Hosanagara

ಕಸ್ತೂರಿ ರಂಗನ್ ವರದಿ ಮಲೆನಾಡ ಜನರಿಗೆ ಮರಣ ಶಾಸನವಾಗಲಿದೆ : ವಾಟಗೋಡು ಸುರೇಶ್

InShot 20260822 154631898

ಹೊಸನಗರ ; ಮಲೆನಾಡಿನ ಜನರಿಗೆ ಮರಣ ಶಾಸನವಾಗಲಿರುವ ಕಸ್ತೂರಿ ರಂಗನ್ ವರದಿಯನ್ನು ಸುಮಾರು 13 ವರ್ಷಗಳಿಂದ ನಾವು ವಿರೋಧಿಸುತ್ತಾ ಬರುತ್ತಿದ್ದು ಆದರೂ ಇನ್ನೂ ಜೀವಂತವಾಗಿದೆ ಎಂದು ಯೂನಿಯನ್ ಬ್ಯಾಂಕ್ ಅಧ್ಯಕ್ಷ ವಾಟಗೋಡು ಸುರೇಶ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೊಸನಗರದ ಡಿ.ಸಿ.ಸಿ ಬ್ಯಾಂಕ್ ಸಭಾಂಗಣದಲ್ಲಿ ಕಸಬಾ ಹೋಬಳಿ ರೈತರಿಗಾಗಿ ಆಗಸ್ಟ್ 29 ರಂದು ಕಸ್ತೂರಿ ರಂಗನ್ ವಿರೋಧಿಸಿ ನಡೆಯುವ ಪಾದಯಾತ್ರೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಸ್ತೂರಿ ರಂಗನ್ ವರದಿ ವಿರೋಧಿಸಿ ಪಶ್ಚಿಮಘಟ್ಟ ರೈತ ಸಹಕಾರಿ ವೇದಿಕೆಯ ಹಾಗೂ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡರ ನೇತೃತ್ವದಲ್ಲಿ ಆಗಸ್ಟ್ 29ರಂದು ತಾಲೂಕಿನ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಹೊಸನಗರದವರೆಗೆ ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿದೆ ಎಂದರು.

ರಾಜ್ಯದ ಸುಮಾರು 21,000 ಚದರ ಕಿಲೋಮೀಟರ್ ಪಶ್ಚಿಮಘಟ್ಟಗಳ 1449 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಜುಲೈ 27 ರಂದು ಕರಡು ಅಧಿಸೂಚನೆಯನ್ನು ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯ ಪ್ರಕಟಿಸಿದೆ. ಇದು 7ನೇ ಅಧಿಸೂಚನೆಯಾಗಿದೆ. ಈ ಅಧಿಸೂಚನೆ ಜಾರಿಗೊಂಡಲ್ಲಿ ಘೋಷಿತ ಗ್ರಾಮಗಳ ಜನರಿಗೆ ಅಸಹನೀಯ ಪರಿಸ್ಥಿತಿ ಎದುರಾಗಲಿದೆ. ಇದನ್ನು ಮನಗಂಡು ಅಧಿಸೂಚನೆಯ ಜಾರಿಯನ್ನು ಪಶ್ಚಿಮ ಘಟ್ಟಗಳ ರೈತರು ಗ್ರಾಮಸ್ಥರು ಮತ್ತು ಇತರೆ ನಾಗರಿಕರು ಸಹಕಾರಿಗಳು ಸಂಸ್ಥೆಗಳು ತೀವ್ರವಾದ ವಿರೋಧ ವ್ಯಕ್ತ ಪಡಿಸಬೇಕಾಗಿದೆ ಇಂದಿನಿಂದಲೇ ಜನರನ್ನು ಎಚ್ಚರಿಸುವ ಸಲುವಾಗಿ ಪಾದಯಾತ್ರೆ ಹೋರಾಟ ಅನಿವಾರ್ಯ ಎಂದರು.

ನಮ್ಮನ್ನು ಆಳುವವರೆ ನಮ್ಮತ್ತಾ ಸೆಳೆಯಬೇಕು :

ಈ ಹೋರಾಟಕ್ಕೆ ಯಾವುದೇ ರಾಜಕೀಯ ವ್ಯಕ್ತಿಗಳ ಬಳಿ ನಾವು ಹೋಗುವುದಿಲ್ಲ. ಹೋರಾಟಕ್ಕೆ ಉತ್ತಮ ಬೆಂಬಲ ಸಿಕ್ಕಿದರೆ ನಮ್ಮನ್ನು ಆಳುವವರೆ ನಮ್ಮ ಬಳಿ ಬಂದು ನಮ್ಮ ಮನವಿ ಸ್ವೀಕರಿಸಿ ಅದನ್ನು ವಿಧಾನಸಭೆಯಲ್ಲಿ ರಾಜ್ಯಸಭೆಯಲ್ಲಿ ಹಾಗೂ ಲೋಕಸಭೆಯಲ್ಲಿ ಚರ್ಚಿಸಿಬೇಕು ಆಗ ಮಾತ್ರ ನಮ್ಮ ಹೋರಾಟಕ್ಕೆ ಬೆಲೆ ಸಿಗುತ್ತದೆ ಇಂಥಹ ಸನ್ನೀವೇಶ ಬರಬೇಕಾದರೇ ಜನರು ಎಚ್ಚೆತ್ತುಕೊಂಡು ಪಾದಯಾತ್ರೆಯಲ್ಲಿ ಪಾಲ್ಗೋಳಬೇಕು ಎಂದರು.

ಅಭಿಪ್ರಾಯ ಪಡೆಯದೇ ಅಧಿಸೂಚನೆ ಹೊರಡಿಸಿರುವುದು ಯಾವ ನ್ಯಾಯ?

ರೈತ ಸಂಘಟನೆಗಳ, ವಿವಿಧ ಚುನಾಯಿತ ಸಂಸ್ಥೆಗಳ ಪ್ರತಿನಿಧಿಗಳ, ಸ್ಥಳೀಯ ಗ್ರಾಮಸ್ಥರ ಅಭಿಪ್ರಾಯವನ್ನು ಪಡೆಯದೇ, ಏಕಪಕ್ಷೀಯ ತೀರ್ಮಾನ ಕೈಗೊಂಡಿರುವುದಕ್ಕೆ ವಿರೋಧವಿದ್ದು ಯಾರ ಅಭಿಪ್ರಾಯ ಪಡೆಯದೇ ಅಧಿಸೂಚನೆ ಹೊರಡಿಸಿರುವುದು ಯಾವ ನ್ಯಾಯ?. ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ 136 ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿದೆ. ಅಲ್ಲದೇ ಘೋಷಿತ ಗ್ರಾಮದ 10 ಕಿ.ಮೀ. ದೂರದವರೆಗೂ ಸೂಕ್ಷ್ಮ ವಲಯದ ನಿಯಮಗಳು ಜಾರಿಯಾಗಲಿವೆ. ಬಹುತೇಕ ಇಲ್ಲಿನ ನಿವಾಸಿಗಳು ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಪಕ್ಷಾತೀತವಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ನಾವು ತೀರ್ಮಾನಿಸಿದ್ದು ಆಗಷ್ಟ್ 29ರ ಪಾದಯಾತ್ರೆಗೆ ಹೆಚ್ಚಿನ ಜನರು ಆಗಮಿಸಿ ಬೆಂಬಲ ಸೂಚಸಬೇಕೆಂದು ಈ ಸಭೆಯಲ್ಲಿ ಮನವಿ ಮಾಡಿದರು.

ಕಸಬಾ ಪೂರ್ವಭಾವಿ ಸಭೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ವಿ. ಜಯರಾಮ್, ಕಳೂರು ಸೊಸೈಟಿ ಅಧ್ಯಕ್ಷ ದುಮ್ಮ ವಿನಯ್‌ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ್, ಶಿಮೂಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ವಾಲೆಮನೆ ನಾಗೇಶ್, ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ನಾರಾಯಣಗುರು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುರುಳೀಧರ, ಸೊನಲೆ ಸೊಸೈಟಿ ಅಧ್ಯಕ್ಷ ಸುರೇಶ್, ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೇಬೈಲ್, ಡಿ.ವಿ.ಆರ್ ಮಲ್ಲಿಕಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>