ಸ್ಪರ್ಧಾ ಸಂಗಮ -2025 ಕೊಡಚಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಚಾಂಪಿಯನ್ಸ್

Written by malnadtimes.com

Published on:

ಹೊಸನಗರ ; ಇತ್ತೀಚೆಗೆ ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬಾಪೂಜಿ ನಗರದಲ್ಲಿ ನಡೆದ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿಯನ್ನು ಪಡೆಯುವುದರೊಂದಿಗೆ ಚಾಂಪಿಯನ್ಸ್ ಆಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಒಟ್ಟು ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆ ;

ಜನಪದ ನೃತ್ಯದಲ್ಲಿ ; ರಂಜನ್ ಹೆಚ್. ಎಸ್. ಶರತ್ ಹೆಚ್. ಎಸ್. ಅಮಿತ್ ವೈ. ಎನ್. ಸೀಮಾ ಎನ್.ಎಸ್. ರಶ್ಮಿತಾ ಜಿ.ಜಿ. ಯಶವಂತ ಎಂ. ಎಸ್. ಸಂದೀಪ ಎಮ್. ಎಸ್. ಉಲ್ಲಾಸ ಎಂ. ಕೆ. ಇವರು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ; ಅವಿನಾಶ್ ಹೆಚ್. ಆರ್. ಮತ್ತು ಆದಿತ್ಯ ಎಂ. ದ್ವಿತೀಯ ಸ್ಥಾನ ಪಡೆದುಕೊಂಡರು.

ಜನಪದ ಗೀತೆಯಲ್ಲಿ ; ರಂಜನ್ ಹೆಚ್. ಎಸ್. ಅಮಿತ್ ವೈ. ಎನ್. ಸಮರ್ಥ ಕೆ. ನಿಶ್ಮಿತ ಎಸ್. ಪೂಜಾರಿ ಚಂದನ ಕೆ. ಎಂ.
ಭಾವಗೀತೆಯಲ್ಲಿ ; ನಿಶ್ಮಿತ ಎಸ್. ಪೂಜಾರಿ ಸ್ಪರ್ಧಿಸಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡರು.

ಮಲೆನಾಡಿನ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಉಮೇಶ್ ಕೆ. ಹಾಗೂ ಪ್ರಾಧ್ಯಾಪಕವೃಂದ ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಗೂ ಕಾಲೇಜಿನ ಬೋಧಕ ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

Leave a Comment