Hosanagara

ರಿಪ್ಪನ್‌ಪೇಟೆ ರೋಟರಿ ಕ್ಲಬ್‌ನಿಂದ ರೈತ ಮಿತ್ರ ಕಾರ್ಯಕ್ರಮದಡಿ ಕೃಷಿ ಉಪಕರಣಗಳ ವಿತರಣೆ

InShot 20260822 115933076

ರಿಪ್ಪನ್‌ಪೇಟೆ : ಇಲ್ಲಿನ ರೋಟರಿ ಕ್ಲಬ್‌ನಿಂದ ರೈತ ಮಿತ್ರ ಕಾರ್ಯಕ್ರಮದಡಿ ರೈತರಿಗೆ ಕೃಷಿ ಸಲಕರಣೆಗಳನ್ನು ವಿತರಿಸಿ ಭತ್ತದ ಗದ್ದೆಯಲ್ಲಿ ರೋಟರಿ ಕ್ಲಬ್ ಪದಾಧಿಕಾರಿಗಳು ಸಮೂಹ ನಾಟಿ ಕಾರ್ಯದಲ್ಲಿ ತೊಡಗಿಕೊಳ್ಳುವುದರೊಂದಿಗೆ ವಿನೂತನ ಕಾರ್ಯಕ್ರಮದೊಂದಿಗೆ ಜನಮೆಚ್ಚುಗೆ ಪಡೆದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಬಡವ ಶ್ರೀಮಂತ ಎಂಬ ಭೇದ ಭಾವನೆ ಬೆಳೆಸದೆ ಎಲ್ಲೂರು ಒಂದೇ ಎಂಬ ತತ್ವದಂತೆ ಸೇವಾ ಮನೋಭಾವನೆಯ ರೋಟರಿ ಕ್ಲಬ್‌ನ ಧ್ಯೇಯವಾಕ್ಯವಾಗಿದ್ದು ಅದರನ್ವಯ ಇಲ್ಲಿನ ರೋಟರಿ ಕ್ಲಬ್ ರೈತರಿಗೆ ಕೃಷಿ ಸಲಕರಣೆಗಳನ್ನು ನೀಡುವುದರೊಂದಿಗೆ ತಮ್ಮ ಸೇವಾ ಗುಣವನ್ನು ಬೆಳಸುತ್ತಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್ ಕರೆ ನೀಡಿದರು.

ರೈತ ಮಿತ್ರ ಕಾರ್ಯಕ್ರಮಕ್ಕೆ ಕೃಷಿ ಸಲಕರಣೆಗಳನ್ನು ಗಣೇಶ್ ಎನ್.ಕಾಮತ್ ಹಾಗೂ ಹೆಚ್.ಎಸ್. ಸುಧೀಂದ್ರ ಹೆಬ್ಬಾರ್ ನೀಡಿದರು.

ಈ ಸಂದರ್ಭದಲ್ಲಿ ಅಮಿತ ರವೀಂದ್ರ ಬಲ್ಲಾಳ್, ರಾಮೇಶ್ ಎಸ್.ಹೆಬ್ಬಾರ್ (ರಾಮು), ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಲಕ್ಷ್ಮಣಗೌಡ, ಹೆಚ್.ಎಂ. ವರ್ತೇಶ್‌ಗೌಡ, ಡಾಕಪ್ಪ, ರಾಧಾಕೃಷ್ಣ, ರಾಮಚಂದ್ರ ಕೆರೆಹಳ್ಳಿ, ತಾ.ನಾ.ರಾಮಜೀ, ಸವಿತಾ ರಾಧಾಕೃಷ್ಣ, ಇನ್ನಿತರರು ಪಾಲ್ಗೊಂಡಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>