ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದ ಮತ್ತೊಬ್ಬ ಈಶ್ವರಪ್ಪ !

0 151

ಶಿವಮೊಗ್ಗ : ಶಿವಮೊಗ್ಗದಲ್ಲಿ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಡಿ.ಎಸ್‌.ಈಶ್ವರಪ್ಪ ಎಂಬುವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದು ಎಲ್ಲರ ಗಮನ ಸೆಳೆದಿದೆ.

ಶಿಕಾರಿಪುರದ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ಡಿ.ಎಸ್.ಈಶ್ವರಪ್ಪ ಅವರು ಮಂಗಳವಾರ ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಇದೊಂದು ರಾಜಕೀಯ ತಂತ್ರಗಾರಿಕೆ ಎಂದು ಕ್ಷೇತ್ರದಲ್ಲಿ ಗುಸು-ಗುಸು ಕೇಳಿ ಬರುತ್ತಿದೆ.

ಡಿ.ಎಸ್. ಈಶ್ವರಪ್ಪ ಒಟ್ಟು 27 ಲಕ್ಷ ರೂಪಾಯಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಡಿ.ಎಸ್. ಈಶ್ವರಪ್ಪ ಪತ್ನಿಯ ಹೆಸರಿನಲ್ಲಿ 10 ಎಕರೆ ಜಮೀನು ಹೊಂದಿದ್ದಾರೆ. ಹೆಸರಿನ ಆರಂಭದಲ್ಲಿ ಡಿ.ಎಸ್. ಇರೋ ಕಾರಣ ಕೆ.ಎಸ್. ಈಶ್ವರಪ್ಪ ಅವರಿಗೆ ತೊಂದರೆ ಆಗುತ್ತಾ ಎಂಬ ಪ್ರಶ್ನೆಯೊಂದು ಸಹಜವಾಗಿ ಮೂಡಿದೆ.

Leave A Reply

Your email address will not be published.

error: Content is protected !!