Ripponpete

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಆಗ್ರಹ

ರಿಪ್ಪನ್‌ಪೇಟೆ ; 2023 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ರವರ ಮಧ್ಯೆ ಎರಡೂವರೆ ವರ್ಷಗಳ ಅವಧಿಗೆ ಹೈಕಮಾಂಡ್ ಮಟ್ಟದಲ್ಲಿ ಮುಖ್ಯಮಂತ್ರಿ ಸ್ಥಾನದ ಒಪ್ಪಂದವಾಗಿರುವುದನ್ನು ಮನಗಂಡು ರಾಜ್ಯದ ಸಿ.ಎಂ. ಸ್ಥಾನಕ್ಕೆ ಈ ಕೂಡಲೇ ಸಿದ್ದರಾಮಯ್ಯ ಮುಚ್ಚಿಕೊಂಡು ರಾಜೀನಾಮೆ ಕೊಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಲ್ಲೂರು ಗ್ರಾಮದಲ್ಲಿ ತಮ್ಮ ಸ್ವಗೃಹದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಡಿನ ಜನತೆ ಕಾಂಗ್ರೆಸ್‌ಗೆ ಐದು ವರ್ಷ ಕಾಲ ಅಡಳಿತ ನಡೆಸಲು ಆಧಿಕಾರ ನೀಡಿದ್ದಾರೆ.ಸಿದ್ದರಾಮಯ್ಯ ಹೇಳುವಂತೆ ನಾನೇ ಐದು ವರ್ಷ ಮುಖ್ಯಮಂತ್ರಿಯೆಂದು ಹೇಳಿಕೊಳ್ಳುತ್ತಾ ಇರುವುದರ ಬಗ್ಗೆ ತೀವ್ರ ಅಸಮದಾನ ವ್ಯಕ್ತ ಪಡಿಸಿ ತಮ್ಮಿಬ್ಬಿರಲ್ಲಿ ನಡೆದ ಒಪ್ಪಂದಂತೆ ಕೂಡಲೇ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಕ್ಕಾಗಿ ಶ್ರಮವಹಿಸಿರುವ ಡಿ.ಕೆ.ಶಿವಕುಮಾರರವರಿಗೆ ಅಧಿಕಾರಿ ಬಿಟ್ಟುಕೊಡುವಂತೆ ಪಕ್ಷಾತೀತವಾಗಿ ನಾವು ಒತ್ತಾಯಿಸುತ್ತಿರುವುದಾಗಿ ತಿಳಿಸಿದರು.

ಒಪ್ಪಂದವಾಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರು ಚೇಲಾಗಳು ಅಲ್ಲಗೆಳೆಯುತ್ತಿದ್ದು ಎಐಸಿಸಿ ಹೈಕಮಾಂಡ್ ಸೂಚನೆಯನ್ನೇ ದಿಕ್ಕರಿಸುತ್ತಿರುವದರಿಂದ ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶಿಸಿ ಸಿದ್ದರಾಮಯ್ಯನವರ ಚೇಲಾಗಳ ಮೇಲೆ ಶಿಸ್ತು ಕ್ರಮ ಕೈಗೊಂಡು ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಮುಖ್ಯಮಂತ್ರಿ ಸ್ಥಾನವನ್ನು ತೆರವು ಮಾಡಿ ಡಿ.ಕೆ ಶಿವಕುಮಾರಗೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಮತ್ತು ಸೋನಿಯಾಗಾಂಧಿಗೆ ರಾಹುಲ್‌ಗಾಂಧಿಗೆ ಹಾಗೂ ಸುರ್ಜಿವಾಲ, ವೇಣುಗೋಪಾಲ ಇವರಿಗೆ ಪತ್ರ ಬರೆಯುವ ಮೂಲಕ ಆಗ್ರಹಿಸಿರುವುದಾಗಿ ವಿವರಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಯಾರು ಬದಲಾಯಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ನೇರಾನೇರ ಸವಾಲುಸೆದು ಪಕ್ಷದ ಶಿಸ್ತುನ್ನು ಉಲ್ಲಂಘಿಸಿದ್ದಾರೆ. ತಮ್ಮ ಪುತ್ರ ಹಾಗೂ ಎಂ.ಎಲ್.ಸಿ. ಯತೀಂದ್ರ ಸಿದ್ದರಾಮಯ್ಯನವರ ಮೂಲಕ ಹೈಕಮಾಂಡ್ ಮಟ್ಟದಲ್ಲಿ ಎರಡೂವರೆ ವರ್ಷಗಳು ಮಾತ್ರ ಮುಖ್ಯಮಂತ್ರಿ ಎಂದು ಮಾತುಕತೆ ಆಗಿಯೇ ಇಲ್ಲ ಎಂದು ಹೇಳಿಸಿ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಲೇವಡಿ ಮಾಡಿದರು.

ಸಿದ್ದರಾಮಯ್ಯನವರು ದೇವರಾಜ ಅರಸುರವರ ಹೆಚ್ಚು ಅವಧಿಯ ಮುಖ್ಯಮಂತ್ರಿ ಎಂಬ ದಾಖಲೆಯನ್ನು ಮುರಿಯಲು ಅವಕಾಶ ಮಾಡಿಕೊಡಿ ಎಂದು ಗೋಗೆರೆಯುತ್ತಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಜಾರಿಗೊಳಿಸಲು ಮುಖ್ಯಮಂತ್ರಿಯಾಗಿರಲು ತಮಗೆ ಇನ್ನೂ ಹೆಚ್ಚಿನ ಅವಕಾಶವನ್ನು ನೀಡಬೇಕೆಂದು ಹೈಕಮಾಂಡ್ ಮುಂದೆ ಇಲ್ಲಸಲ್ಲದ ನೆಪ ಒಡ್ಡುತ್ತಿದ್ದಾರೆ. ರಾಜ್ಯದ ಜನ ತಮಗೆ ಐದು ವರ್ಷವಿಡೀ ಮುಖ್ಯಮಂತ್ರಿ ಅಲಂಕರಿಸಲು ಜನಾದೇಶವನ್ನು ನೀಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.

ಸಿದ್ದುಗೆ ಕನಸು ;
ರಾಜ್ಯದಲ್ಲಿ ಏಳೂವರೆ ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಗಳಾಗಿ ಅಧಿಕಾರವನ್ನು ಆನುಭವಿಸಿರುವ ಸಿದ್ದರಾಮಯ್ಯನವರಿಗೆ ಈಗ ಮುಖ್ಯಮಂತ್ರಿ ಸ್ಥಾನ ಕೈತಪ್ಪುವುದೋ ಎಂಬ ಅಭದ್ರತೆ ಕಾಡತೊಡಗಿದೆ. ಸುದೀರ್ಘ ಕಾಲ ಮುಖ್ಯಮಂತ್ರಿ ಸ್ಥಾನವನ್ನು ಅನುಭವಿಸಿರುವ ತಮಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದರೆ ನೀರೊಳಗಿದ್ದ ಮೀನನ್ನು ಮರಳು ದಂಡೆಯ ಮೇಲೆ ಎಸೆದಂತೆ ವಿಲವಿಲ ಒದ್ದಾಡಬೇಕೆಂಬ ಕನಸು ಸಿದ್ದರಾಮಯ್ಯನವರಿಗೆ ಇತ್ತೀಚೆಗೆ ದಿನನಿತ್ಯ ಬೀಳತೊಡಗಿದೆ.
– ಕಲ್ಲೂರು ಮೇಘರಾಜ್, ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ಟ್ರಸ್ಟಿ

ಸುದ್ದಿಗೋಷ್ಠಿಯಲ್ಲಿ ತಳಲೆ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಸಹಕಾರಿ ದುರೀಣ ಕೆ.ಎಸ್.ಲೋಕಪ್ಪಗೌಡ, ಈ.ಡಿ.ಮಂಜುನಾಥ, ಗಂಗಾಧರ, ನಾಗರಾಜ ಏಲಕ್ಕಿಕೊಪ್ಪ, ಶೇಖರಪ್ಪ ಕೆ.ಟಿ., ರಾಜೇಂದ್ರಗೌಡ, ಕೆ.ವೈ.ನಾಗರಾಜ್, ವಿಶ್ವನಾಥ ಕಲ್ಲೂರು ಇನ್ನಿತರರು ಇದ್ದರು‌.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>