ಶಿವಮೊಗ್ಗ

ಹೂವಿನಲ್ಲಿ ಅರಳಿದ ಕುವೆಂಪು ಮನೆ ; ಶಿವಮೊಗ್ಗದಲ್ಲಿ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

ಶಿವಮೊಗ್ಗ : ಮೋಹಕ ವರ್ಣಮಯ ಲೋಕವನ್ನೆ ತೆರದಿಟ್ಟಿರುವ ಫಲಪುಷ್ಪಗಳು, ಹೂವಿನಲ್ಲಿ ಅರಳಿದ ರಾಷ್ಟ್ರಕವಿ ಕುವೆಂಪುರವರ ಕವಿಶೈಲ, ಪುರಾಣ ಪ್ರಸಿದ್ದ ಚಂದ್ರಗುತ್ತಿ ರೇಣುಕಾಂಬೆ ದೇಗುಲ. ಉದ್ದ ಗರಿಬಿಚ್ಚಿ ನರ್ತಿಸುತ್ತಿರುವ ನವಿಲು, ನೋಡುಗರ ಕಣ್ಮನ ಸೆಳೆಯುವ ರಂಗುರಂಗಿನ ಮತ್ಸ್ಯಗಳು.

WhatsApp Group Join Now
Telegram Group Join Now
Instagram Group Join Now

ಹೌದು, ಶಿವಮೊಗ್ಗ ನಗರದ ಅಲ್ಲಮಪ್ರಭು ಮೈದಾನದಲ್ಲಿ ತೋಟಗಾರಿಕಾ ಇಲಾಖೆ ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ಹಾಗೂ ಮಲೆನಾಡ ಕರಕುಶಲ ಉತ್ಸವದಲ್ಲಿ ಕಂಡು ಬರುತ್ತಿರುವ ದೃಶ್ಯಾವಳಿಗಳಿವು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/18gq3ymKtJ/

ತೋಟಗಾರಿಕಾ ಇಲಾಖೆ ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಆರಂಭದಲ್ಲಿಯೇ ಮೇಳದ ಸ್ವಾಗತ ಕಮಾನು ಸ್ವಾಗತಿಸಿದರೆ, ಶಿವಮೊಗ್ಗವನ್ನು ಬಿಂಬಿಸುವ ಆಂಗ್ಲ ಭಾಷೆಯ ಎಸ್‌ಎಂಜಿ ಸೇವಂತಿಗೆ ಹೂವಿನಲ್ಲಿ ಕಣ್ಣುಕುಕ್ಕುತ್ತದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಕೆಂಪು ಗುಲಾಬಿಯಲ್ಲಿ ಮಾಡಿರುವ ‘ಐ ಲವ್ ಶಿವಮೊಗ್ಗ’ ಎಂಬ ಹೃದಯಾಕೃತಿಯ ಕಲಾಕೃತಿ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಈ ಬಾರಿ ಗುಲಾಬಿ, ಸೇವಂತಿಗೆ, ಆರ್ಕಿಡ್, ಕಾರ್ನೇಷನ್, ಲಿಲ್ಲೀಸ್, ಪೊಲೀಯೇಜ್ ಮುಂತಾದ ಬಗೆಗಳ 4.80 ಲಕ್ಷ ಹೂವುಗಳನ್ನು ಬಳಸಿ ಕುಪ್ಪಳಿ ಕವಿಶೈಲದ 28 ಅಡಿ ಎತ್ತರದ ಕಲಾಕೃತಿ ಹಾಗೂ ಚಂದ್ರಗುತ್ತಿ ರೇಣುಕಾಂಬೆ ದೇವಾಲಯದ 14 ಅಡಿ ಎತ್ತರದ ಕಲಾಕೃತಿ ನಿರ್ಮಿಸಲಾಗಿದೆ. 45 ಕ್ಕೂ ಹೆಚ್ಚು ಬೊನ್ಸಾಯ್ ಗಿಡಗಳ ಪ್ರದರ್ಶನ ಕೂಡ ನಡೆದಿದೆ.

ಕರಕುಶಲ ಮಳಿಗೆಗಳಾದ ಮಲೆನಾಡ ಕರಕುಶಲತೆಗಳು, ಸಹ್ಯಾದ್ರಿ ಕರಕುಶಲತೆ, ಬಂಜಾರ ಲಂಬಾಣಿ ಉಡುಪು, ಕಲ್ಲಿನ ಆಭರಣಗಳು, ಮಲೆನಾಡು ಸವಿರುಚಿ ತಿನಿಸು, ಅಕ್ಕ ಕೆಫೆ, ಮ್ಯೂರಲ್ ಕಲಾ ಚಿತ್ರಗಳು, ಹಸೆ ಚಿತ್ತಾರೆ, ಮಣ್ಣಿನ ಅಲಂಕಾರಿಕ ಮಳಿಗೆ, ಸ್ವದೇಶಿ, ಕೌದಿ, ಈಚಲು ಚಾಪೆ, ಮರದ ಉತ್ಪನ್ನಗಳು, ಟೆರಾಕೋಟ, ಖಾದಿ ಉಡುಪುಗಳು ಎಲ್ಲರ ಗಮನ ಸೆಳೆಯುತ್ತಿದ್ದು ಮಲೆನಾಡಿಗರು ಫಲಪುಪ್ಪ ಪ್ರದರ್ಶನ ನೋಡಿ ಪೋಟೋ ಕ್ಲಿಕಿಸಿ ಖುಷಿ ಪಟ್ಟರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]