ಮರ ಏರಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡ ಇಟಿಎಫ್ ಸಿಬ್ಬಂದಿ !

Written by malnadtimes.com

Published on:

ಎನ್.ಆರ್.ಪುರ ; ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಆನೆ ದಾಳಿಯಿಂದ ಇ.ಟಿ.ಎಫ್. (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿಯೋರ್ವ ಮರ ಏರಿ ಜೀವ ಉಳಿಸಿಕೊಂಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಾಲೂರು ಅರಣ್ಯದಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಎನ್.ಆರ್.ಪುರ ತಾಲೂಕಿನಲ್ಲಿ ಇತ್ತೀಚೆಗೆ ಆನೆಗಳ ಹಾವಳಿ ಮಿತಿ ಮೀರಿದೆ. ಕಾಡಾನೆಗಳು ಪ್ರತಿನಿತ್ಯ ಪುಂಡಾಟ ಮೆರೆಯುತ್ತಿದ್ದು, ಮೂರು ತಿಂಗಳಲ್ಲಿ ಇಬ್ಬರು ಆನೆ ದಾಳಿಗೆ ತುತ್ತಾಗಿದ್ದಾರೆ.‌ ಶುಕ್ರವಾರ ಕೂಡ ಕಾಫಿತೋಟಕ್ಕೆ ಬಂದಿದ್ದ ಪುಂಡಾನೆಯೊಂದನ್ನ ಓಡಿಸಲು ಹೋಗಿದ್ದ ಇಟಿಎಫ್ ಸಿಬ್ಬಂದಿಯ ಮೇಲೆಯೇ ಆನೆಯೊಂದು ಅಟ್ಯಾಕ್ ಮಾಡಲು ಮುಂದಾಗಿದೆ. ಸಾಲೂರು ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದ ಕಾಡಾನೆಯನ್ನು ಓಡಿಸುವ ವೇಳೆ ಆನೆ ಇಟಿಎಫ್ ಸಿಬ್ಬಂದಿಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ. ತಕ್ಷಣ ಎಚ್ಚೆತ್ತ ಇಟಿಎಫ್ ಸಿಬ್ಬಂದಿಗಳು ಮರವನ್ನೇರಿ ಕುಳಿತು ಜೀವ ಉಳಿಸಿಕೊಂಡಿದ್ದಾರೆ. ಮರವೇರಿ ಕುಳಿತ ನಂತರವೂ ಕಾಡಾನೆ ಮರವನ್ನು ಅಲುಗಾಡಿಸಲು ಮುಂದಾಗಿದ್ದು, ಈ ದೃಶ್ಯವನ್ನು ಮರದ ಮೇಲೆ ಕುಳಿತುಕೊಂಡು ಆನೆ ನಿಗ್ರಹ ದಳದ ಸಿಬ್ಬಂದಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಈ ದೃಶ್ಯ ನೋಡಿದವರ ಮೈ ಜುಮ್ ಎನಿಸುವಂತಿದ್ದು, ಆನೆ ದಾಳಿ ಹಾಗೂ ಹಾವಳಿಯಿಂದ ಕಂಗೆಟ್ಟಿರೋ ಜನ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಹಾವಳಿಗೆ ಶಾಶ್ವತ ಬ್ರೇಕ್ ಹಾಕಬೇಕೆಂದು ಆಗ್ರಹಿಸಿದ್ದಾರೆ.

Leave a Comment