ಹೊಸನಗರ ; ಗದ್ದೆಯಲ್ಲಿ ಹುಲ್ಲು ಕೊಯ್ಯುವ ವೇಳೆ ಹಾವು ಕಚ್ಚಿ ರೈತನೋರ್ವ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ.
ತಾಲೂಕಿನ ಮುಂಬಾರು ಗ್ರಾ.ಪಂ. ವ್ಯಾಪ್ತಿಯ ಮುತ್ತೂರು ಗ್ರಾಮದ ಹುಚ್ಚನಾಯ್ಕ (65) ಮೃತ ರೈತ. ಹುಚ್ಚನಾಯ್ಕ ತಮ್ಮ ಹಸುಗಳಿಗೆ ತಿನ್ನಲು ಹುಲ್ಲನ್ನು ತರಲು ಗದ್ದೆಗೆ ತೆರಳಿದ್ದು, ಹುಲ್ಲು ಕೊಯ್ಯುವ ವೇಳೆ ಹಾವು ಕಾಲಿಗೆ ಕಚ್ಚಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

