Model Code of Conduct | ಮಾದರಿ ನೀತಿ ಸಂಹಿತೆ

0 45

ಚಿಕ್ಕಮಗಳೂರು : ಲೋಕಸಭಾ ಸಾರ್ವತ್ರಿಕ ಚುನಾವಣೆ 2024ಕ್ಕೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಕೊನೆಯ 72 ಗಂಟೆ ಮತದಾರರ ಮೇಲೆ ಪ್ರಭಾವ ಬೀರಿಸುವಂತಹ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಹೆಚ್ಚುವರಿ FST/SST/Police/Excise ತಂಡಗಳನ್ನು ರಚಿಸಲಾಗಿದೆ.

ಮತದಾರರಿಗೆ ಹಂಚಿಕೆ ಮಾಡಲು ಹೊರ ಜಿಲ್ಲೆಗಳಿಂದ ಆಗಮಿಸುವ ಹಣ, ಮದ್ಯ, ಉಚಿತ ಕಾಣಿಕೆಗಳು ವಗೈರೆಗಳನ್ನು ತಡೆಯಲು ಗಡಿ ನಾಕಾಗಳನ್ನು ಸಶಕ್ತಗೊಳಿಸಲಾಗಿದೆ.

ಕೊನೆಯ 48 ಗಂಟೆ 05 ಜನಕ್ಕಿಂತ ಹೆಚ್ಚಿನ ಜನ ಸೇರದಂತೆ ಸಿಆರ್.ಪಿಸಿ ಕಲಂ 144 ರಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಧ್ವನಿವರ್ಧಕಗಳ ಬಳಕೆಗೆ ನಿಷೇಧ ಇರುತ್ತದೆ. Dry day declared ಮಾಡಲಾಗಿದೆ.

ಈ ಲೋಕಸಭಾ ಕ್ಷೇತ್ರದ ಮತದಾರರನ್ನು ಹೊರತುಪಡಿಸಿ ಇತರೇ ಯಾವುದೇ ರಾಜಕೀಯ ಮುಖಂಡರುಗಳು ಅಥವಾ ಸ್ಟಾರ್ ಕ್ಯಾಂಪೇನರ್ಸ್ಗಳು ಕ್ಷೇತ್ರದಲ್ಲಿ ಇರತಕ್ಕದಲ್ಲ. Opinion Poll & Exit Polls ಗಳಿಗೆ ಅವಕಾಶವಿರುವುದಿಲ್ಲ. ಎಲ್ಲಾ ರೀತಿ ಬಹಿರಂಗ ಪ್ರಚಾರಕ್ಕೆ ಅಂತ್ಯ.

ಸಾಮಾಜಿಕ ಜಾಲತಾಣ, ಪ್ರಿಂಟ್ ಮೀಡಿಯಾ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಅಂತ್ಯ.
ಕೊನೆಯ 24 ಗಂಟೆ ಕೇವಲ 03 ವಾಹನಗಳಿಗೆ ಮಾತ್ರ ಅನುಮತಿ ಊರ್ಜಿತ ಒಂದು ಅಭ್ಯರ್ಥಿಗೆ, ಒಂದು ಚುನಾವಣೆ ಏಜೆಂಟ್ ಮತ್ತು ಹೆಚ್ಚುವರಿಯಾಗಿ ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಂದು ವಾಹನ. ಅಭ್ಯರ್ಥಿಯ ಅನುಪಸ್ಥಿತಿಯಲ್ಲಿ ಅಭ್ಯರ್ಥಿಗೆ ನೀಡಿದ ವಾಹನ ಉಪಯೋಗಿಸತಕ್ಕದ್ದಲ್ಲ. ಅನುಮತಿಸಿದ ವಾಹನಗಳಲ್ಲಿ 05 ಜನಕ್ಕಿಂತ ಹೆಚ್ಚಿನ ಜನರು ಪ್ರಯಾಣಿಸ ತಕ್ಕದ್ದಲ್ಲ. ಮತಗಟ್ಟೆ 100 ಮೀ ಅಂತರದೊಳಗೆ ಮೊಬೈಲ್ ಬಳಕೆ ನಿಷೇಧಿಸಿದೆ. ರಾಜಕೀಯ ಪಕ್ಷಗಳ ಹೆಸರು, ಚಿಹ್ನೆವುಳ್ಳ ಕ್ಯಾಪ್, ಶಾಲು, ಟಿ-ಶರ್ಟ್, ಬ್ಯಾಡ್ಜ್ ಇತ್ಯಾದಿಗಳನ್ನು ಧರಿಸಿ ಮತಗಟ್ಟೆಯೊಳಗೆ ಅಥವಾ ಮತದಾನ ಮಾಡಲು ಅವಕಾಶ ಇರುವುದಿಲ್ಲ. ಮತಗಟ್ಟೆಯಿಂದ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತಾತ್ಕಾಲಿಕ ರಾಜಕೀಯ ಪ್ರಚಾರ ಕಚೇರಿಗಳನ್ನು ತೆರೆಯತಕ್ಕದ್ದಲ್ಲ. ತಾತ್ಕಾಲಿಕ ಪ್ರಚಾರ ಕಛೇರಿಗಳಲ್ಲಿ ಪಕ್ಷದ ಚಿಹ್ನೆ ಅಥವಾ ಭಾವಚಿತ್ರವುಳ್ಳ ಕೇವಲ ಒಂದು ಪಕ್ಷದ ಧ್ವಜ ಮತ್ತು ಬ್ಯಾನರ್ ಅಳವಡಿಸಬಹುದು.

ಸ್ಥಳೀಯ ಸಂಸ್ಥೆಗಳ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದ ಗಾತ್ರ ಅಥವಾ ಗರಿಷ್ಠ 4 feet X 8 feet ವಿಸ್ತೀರ್ಣದ ಬ್ಯಾನರ್ ಮಾತ್ರ ಉಪಯೋಗಿಸಲು ಅವಕಾಶವಿರುತ್ತದೆ. ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಅಥವಾ ಧಾರ್ಮಿಕ ಸಂಸ್ಥೆಯ ಆವರಣದಲ್ಲಿ ಪ್ರಚಾರ ಕಛೇರಿಗಳನ್ನು ತೆರೆಯಲು ನಿರ್ಬಂಧವಿರುತ್ತದೆ.

ಮತದಾನ ದಿನ ಅನುಸರಿಸಬೇಕಾದ ಪ್ರಚಾರ ಶಿಷ್ಟಾಚಾರ ಮತಗಟ್ಟೆಯ 100 ಮೀ ವ್ಯಾಪ್ತಿಯೊಳಗೆ ಎಲ್ಲಾ ರೀತಿಯ ಪ್ರಚಾರ ನಿಷೇಧ ಮತ್ತು ಮತಗಟ್ಟೆಯೊಳಗೆ ಮೊಬೈಲ್ ಬಳಕೆ ನಿಷೇಧವಿರುತ್ತದೆ. ಮತದಾರರ ಸೌಲಭ್ಯಕ್ಕಾಗಿ ಮತಗಟ್ಟೆಗೆ ತೆರಳಲು ಬಾಡಿಗೆ ಅಥವಾ ಯಾವುದೇ ವಾಹನ ಉಪಯೋಗಿಸತಕ್ಕದ್ದಲ್ಲ.

ಪೊಲೀಂಗ್ ಏಜೆಂಟ್ :
ಪ್ರತಿ ಮತಗಟ್ಟೆಗೆ 01 Polling Agent ಮತ್ತು 02 Relieve Agents  ನೇಮಕ ಮಾಡಲು ಅವಕಾಶವಿರುತ್ತದೆ. ಮತದಾನದ ದಿನದಂದು Polling Agent ಕಡ್ಡಾಯವಾಗಿ ಮತದಾನ ಆರಂಭವಾಗುವ 90 ನಿಮಿಷಗಳ ಪೂರ್ವದಲ್ಲಿ ಗುರುತಿನ ಚೀಟಿಯೊಂದಿಗೆ ಮತಗಟ್ಟೆಯಲ್ಲಿ ಹಾಜರಿರತಕ್ಕದ್ದು. Polling Agent ಗಳು ಮತಗಟ್ಟೆಯಲ್ಲಿ ನಿರ್ದಿಷ್ಟಪಡಿಸಿದ ಸ್ಥಳದಲ್ಲಿಯೇ ಆಸೀನ ರಾಗತಕ್ಕದ್ದು. ಮತಗಟ್ಟೆಯಲ್ಲಿ ಜನಪ್ರತಿನಿಧಿ ಕಾಯ್ದೆ 1951 ಕಲಂ 128 ರಲ್ಲಿ ನಿರ್ದಿಷ್ಟಪಡಿಸಿದಂತೆ ಮತದಾನ ಗೌಪ್ಯತೆಯನ್ನು ಕಾಪಾಡತಕ್ಕದ್ದು.

ರಾಜಕೀಯ ಪಕ್ಷಗಳು :
ಮತಗಟ್ಟೆ ಕರ್ತವ್ಯದ ಮೇಲಿರುವ ಅಧಿಕಾರಿಗಳೊಂದಿಗೆ ಸಭ್ಯವಾಗಿ ವರ್ತಿಸಬೇಕು. ಮತಗಟ್ಟೆಯ ವ್ಯಾಪ್ತಿಯಿಂದ 200 ಮೀ ದೂರದಲ್ಲಿರುವ ರಾಜಕೀಯ ಪಕ್ಷಗಳ ಟೆಂಟುಗಳು ಕೇವಲ ಇಬ್ಬರು ಕಾರ್ಯಕರ್ತರಿಗೆ ಸಾಕಾಗುವಷ್ಟು ಗಾತ್ರದ ಟಾರ್ಪೋಲಿನ್ ಅಥವಾ ಛತ್ರಿವುಳ್ಳ ಮೇಲ್ಛಾವಣಿ, 02 ಕುರ್ಚಿ 01 ಮೇಜು ಹೊಂದಿರತಕ್ಕದ್ದು. ಈ ಟೆಂಟುಗಳು ಕೇವಲ ಮತದಾರರಿಗೆ Identity Slips ನೀಡುವ ಉದ್ದೇಶಕ್ಕಾಗಿ ಮಾತ್ರ. ಈ ಟೆಂಟುಗಳು ಸ್ಥಾಪಿಸುವ ಪೂರ್ವದಲ್ಲಿ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಕ್ತ ಮಾಹಿತಿಯನ್ನು ನೀಡತಕ್ಕದ್ದು ಒಂದೇ ಒಂದು 3X4 1/2 ಚ.ಅಡಿ ವಿಸ್ತೀರ್ಣದ ಅಭ್ಯರ್ಥಿಯ ಹೆಸರು, ಪಕ್ಷ ಮತ್ತು ಚುನಾವಣೆ ಚಿಹ್ನೆವುಳ್ಳ ಒಂದು ಬ್ಯಾನರ್ ಅಳವಡಿಸಲು ಅವಕಾಶವಿರುತ್ತದೆ.

ಈ ಟೆಂಟುಗಳಲ್ಲಿ ಜನಸಂದಣಿ ಅಥವಾ ಮತದಾನ ಮಾಡಿದ ಮತದಾರರು ಜಮಾಯಿಸತಕ್ಕದ್ದಲ್ಲ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಲೋಕಸಭಾ ಸಾರ್ವತ್ರಿಕ ಚುನಾವಣೆ  : ಮತದಾರರಿಂದ ಮತದಾನ ಮಾಡಲು ಸಾರ್ವತ್ರಿಕ ರಜೆ
ಚಿಕ್ಕಮಗಳೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ   2024ರ ಮತದಾನವು ಜಿಲ್ಲೆಯಲ್ಲಿ ಏಪ್ರಿಲ್ 26 ರಂದು ನಡೆಯಲಿದ್ದು, ಮತದಾನ ಮಾಡಲು ಅನುಕೂಲವಾಗುವಂತೆ ಅಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!