ರಿಪ್ಪನ್ಪೇಟೆ ; ಇಲ್ಲಿನ ಜುಮ್ಮಾಮಸೀದಿ ಮತ್ತು ಮೆಕ್ಕಾ ಮಸೀದಿಯ ಧರ್ಮಗುರುಗಳ ನೇತೃತ್ವದಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಸಡಗರದ ಮೆರವಣಿಗೆಯೊಂದಿಗೆ ಆಚರಿಸಿದರು.
ಹೊಸನಗರ ರಸ್ತೆಯಲ್ಲಿರುವ ಜುಮ್ಮಾಮಸೀದಿ ಮತ್ತು ಮೆಕ್ಕಾ ಮಸೀದಿಯಿಂದ ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ವಿನಾಯಕ ವೃತ್ತದ ಮೂಲಕ ಮುಸ್ಲಿಂ ಯುವಕರು ಧಪ್ ಭಾರಿಸುವ ಮೂಲಕ ಮೆರವಣಿಗೆ ನಡೆಸಿದರು.

ಮುಸ್ಲಿಂ ಯುವಕರ “ಧಪ್’’ (ತಮಟೆ)ಮುಸ್ಲಿಂ ಭಜನೆ ಮೆರವಣಿಗೆಯಲ್ಲಿ ಜನಾರ್ಕಷಣೆಗೊಂಡಿತು.
ಮೆರವಣಿಗೆ ತೆರಳುವಾಗ ಗ್ರಾಮ ಪಂಚಾಯಿತ್ ಸದಸ್ಯ ನಿರೂಪ್ ಕುಮಾರ್, ಪ್ರಕಾಶ್ ಪಾಲೇಕರ್, ಗಣಪತಿ ಇನ್ನಿತರ ಸ್ನೇಹಿತರು ವಿನಾಯಕ ವೃತ್ತದಲ್ಲಿ ತಂಪು ಪಾನೀಯವನ್ನು ವಿತರಣೆ ಮಾಡುವುದರೊಂದಿಗೆ ಭಾವೈಕ್ಯತೆ ಮೆರೆದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.