ರಿಪ್ಪನ್‌ಪೇಟೆ : ಇಲ್ಲಿನ ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷರಾಗಿ ಡಿ.ಈ.ಮಧುಸೂದನ್ ಆಯ್ಕೆಯಾಗಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಈ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮುಂದಿನ ಮೂರು ವರ್ಷದ ಅವಧಿಗೆ ಈ ಕೆಳಕಂಡವರನ್ನು ಪದಾಧಿಕಾರಿಗಳಾಗಿ ನೇಮಿಸಲಾಗಿದೆ.
ರವೀಂದ್ರ ಕೆರೆಹಳ್ಳಿ, ಶ್ರೀಧರ ಜೆ.ಆರ್, ಗಣೇಶರಾವ್ ಕೆರೆಹಳ್ಳಿ, ಹರೀಶ್ ಎಸ್.ಪ್ರಭು,(ಸಾಮಾನ್ಯ), ದೀಪಾ ಎಸ್ ಹೆಬ್ಬಾರ್, ಧನಲಕ್ಷ್ಮಿ (ಮಹಿಳೆಯರು), ಸ್ವಾಮಿ (ಪರಿಶಿಷ್ಟ ಜಾತಿ) ಹಾಗೂ ದೇವಸ್ಥಾನದ ಅರ್ಚಕರಾಗಿ ಶ್ರೀಶಾ ಎಂ.ಎಸ್.ಹೆಗಡೆ ಯವರು ಸೇರಿದಂತೆ 9 ಜನರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಆಯ್ಕೆಯಾಗಿದ್ದಾರೆಂದು ಹೊಸನಗರ ತಹಸೀಲ್ದಾರ್ ಕಛೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

