ರಂಭಾಪುರಿ ಜಗದ್ಗುರುಗಳ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜೆಯಲ್ಲಿ ರಿಪ್ಪನ್‌ಪೇಟೆ ಭಕ್ತರು

Written by Mahesha Hindlemane

Published on:

ರಿಪ್ಪನ್‌ಪೇಟೆ ; ರಂಭಾಪುರಿ ಪೀಠದಲ್ಲಿ ನಡೆಯುತ್ತಿರುವ ಜಗದ್ಗುರು ಡಾ.ವೀರಸೋಮೇಶ್ವರ ಭಗವತ್ಪಾದರುಗಳವರ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜೆಯಲ್ಲಿ ಮಲೆನಾಡಿನ ಮಸರೂರು, ಜಂಬಳ್ಳಿ, ರಿಪ್ಪನ್‌ಪೇಟೆ, ಹುಗುಡಿ ಭಕ್ತರು ಪಾಲ್ಗೊಂಡು ದರ್ಶನಾಶೀರ್ವಾದ ಪಡೆದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮಲೆನಾಡಿನ ಭಕ್ತರ ಧರ್ಮ ಧಾರ್ಮಿಕ ಆಚರಣೆಯಲ್ಲಿ ಶ್ರದ್ದಾ ಭಕ್ತಿಯಿಂದ ಭಾಗವಹಿಸಿ ತಮ್ಮ ಭಕ್ತಿಯ ಪರಾಕಾಷ್ಟತೆಯನ್ನು ಜಗದಾದಿ ಜಗದ್ಗುರು ರೇಣುಕಾದಿ ಪಂಚಾಚಾರ್ಯರಲ್ಲಿ
ಸಮರ್ಪಿಸುತ್ತಾ ಬರುತ್ತಿರುವುದರ ಬಗ್ಗೆ ಹರ್ಷ ತಂದಿದೆ ಎಂದು ಶ್ರೀಗಳವರು ಭಕ್ತ ಸಮೂಹವನ್ನು ಆಶೀರ್ವದಿಸಿದರು.

ಮಲೆನಾಡಿನ ಭಕ್ತರಾದ ಹೆಚ್.ಎಂ.ವರ್ತೇಶಗೌಡ ಹುಗುಡಿ, ಜಂಬಳ್ಳಿ ಜೆ.ಎಂ.ಶಾಂತಕುಮಾರ್, ಎಂ.ಎಸ್.ಜಗದೀಶ್ ಮಸರೂರು, ಕೆ.ಬಿ.ರಮೇಶ್ ಕೊಳವಳ್ಳಿ, ಪತ್ರಕರ್ತ ಕೆ.ಎಂ.ಬಸವರಾಜ, ರಿಪ್ಪನ್‌ಪೇಟೆ, ಅನುಪಮ ಜಗದೀಶ, ರೂಪ ಭವನಚಂದ್ರ, ನಚೀಕೇತ್, ನಂದಕಿಶೋರ್ ಇನ್ನಿತರರು ಪಾಲ್ಗೊಂಡಿದ್ದರು.

Leave a Comment