ದೀಪಾವಳಿ ಹಿನ್ನೆಲೆ, ದುಬಾರಿ ದರದ ನಡುವೆಯೂ ಭರ್ಜರಿಯಾಗಿ ನಡೆದ ರಿಪ್ಪನ್‌ಪೇಟೆ ವಾರದ ಸಂತೆ !

Written by Mahesh Hindlemane

Published on:

RIPPONPETE ; ದೀಪಾವಳಿ ಹಬ್ಬದ ಅಂಗವಾಗಿ ರಿಪ್ಪನ್‌ಪೇಟೆಯ ವಾರದ ಸಂತೆ ಇಂದು ನಡೆದಿದ್ದು ಗಗನಕ್ಕೇರಿದ ತರಕಾರಿ, ಹೂ, ಹಣ್ಣು ಮತ್ತು ದಿನಸಿಗಳ ಬೆಲೆಯ ನಡುವೆಯೂ ಭರ್ಜರಿ ವಹಿವಾಟು ನಡೆಯಿತು.

WhatsApp Group Join Now
Telegram Group Join Now
Instagram Group Join Now

ಹಬ್ಬದ ಅಂಗವಾಗಿ ಜಾನುವಾರುಗಳ ಕೊರಳಿಗೆ ಗಂಟೆ, ಕಣ್ಣಿ ಮತ್ತು ಹಗ್ಗ ಸೇರಿದಂತೆ  ಬೂರೆ ಕುಂಬಗಳು, ಮಣ್ಣಿನ ಹಣತೆ, ತರಕಾರಿ ಸಿಹಿಕುಂಬಳ, ಸೊಪ್ಪಿನ ವ್ಯಾಪಾರ ದುಬಾರಿ ದರದಲ್ಲೂ ಬಲು ಜೋರಾಗಿ ನಡೆಯಿತು.

ದೀಪಾವಳಿ ನೋನಿ ಹಿನ್ನೆಲೆಯಲ್ಲಿ ಕೋಳಿ, ಕುರಿ ಮತ್ತು ಬಿದರಿನ ಬುಟ್ಟಿ, ಹಣ್ಣು, ಹೂ, ತೆಂಗಿನಕಾಯಿ ವ್ಯಾಪಾರ ಸಹ ಭರ್ಜರಿಯಾಗಿ ನಡೆಯಿತು.

Leave a Comment