ಅಪರಾಧ ಸುದ್ದಿ

Crime News | ಹಾರುಬೆಕ್ಕು ಬೇಟೆ, ಓರ್ವನ ಬಂಧನ !

HOSANAGARA | ಹಾರುಬೆಕ್ಕನ್ನು (Flying Cat) ಬೇಟೆಯಾಡಿದ್ದ (Hunting) ಆರೋಪಿಯನ್ನು ಬಂಧಿಸಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನ ನಗರ ವಲಯ ಅರಣ್ಯ ವ್ಯಾಪ್ತಿಯ ಹುಂಚ ಹೋಬಳಿಯ ಬಾಳೆಕೊಪ್ಪ ಗ್ರಾಮದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಅಧಿಕೃತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ಅಳಿವಿನಂಚಿನಲ್ಲಿರುವ ಅಪರೂಪದ ವನ್ಯಜೀವಿ ಹಾರುಬೆಕ್ಕನ್ನು ಅಕ್ರಮವಾಗಿ ಬೇಟೆಯಾಡಿದ ಆರೋಪದ ಮೇಲೆ ಓರ್ವನ್ನು ಬಂಧಿಸಲಾಗಿದೆ.

ಹುಂಚ ಹೋಬಳಿಯ ಬಾಳೆಕೊಪ್ಪ ಸರ್ವೇ ನಂಬರ್ 17 ರ ಕೃಷಿ ಜಮೀನಿನಲ್ಲಿ ಹಾರು ಬೆಕ್ಕನ್ನು ಬೇಟೆಯಾಡಿದ್ದ ಸತೀಶ್ ಬಿನ್ ಶೇಷನಾಯ್ಕನನ್ನು ಮಾಲು ಸಹಿತ ನಗರ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಶಕ್ಕೆ ಪಡೆದು ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕೆಂಚಪ್ಪನವರ್ ಅವರ ಮಾರ್ಗದರ್ಶನದಲ್ಲಿ, ಹೊಸನಗರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ನಿರ್ದೇಶನದಂತೆ, ನಗರ ವಲಯ ಅರಣ್ಯಾಧಿಕಾರಿ ಸಂತೋಷ್ ಮಲ್ಲನಗೌಡ, ಉಪವಲಯ ಅರಣ್ಯಾಧಿಕಾರಿಗಳಾದ ಟಿ.ಪಿ.ನರೇಂದ್ರ ಕುಮಾರ್, ಸತೀಶ್, ಸತೀಶ್ ನಾಯಕ್, ಅಮೃತ ಸುಂಕದ್, ಗಸ್ತು ಅರಣ್ಯ ರಕ್ಷಕರಾದ ಯೋಗರಾಜ್, ಆಂಜನೇಯ, ಮನೋಜ್ ಹಾಗು ವಾಹನ ಚಾಲಕ ರಾಮು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

SHIVAMOGGA | ಬೃಹತ್ ಪ್ರಮಾಣದ ಶೀತಲೀಕರಣ ಘಟಕ ಮತ್ತು ಫುಡ್ ಪಾರ್ಕ್ ಆರಂಭಿಸಲು ಚಿಂತನೆ ; ಸಚಿವ ಮಧು ಬಂಗಾರಪ್ಪ

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]