RIPPONPETE ; ಪಾಶ್ಚಿಮಾತ್ಯ ಭಾಷೆಯ ಬಳಕೆಯಿಂದಾಗಿ ನಮ್ಮ ಮಾತೃಭಾಷೆ ಬಗ್ಗೆ ಕೀಳು ಭಾವನೆಯಲ್ಲಿ ಕಾಣುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ, ನಮ್ಮ ಮನೆಯಲ್ಲಿ ಮೊದಲ ಭಾಷೆಯಾಗಿ ಕನ್ನಡವೇ ಆಗಿದೆ ಮಗು ಅಮ್ಮ ಎಂದು ಕರೆಯುವುದರಿಂದ ಆರಂಭವಾಗುವ ಭಾಷೆಯೆ ಕನ್ನಡ ಅದನ್ನು ಉಳಿಸಿ ಬೆಳೆಸುವ ಮೂಲಕ ಮಾತೃಭಾಷೆಯನ್ನು ಪ್ರೋತ್ಸಾಹಿಸುವಂತಾಗಬೇಕು ಎಂದು ಶಿವಮೊಗ್ಗ ಉಪನ್ಯಾಸಕಿ ವಾಣಿ ಭಂಡಾರಿ ಹೇಳಿದರು.
ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದ ವಾರ್ಷಿಕೋತ್ಸವ ಮತ್ತು 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಕನ್ನಡ ನವೆಂಬರ್ ತಿಂಗಳಿಗೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಿದ್ದಿವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ಎನ್.ಸತೀಶ್, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿಯ ಮಾಜಿ ಅಧ್ಯಕ್ಷ ಎಂ.ಬಿ.ಮಂಜುನಾಥ, ಸಿದ್ದಿವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರಶೆಟ್ಟಿ, ಕ.ಸಾ.ಪ ಅಧ್ಯಕ್ಷ ನರಸಿಂಹ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಪಿ.ಎಸ್.ಐ. ಪ್ರವೀಣ್‌ಕುಮಾರ್, ಇತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕ ರವಿಕುಮಾರ್ ಎಸ್ ಈಚಲಕೊಪ್ಪ, ಕಬಡ್ಡಿ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ರಾಮಕೃಷ್ಣ ವಿದ್ಯಾಲಯದ ಕ್ರೀಡಾಪಟುಗಳನ್ನು ಸನ್ಮಾನಿಸಿಲಾಯಿತು.
ನಾಗರತ್ನ ಸ್ವಾಗತಿಸಿದರು. ಸುರೇಶಸಿಂಗ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು. ಲೀಲಾ ಉಮಾಶಂಕರ್ ವಂದಿಸಿದರು.
ರವಿ ಮೂರೂರು ತಂಡದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ಮನು ಹಂದಾಡಿ ಮತ್ತು ತಂಡದವರಿಂದ ನಗೆ-ಸುಗ್ಗಿ ಹಾಸ್ಯ ಕಾರ್ಯಕ್ರಮ ಜನಾಕರ್ಷಣೆಗೊಂಡಿತು.
ಕನ್ನಡ ಭಾಷೆ ಜೀವನಕ್ಕೆ ಕೀ ಇದ್ದಂತೆ ; ಡಾ. ಎ.ಬಿ. ಉಮೇಶ್
RIPPONPETE ; ಇಂಗ್ಲಿಷ್ ಭಾಷೆ ಜ್ಞಾನದ ಕೀ ಆದರೆ ಕನ್ನಡ ಭಾಷೆ ಜೀವನಕ್ಕೆ ಕೀ ಇದ್ದಂತೆಯೆಂದು ಸಾಗರ ಪ್ರಥಮ ದರ್ಜೆ ಕಾಲೇಜ್ ಕನ್ನಡ ಪ್ರಾಧ್ಯಾಪಕ ಡಾ.ಎ.ಬಿ.ಉಮೇಶ್ ಹೇಳಿದರು.
ರಿಪ್ಪನ್‌ಪೇಟೆಯ ಪ್ರಥಮದರ್ಜೆ ಕಾಲೇಜ್‌ನಲ್ಲಿ ಇಂದು ಆಯೋಜಿಸಲಾದ 69ನೇ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿ, ಕನ್ನಡ ಭಾಷೆಯನ್ನು ಬೇರೆಯವರಿಗೆ ಅರ್ಥವಾಗುವ ಹಾಗೆ ಬರವಣಿಗೆ ಮಾಡಬೇಕು. ಪ್ರಾಸಬದ್ದವಾಗಿ ಕನ್ನಡ ಭಾಷೆಯಲ್ಲಿ ಮಾತನಾಡಬೇಕು. ನಮ್ಮ ಮಾತೃಭಾಷೆ ನಿತ್ಯವಾಗಿ ಮಾತನಾಡುವ ಮೂಲಕ ನಮ್ಮ ಉಸಿರನ್ನಾಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜ್ ಪ್ರಾಚಾರ್ಯ ಡಾ.ಹೆಚ್.ಎಸ್.ವಿರೂಪಾಕ್ಷಪ್ಪ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಡಿಸಿ ಉಪಾಧ್ಯಕ್ಷ ಹಾಲಸ್ವಾಮಿಗೌಡರು, ಸಿಡಿಸಿ ಮಂಜುನಾಥ ಕಾಮತ್, ಹರ್ಷ, ಉಪನ್ಯಾಸಕರಾದ ಡಾ.ಎನ್.ರವೀಶ್, ಡಾ.ಕುಮಾರ್, ಡಾ.ವೀರಣ್ಣಗೌಡರು ಇನ್ನಿತರರು ಹಾಜರಿದ್ದರು.
ರಶ್ಮಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿ ಡಾ.ವಿದ್ಯಾಪವಾರ್ ಸ್ವಾಗತಿಸಿದರು. ಪೂರ್ಣಿಮಾ, ಸಿಂಚನಾ ನಿರೂಪಿಸಿದರು. ಹೆಚ್.ನಯನಾ ವಂದಿಸಿದರು.