ತೃತೀಯ ಭಾಷೆ ಅಂಕ ಪರಿಗಣಿಸಿ ; ಹೊಸನಗರ ತಹಸೀಲ್ದಾರ್ ಭರತ್‌ರಾಜ್‌ಗೆ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನವಿ

Written by Mahesha Hindlemane

Published on:

ಹೊಸನಗರ ; ರಾಜ್ಯದ ಪ್ರೌಢಶಾಲಾ ವಿದ್ಯಾರ್ಥಿಗಳ ತೃತೀಯ ಭಾಷೆ (ಹಿಂದಿ) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.31ರ ಮಂಗಳವಾರ ನಡೆದಿದ್ದು ನಮಗೆ ಸರ್ಕಾರ ಸೂಚಿಸಿರುವ ಗ್ರೇಡಿಂಗ್ ಅಂಕದ ಬದಲಾಗಿ ಪರೀಕ್ಷೆ ಬರೆದ ಅಂಕವನ್ನೇ ನೀಡಬೇಕೆಂದು ಹೊಸನಗರದ ಸರ್ಕಾರಿ ಜೂನಿಯರ್ ಕಾಲೇಜ್ ವಿಭಾಗದ ಪ್ರೌಢ ಶಾಲಾ ವಿದ್ಯಾರ್ಥಿಗಳು ಹೊಸನಗರ ತಹಸೀಲ್ದಾರ್ ಭರತ್‌ರಾಜ್‌ರಿಗೆ ಮನವಿ ಪತ್ರ ಸಲ್ಲಿಸಿ ಮನವಿಪತ್ರವನ್ನು ಸರ್ಕಾರಕ್ಕೆ ಕಳುಹಿಸಬೇಕೆಂದು ಕೇಳಿಕೊಂಡರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮನವಿ ಪತ್ರದಲ್ಲಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ತೃತೀಯ ಭಾಷೆಯ (ಹಿಂದಿ) ಅಂಕಗಳನ್ನು ಅಂತಿಮ ಫಲಿತಾಂಶದಲ್ಲಿ ಪರಿಗಣಿಸದಂತೆ ಸರ್ಕಾರ ತೆಗೆದುಕೊಂಡಿರುವ ಏಕಪಕ್ಷೀಯ ತೀರ್ಮಾನ ಪ್ರಸ್ತುತ ವಿದ್ಯಾರ್ಥಿಗಳ ಸಮಗ್ರ ವಿದ್ಯಾಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತೃತೀಯ ಭಾಷೆಯ ವಿದ್ಯಾರ್ಥಿಗಳ ಭಾಷಾ ಸಾಮಥ್ಯವನ್ನು ವೃದ್ಧಿಸುವುದಲ್ಲದೇ ವಿವಿಧ ಸಂಸ್ಕೃತಿಗಳ ಅರಿವು ಮತ್ತು ಸಂವಹನ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ. ನಾವು ಕಲಿಯುವ ಮೂರು ಭಾಷೆಗಳಿಗೂ ಸರಿ ಸಮನಾದ ಮಾನ್ಯತೆ ನೀಡುವುದು ಶೈಕ್ಷಣಿಕವಾಗಿ ನ್ಯಾಯ ಸಮ್ಮತವಾಗಿದೆ. ನಾವು ತರಗತಿಯಲ್ಲಿ ಓದಿ ಕಲಿತ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಿ ಅಂಕಗಳ ಆಧಾರದಲ್ಲಿ ಫಲಿತಾಂಶ ನೀಡುವುದು ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು ಗ್ರೇಡಿಂಗ್ ನೀಡುವುದರಿಂದ ನಮ್ಮ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಗ್ರೇಡಿಂಗ್ ರದ್ದುಪಡಿಸಿ ನಮಗೆ ನಾವು ಪರೀಕ್ಷೆಯಲ್ಲಿ ಬರೆದ ಅಂಕವನ್ನು ನೀಡಬೇಕೆಂದು ತಿಳಿಸಿದ್ದಾರೆ.

Leave a Comment