ರಿಪ್ಪನ್‌ಪೇಟೆ ; ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಸ್ತಿ ವಿನಾಶದತ್ತ ಸಾಗುತ್ತಿದೆ. ಕುಸ್ತಿ ಅಭ್ಯಾಸದಿಂದ ದೇಹದಲ್ಲಿನ ಸ್ನಾಯುಗಳು ಸದೃಢವಾಗುವ ಮೂಲಕ ದೈಹಿಕ ಸಾಮರ್ಥ್ಯವನ್ನು ವೃದ್ದಿಯಾಗುವುದರೊಂದಿಗೆ ಆರೋಗ್ಯವಂತರನ್ನಾಗಿಸುತ್ತದೆಂದು ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಎನ್.ಸತೀಶ್ ಹೇಳಿದರು.

ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ವಿಜಯದಶಮಿ ಅಂಗವಾಗಿ ಏರ್ಪಡಿಸಲಾಗಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಮಾತನಾಡಿದರು.

ಕುಕ್ಕಳಲೇ ಮುಗುಟಿಕೊಪ್ಪ ಸಿರಿ ಮತ್ತು ರಾಣೆಬೆನ್ನೂರು ಮಾರುತಿ, ಹಾಗೂ ಕೆರೆಹಳ್ಳಿ ಪರಶುರಾಮ ಮತ್ತು ಹನುಮಂತ ಇವರ ಕುಸ್ತಿ ಪ್ರದರ್ಶನ ರೋಚಕವಾಗಿದ್ದು ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.

ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ ಅಧ್ಯಕ್ಷ ಸುಧೀರ್ ಪಿ., ಎಂ.ಸುರೇಶಸಿಂಗ್, ರವೀಂದ್ರ ಕೆರೆಹಳ್ಳಿ, ಆರ್.ರಾಘವೇಂದ್ರ, ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಮುರುಳಿಧರ ಕೆರೆಹಳ್ಳಿ, ಶ್ರೀಧರ, ವೈ.ಜೆ.ಕೃಷ್ಣ, ಬಳೆಗಾರ ರಾಮಚಂದ್ರ, ನವೀನ ಗವಟೂರು, ಡಿ.ಈ.ರವಿಭೂಷಣ, ತೀರ್ಥೇಶ ಅಡಿಕಟ್ಟು, ಭೀಮರಾಜ್ ದೊಡ್ಡಿನಕೊಪ್ಪ ಇನ್ನಿತರರು ಪಾಲ್ಗೊಂಡಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.