿಗೆ ಆಸಕ್ತರಾಗಿದ್ದಾರೆ. ಹಿತಾ ಸಿಇಟಿ ಮೂಲಕ ಎಂಜಿನಿಯರಿಂಗ್ ಕಲಿಕೆಯ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!