ಕಲ್ಲೂರು ಸುತ್ತಮುತ್ತ ಕಾಡಾನೆಗಳಿಂದ ಬೆಳೆ ನಾಶ ; ಆತಂಕದಲ್ಲಿ ರೈತರು !

Written by malnadtimes.com

Published on:

RIPPONPETE ; ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲೂರು, ತಳಲೆ, ಕಗ್ಗಲಿಜಡ್ಡು ಸುತ್ತಮುತ್ತ ಕಾಡಾನೆಗಳು ಕಾಣಿಸಿಕೊಂಡು ರೈತರು ಬೆಳೆದ ಭತ್ತ, ಅಡಿಕೆ, ಬಾಳೆಗಿಡಗಳನ್ನು ನಾಶಗೊಳಿಸಿರುವ ಘಟನೆ ನಡೆದಿದ್ದು ರೈತ ನಾಗರೀಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

WhatsApp Group Join Now
Telegram Group Join Now
Instagram Group Join Now

ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.facebook.com/share/v/18nCZkLL4o

ಕಳೆದ ಕೆಲದಿನಗಳಿಂದ ಕಾಡಾನೆಗಳು ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಾರೋಹಿತ್ತಲು, ಬಸವಾಪುರ, ಕೋಣನಜಡ್ಡು, ಸೂಡೂರು, ಹೊರಬೈಲು, ಶೆಟ್ಟಿಕೆರೆ, ಕೊಳವಂಕ, ಬಟಾಣಿಜಡ್ಡು ಸುತ್ತಮುತ್ತ ಓಡಾಡುತ್ತಿವೆ ಎಂಬ ಭಯದಲ್ಲಿ ರೈತನಾಗರೀಕರು ಭಯಪಡುವತ್ತಾಗಿದ್ದು ಈಗ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬುಧವಾರ, ಗುರುವಾರ ರಾತ್ರಿ ಕಾಡಾನೆಗಳು ಕಾಣಿಸಿಕೊಳ್ಳುವುದರೊಂದಿಗೆ ಭತ್ತ ಮತ್ತು ಅಡಿಕೆ ತೋಟಗಳಲ್ಲಿ ಹಾದು ಹೋಗುವ ಮೂಲಕ ಬೆಳೆಗಳನ್ನು ತಿಂದು ಹಾನಿಗೊಳಿಸಿರುವುರುವುದು ರೈತರನ್ನು ನಿದ್ದೆಗೆಡಿಸುವಂತೆ ಮಾಡಿವೆ.

ಇನ್ನಾದರೂ ಅರಣ್ಯ ಇಲಾಖೆಯವರು ಇತ್ತ ಗಮನಹರಿಸಿ ಕಾಡಾನೆಗಳನ್ನು ಕೂಡಲೇ ಸ್ಥಳಾಂತರ ಮಾಡಿ ರೈತರ ಆತಂಕ ದೂರ ಮಾಡುವಂತೆ ಆಗ್ರಹಿಸಿದ್ದಾರೆ.

Leave a Comment