ಹುಲ್ಲು ಕೊಯ್ಯುವಾಗ ಹಾವು ಕಡಿದು ರೈತ ಸಾ*ವು !

Written by Mahesha Hindlemane

Published on:

ಹೊಸನಗರ ; ಗದ್ದೆಯಲ್ಲಿ ಹುಲ್ಲು ಕೊಯ್ಯುವ ವೇಳೆ ಹಾವು ಕಚ್ಚಿ ರೈತನೋರ್ವ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ತಾಲೂಕಿನ ಮುಂಬಾರು ಗ್ರಾ.ಪಂ. ವ್ಯಾಪ್ತಿಯ ಮುತ್ತೂರು ಗ್ರಾಮದ ಹುಚ್ಚನಾಯ್ಕ (65) ‌ಮೃತ ರೈತ. ಹುಚ್ಚನಾಯ್ಕ ತಮ್ಮ ಹಸುಗಳಿಗೆ ತಿನ್ನಲು ಹುಲ್ಲನ್ನು ತರಲು ಗದ್ದೆಗೆ ತೆರಳಿದ್ದು, ಹುಲ್ಲು ಕೊಯ್ಯುವ ವೇಳೆ ಹಾವು ಕಾಲಿಗೆ ಕಚ್ಚಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment