ರಿಪ್ಪನ್ಪೇಟೆ ; ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಗ್ರಾಮ ಠಾಣಾ ಜಾಗದಲ್ಲಿ ಜಮೀನಿಗೆ ಓಡಾಡುವ 30 ಅಡಿ ಅಗಲದ ರಸ್ತೆಯನ್ನು ಒತ್ತುವರಿ ಹೆಸರಿನಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಜಾಗದಲ್ಲಿ ಬಲತ್ಕಾರದಿಂದ ಅಡಿಕೆ ಗಿಡ ನೆಟ್ಟಿರುವ ಬಗ್ಗೆ ಠಾಣೆಗೆ ಈ ಸಂಪರ್ಕ ರಸ್ತೆಯ ಜಮೀನುದಾರರು ದೂರು ನೀಡಿದ್ದಾರೆ.
ಕಳೆದ ಕೆಲದಿನಗಳಿಂದ ತಮ್ಮಡಿಕೊಪ್ಪ ಗ್ರಾಮದ ಟಿ.ಹೆಚ್.ಮಂಜುನಾಥ ಮತ್ತು ಟಿ.ಹೆಚ್.ರಾಜು ಇವರ ಜಮೀನು ಸರ್ವೇ ನಂ 16/2 ಮತ್ತು 16/3 ಹಾಗೂ 16/4 ಸೇರಿದಂತೆ 16/9 ಜಮೀನಿಗೆ ಸಂಪರ್ಕ ಕಲ್ಪಿಸುವ 30 ಅಡಿ ಅಗಲದ ಗ್ರಾಮ ಪಂಚಾಯ್ತಿ ರಸ್ತೆಯನ್ನು ಟಿ.ಆರ್. ಯಲೋಜಿರಾವ್, ಟಿ.ವೈ.ಮನೋಜ್ (ಮನೋಹರ), ಟಿ.ವೈ. ರಾಮೋಜಿ, ಟಿ.ಆರ್.ಗೋವಿಂದಪ್ಪ ಇನ್ನಿತರು ಸೇರಿದಂತೆ ಇನ್ನಿತರರ ಜಮೀನಿಗೆ ಹಾದು ಹೋಗುವ ಸಂಪರ್ಕ ರಸ್ತೆಯನ್ನು ತಮ್ಮಡಿಕೊಪ್ಪ ಗ್ರಾಮದ ಟಿ.ಆರ್. ಯಲೋಜಿರಾವ್, ಟಿ.ವೈ.ಮನೋಜ್ (ಮನೋಹರ) ಟಿ.ವೈ.ರಾಮೋಜಿ, ಟಿ.ಆರ್. ಗೋವಿಂದಪ್ಪ ಇನ್ನಿತರು ಒತ್ತುವರಿ ಮಾಡುತ್ತಿದ್ದಾರೆಂದು ಆರೋಪಿಸಿ ಹೊಸನಗರ ನ್ಯಾಯಾಲಯದಲ್ಲಿ ಇನ್ ಜಂಕ್ಷನ್ (ಪ್ರತಿಬಂಧಕಾಜ್ಞೆ) ಆದೇಶವಿದ್ದರು ಈ ಆದೇಶವನ್ನು ಉಲ್ಲಂಘಿಸಿ ಬಲತ್ಕಾರವಾಗಿ 30 ಅಡಿ ಅಗಲದ ಸಂಪರ್ಕ ರಸ್ತೆಯನ್ನು ಬಂದ್ ಮಾಡಿ ತಡೆಮಾಡಿರುತ್ತಾರೆ.
ಈ ಹಿಂದೆ ಮಾಧ್ಯಮದಲ್ಲಿ ಸುದ್ದಿಯಾಗಿದ್ದು ತಮ್ಮಡಿಕೊಪ್ಪ ಗ್ರಾಮದಲ್ಲಿ ರಸ್ತೆ ಬಂದ್ ಮಾಡಿ ಕಬಳಿಸುವ ಹುನ್ನಾರ ನಡೆಸಲಾಗಿದೆ ಎಂದು ಟಿ.ಹೆಚ್.ಮಂಜುನಾಥ ಮತ್ತು ಟಿ.ಹೆಚ್.ರಾಜು ಇನ್ನಿತರರು ನ್ಯಾಯಾಲಯದ ಮೆಟ್ಟಿಲು ಏರುವ ಮೂಲಕ ಇನ್ ಜಂಕ್ಷನ್ ಆದೇಶವನ್ನು ತಂದಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.