ಹೊಸನಗರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತಿ ನಾ. ಡಿಸೋಜಾ ಬದುಕಿನ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಸಂವಾದ

Written by malnadtimes.com

Published on:

ಹೊಸನಗರ ; ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಂಗಳದಲ್ಲಿ ಕರುವಿನಾಶ್ ರಾವ್ ಕಾರ್ಮಿನಾ ಸೇರಾವೋ ಮತ್ತು ಲೂವಿಸ್ ಸೆರಾವೋ ದತ್ತಿನಿಧಿ ಕಾರ್ಯಕ್ರಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಕೊಡಿಗೆ ಗಣೇಶಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಿತು.

WhatsApp Group Join Now
Telegram Group Join Now
Instagram Group Join Now

ದತ್ತಿದಾನೆಗಳಾದ ಎಲಿಜಬೆತ್ ಶರಾಂ, ಡಾ. ಮಾರ್ಷಲ್ ಶರಾಂ ಉಪಸ್ಥಿತಿಯಲ್ಲಿ ಕನ್ನಡ ನಾಡು-ನುಡಿ-ಸಂಸ್ಕೃತಿ ನಾಡಿ ಬದುಕು ಬರಹ ಹಾಗೂ ಡಾ. ನಾ ಡಿಸೋಜ ಅವರ ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸಾಕ್ಷ್ಯಚಿತ್ರ ನಿರ್ದೇಶಕ ಗಾರ್ಗಿ ಕಾರೆಹಕ್ಲು ಡಾ. ಮಾರ್ಷಲ್ ಶರಾಮ್, ಡಾ. ಜಾನ್ ಡಿಸೋಜ, ಧನುಷ್ ಕುಮಾರ್, ಪಶು ವೈದ್ಯ ಇಲಾಖೆಯ ಪಶು ವೈದ್ಯ ಇಲಾಖೆಯ ಡಾ.ಬಿ.ಸಿ ಕೃಷ್ಣೇಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನಾಡಿಯವರ ಜೀವನಶೈಲಿ ವ್ಯಕ್ತಿತ್ವದ ಬಗ್ಗೆ ಅನಿಸಿಕೆ ವಿನಿಮಯ ಮಾಡಿಕೊಂಡರು.

ಆಕಾಶವಾಣಿ ಕಲಾವಿದ ಕೆ. ಸುರೇಶ್ ಕುಮಾರ್ ಪ್ರಾರ್ಥಿಸಿದರು. ಸಂಪೆಮನೆಯ ಎಸ್.ಕೆ ಗಿರೀಶ್ ಕಾರ್ಯಕ್ರಮ ಕಾರ್ಯಕ್ರಮ ನಿರೂಪಿಸಿದರು. ಆರ್. ಕುಬೇಂದ್ರಪ್ಪ ಸ್ವಾಗತಿಸಿದರು. ಅಶ್ವಿನಿ ಪಂಡಿತ್ ವಂದಿಸಿದರು.

Leave a Comment