ಕಿಮ್ಮನೆ ರತ್ನಾಕರ್ ಹುಟ್ಟುಹಬ್ಬ ; ಹೊಸನಗರದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

Written by Mahesha Hindlemane

Updated on:

ಹೊಸನಗರ ; ಕಾಂಗ್ರೆಸ್‌ನ ಹಿರಿಯ ಹಾಗೂ ಸಜ್ಜನ ರಾಜಕಾರಣಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ರವರ 74ನೇ ಹುಟ್ಟುಹಬ್ಬವನ್ನು ಹೊಸನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಗಾಂಧಿ ಮಂದಿರ (ಕಾಂಗ್ರೆಸ್ ಕಚೇರಿ)ದಲ್ಲಿ ಸಿಹಿ ಹಂಚಿ ನಂತರ ಹೊಸನಗರದ ಸಾರ್ವಜನಿಕ ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಹಣ್ಣು-ಹಂಪಲು, ಬ್ರೆಡ್ ಹಾಗೂ ಹಾಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಲಿಂಗರಾಜ್, ಟೌನ್ ಪಂಚಾಯತಿ ಸದಸ್ಯ ಅಶ್ವಿನಿಕುಮಾರ್, ಬ್ಲಾಕ್ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ನಗರ ಕರುಣಾಕರ ಶೆಟ್ಟಿ, ವಕೀಲರಾದ ಮೋಹನ್ ಶೆಟ್ಟಿ, ಗಗ್ಗ ಬಸವರಾಜ್, ಮಂಡಾನಿ ಗುರುಮೂರ್ತಿ, ಬೃಂದಾವನ ಪ್ರವೀಣ್, ಎಂ.ಪಿ. ಸುರೇಶ್, ಜಯನಗರ ಗುರು, ರಾಜಕುಮಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


ಹುಂಚದಲ್ಲಿ ಕಿಮ್ಮನೆ ರತ್ನಾಕರ್‌ ಹುಟ್ಟುಹಬ್ಬ ಆಚರಣೆ

ಹೊಸನಗರ : ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ 74ನೇ ಹುಟ್ಟುಹಬ್ಬವನ್ನು ಹುಂಚ ಹೋಬಳಿಯ ಕಾರ್ಯಕರ್ತರು ಗುರುರಾಜ್ ಸುಣಕಲ್ಲು ನೇತೃತ್ವದಲ್ಲಿ ಹುಂಚ ಪದ್ಮಾಂಬ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ಆಚರಿಸಿದರು.

ಈ ಸಂದರ್ಭದಲ್ಲಿ ನಾಗರಾಜ್ ರೆಡ್ಡಿ, ಗುರು ಭಂಡಾರಿ, ಬಿಲ್ಲೇಶ್ವರ ಚಂದ್ರಶೇಖರ, ಹೊಂಡಲಗದ್ದೆ ಕೇಶವಮೂರ್ತಿ, ನಾಗರಹಳ್ಳಿಯ ಗ್ರಾಮ ಪಂಚಾಯತಿ ಸದಸ್ಯ ರಾಘವೇಂದ್ರ ತೋಟದಕಟ್ಟು, ಸುರೇಶ ಗುಡ್ಡೆಕೊಪ್ಪ, ದಿನೇಶ ನಾಗರಹಳ್ಳಿ ಇನ್ನೂ ಮುಂತಾದ ಕಾರ್ಯಕರ್ತರು ಭಾಗವಹಿಸಿದರು.

Leave a Comment