ಶ್ರದ್ಧಾಂಜಲಿ ಫ್ಲೆಕ್ಸ್ ಧ್ವಜ ಕಂಬಕ್ಕೆ ಅಳವಡಿಸುವವರ ವಿರುದ್ಧ ಕ್ರಮಕ್ಕೆ ಆಗ್ರಹ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇಲ್ಲಿನ ವಿನಾಯಕ ವೃತ್ತದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯವರ ಗಣೇಶೋತ್ಸವ ಮತ್ತು ಯುಗಾದಿಯ ದಿನದಂದು ಹಿಂದೂ ಧ್ವಜವನ್ನು ಹಾರಿಸುವ ಕಂಬಕ್ಕೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮತ್ತು ರಾಷ್ಟ್ರ ರಾಜ್ಯ ರಾಜಕೀಯ ನಾಯಕರು ಯಾರಾದರೂ ಮೃತರಾದರೆ ಶ್ರದ್ಧಾಂಜಲಿ ಫ್ಲೆಕ್ಸ್ ತಂದು ಅಳವಡಿಸುವುದು ಅದನ್ನು ತೆಗೆಯದೆ ನಿತ್ಯ ಸಾರ್ವಜನಿಕರು ಅವರ ಮುಖ ನೋಡಿಕೊಂಡು ಓಡಾಡಬೇಕಾದ ಅನಿರ್ವಾತೆ ಎದುರಾಗಿದೆ ಎಂದು ಸಾರ್ವಜನಿಕರು ತೀವ್ರವಾಗಿ ಖಂಡಿಸುವ ಮೂಲಕ ಸ್ಥಳೀಯಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹಿಂದೂ ಧ್ವಜ ಕಂಬ ಮತ್ತು ಹೈಮಾಸ್ಟ್ ದೀಪದ ಕಂಬದ ಮಧ್ಯದಲ್ಲಿ ಉಳಿದಿರು ಜಾಗದಲ್ಲಿ ಮೃತರ ಶ್ರದ್ಧಾಂಜಲಿ ಫ್ಲೆಕ್ಸ್ ಅಳವಡಿಸುವುದು ಮತ್ತು ಅದನ್ನು ತೆಗೆಯದೆ ತಿಂಗಳು ಗಟ್ಟಲೆ ಅಲ್ಲಿಯೇ ಬಿಡುವುದರ ಬಗ್ಗೆ ಸಾರ್ವಜನಿಕರು ಅಸಮದಾನ ವ್ಯಕ್ತಪಡಿಸುತ್ತಿದ್ದಾರೆ.

ಆಕಸ್ಮಿಕವಾಗಿ ಅದನ್ನು ಯಾರದರೂ ಬಿಚ್ಚಿದರೆ ಅವರ ಮೇಲೆ ಸಂಬಂಧಿಸಿದವರು ಗಲಾಟೆ ಮಾಡಿ ಬಣ್ಣ ಕಟ್ಟುವ ಪ್ರವೃತ್ತಿಯೆ ಹೆಚ್ಚಾಗಿರುವಾಗ ಸ್ಥಳೀಯ ಗ್ರಾಮಾಡಳಿತ ಇಂತಹ ಕಂಬಕ್ಕೆ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಮತ್ತು ಪಂಚಾಯ್ತಿ ನಿಯಮದನ್ವಯ ಕರವಸೂಲಿ ಮಾಡಿ ಪರವಾನಗಿ ಪಡೆಯುವಂತೆ ಕಡ್ಡಾಯ ಮಾಡಬೇಕಾಗಿ ಸಹ ಸಾರ್ವಜನಿಕರು ತಮ್ಮ ಸಲಹೆಯನ್ನು ನೀಡಿ ತಕ್ಷಣ ಈ ವ್ಯವಸ್ಥೆಗೆ ಮುಂದಾಗಬೇಕಾಗಿ ಆಗ್ರಹಿಸಿದ್ದಾರೆ.

Leave a Comment