ತೆಪ್ಪ ಮುಳುಗಿ ನೀರುಪಾಲಾಗಿದ್ದ ಮೂವರ ಮೃತದೇಹ ಪತ್ತೆ !

Written by malnadtimes.com

Published on:

N.R.PURA | ತೆಪ್ಪ ಮುಳುಗಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬೈರಾಪುರದ ಭದ್ರಾ ಹಿನ್ನೀರಿನಲ್ಲಿ (Bhadra Backwater) ನೀರುಪಾಲಾಗಿದ್ದ ಶಿವಮೊಗ್ಗ ಮೂಲದ ಮೂವರ ಮೃತದೇಹ ಇಂದು ಪತ್ತೆಯಾಗಿದೆ.

WhatsApp Group Join Now
Telegram Group Join Now
Instagram Group Join Now

ಮೃತರನ್ನು ಶಿವಮೊಗ್ಗದ ವಿದ್ಯಾನಗರ ನಿವಾಸಿಗಳಾದ ಆದೀಲ್, ಸಾಜೀದ್ ಹಾಗೂ ಅಫ್ದಾಖಾನ್ ಎಂದು ಗುರುತಿಸಲಾಗಿದೆ.

ಬುಧವಾರ ಶಿವಮೊಗ್ಗದ ವಿದ್ಯಾನಗರದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು ಜಿಲ್ಲೆಯ ಬೈರಾಪುರದಲ್ಲಿರುವ ಭದ್ರಾ ಹಿನ್ನೀರಿನ ಬಳಿ ಬಂದಿದ್ದಾರೆ. ಈ ವೇಳೆ ನಾಲ್ವರಲ್ಲಿ ಮೂವರು ತೆಪ್ಪದಲ್ಲಿ ತೆರಳಿದ್ದಾರೆ ಓರ್ವ ಮಾತ್ರ ದಡದಲ್ಲಿ ನಿಂತಿದ್ದ ಎನ್ನಲಾಗಿದೆ. ತೆಪ್ಪದಲ್ಲಿ ತೆರಳಿದ ಕೆಲವೇ ಹೊತ್ತಿನಲ್ಲಿ ತೆಪ್ಪ ಮುಳುಗಿ ಮೂವರು ನೀರುಪಾಲಾಗಿದ್ದರು. ಘಟನೆ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇತ್ತ ಮೂವರು ನೀರು ಪಾಲಾಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ರಾತ್ರಿ 8 ಗಂಟೆಯಾದರೂ ಮೂವರ ದೇಹಗಳು ಪತ್ತೆಯಾಗಿರಲಿಲ್ಲ. ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಿ ಗುರುವಾರ ಮತ್ತೆ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮೂವರ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.

ಮೃತದೇಹಗಳನ್ನು ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರಕ್ಕೆ ರವಾನೆ ಮಾಡಲಾಗಿದೆ.

Leave a Comment