Ripponpete

ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ರೈತರ ಮನವಿ

ರಿಪ್ಪನ್‌ಪೇಟೆ ; ಮಲೆನಾಡಿನ ವ್ಯಾಪ್ತಿಯಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಅಡಿಕೆ ಬೆಳೆಯಲ್ಲಿ ಸಾಕಷ್ಟು ರೋಗಗಳು ಕಾಣಿಸಿಕೊಂಡು ಬೆಳೆಗಾರ ಪರಿಸ್ಥಿತಿ ಹೇಳದಂತಾಗಿದೆ. ಅಲ್ಲದೆ, ವಿದೇಶಿ ಅಡಿಕೆ ಆಮದಿನಿಂದಾಗಿ ನಮ್ಮ ಮಲೆನಾಡಿನ ಅಡಿಕೆ ಬೆಲೆ ಕಡಿಮೆಯಾಗುವಂತಾಗಿದ್ದು ರೈತ ಸಮೂಹ ಹೈರಾಣಾಗಿದ್ದಾರೆ. ಈ ಎಲ್ಲ ಸಮಸ್ಯೆಗೆ ಕೇಂದ್ರ ಸರ್ಕಾರ ಸ್ಪಂದಿಸಿ ಬೆಳೆಗಾರರ ಹಿತ ಕಾಯುವಂತೆ ಆಗ್ರಹಿಸಿ ಜನವರಿ 18 ರಂದು ಸಾಗರ ಸಂತೆ ಮೈದಾನದಲ್ಲಿ ಏರ್ಪಡಿಸಲಾಗಿರುವ ಅಡಿಕೆ ಬೆಳೆಗಾರರ ಸಮಾವೇಶಕ್ಕೆ ಸಾಗರ-ಹೊಸನಗರ ತಾಲ್ಲೂಕಿನ ಅಡಿಕೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಡಿಕೆ ಬೆಳೆಗಾರ ಸಮಸ್ಯೆ ಪರಿಹಾರಕ್ಕೆ ಬೆಂಬಲಿಸುವಂತೆ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ರೈತರಿಗೆ ಕರೆ ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆ ರಾಮಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಈಗಾಗಲೇ ಮಲೆನಾಡಿನ ವ್ಯಾಪ್ತಿಯಲ್ಲಿ ಆನೆಗಳ ಹಾವಳಿಯಿಂದ ರೈತರು ಕೆಂಗೆಟ್ಟು ಹೋಗಿದ್ದು ಅದನ್ನು ತಡೆಗಟ್ಟುವಂತೆ ಆಬರಣ್ಯ ಇಲಾಖೆ ಗಮನ ಸೆಳೆಯಲಾಗಿದೆ ಹಾಗೂ ಸೊಪ್ಪಿನ ಬೆಟ್ಟದಲ್ಲಿ ಮತ್ತು ಅಕ್ರಮ ಒತ್ತವರಿ ಜಮೀನು ಮಾಡಿಕೊಂಡು ಕೃಷಿ ಮಾಡಲಾಗಿರುವ ರೈತರ ಸಮಸ್ಯೆ ಹೀಗೆ ಹತ್ತು ಹಲವು ರೈತ ಅಡಿಕೆ ಬೆಳೆಗಾರರ ಸಮಸ್ಯೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಸೆಳೆಯುವ ಮೂಲಕ ಶಾಶ್ವತ ಪರಿಹಾರ ಒದಗಿಸುವ ಕುರಿತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್‌ಚೌವ್ಹಾಣ್ ಮತ್ತು ರಾಜ್ಯ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಇವರ ಮೂಲಕ ಸರ್ಕಾರಕ್ಕೆ ಅಡಿಕೆ ಬೆಳೆಗಾರ ರೈತ ಸಮೂಹ ಪಕ್ಷಾತೀತವಾಗಿ ಬೆಂಬಲಿಸಿ ಮನವಿ ಸಲ್ಲಿಸುವುದಾಗಿ ವಿವರಿಸಿದರು.

ಜನವರಿ 18 ರಂದು ಸಾಗರದ ಸಂತೆ ಮೈದಾನದಲ್ಲಿ ಸಾಗರ-ಸೊರಬ-ಹೊಸನಗರ ತಾಲ್ಲೂಕಿನ ಅಡಿಕೆ ಪರಿಷ್ಕರಣ ಮತ್ತು ಮರಾಟ ಸಹಕಾರ ಸಂಘ ಮತ್ತು ತೋಟಗರ‍್ಸ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಎಪಿಎಂಸಿ ಪ್ರಾಂಗಣ ಸಾಗರ ಸುವರ್ಣ ಮಹೋತ್ಸವ ವರ್ಷ ಏರ್ಪಡಿಸಲಾಗಿರುವ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶವನ್ನು ಕೇಂದ್ರ ಕೃಷಿ ರೈತ ಕಲ್ಯಾಣ ಸಚಿವರು ಶಿವರಾಜ್‌ಸಿಂಗ್ ಚೌವ್ಹಾಣ್ ಉದ್ಘಾಟಿಸುವರು. ರಾಜ್ಯ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸ್ಮರಣಿಕೆ ಬಿಡುಗಡೆ ಮಾಡುವರು.

ಸಂಸದ ಬಿ.ವೈ.ರಾಘವೇಂದ್ರ ವಸ್ತುಪ್ರದರ್ಶನವನ್ನು ಉದ್ಘಾಟಿಸುವರು, ರಾಜ್ಯ ಶಿಕ್ಷಣ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಗೌರವಸಮರ್ಪಣೆ ಜರುಗಲಿದ್ದು ಈ ಸಮಾವೇಶದ ಅಧ್ಯಕ್ಷತೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವಹಿಸುವರು.

ಈ ಸಮಾವೇಶದಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ಸಮಿತಿ ಗೌರವಾಧ್ಯಕ್ಷ ಹೆಚ್.ಎಸ್.ಮಂಜಪ್ಪ, ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರ ಸಂಘದ ಅಧ್ಯಕ್ಷ ವ.ಶಂ ರಾಮಚಂದ್ರಭಟ್ ಹಾಗೂ ಜಿಲ್ಲೆಯ ರಾಜಕೀಯ ಮುಖಂಡರು ಸಹಕಾರಿ ಸಂಘದ ಅಧ್ಯಕ್ಷರುಗಳು ಲೋಕಸಭಾ ಸದಸ್ಯರು ಭಾಗವಹಿಸುವರು. ಇದೇ ಸಮಾವೇಶದಲ್ಲಿ ಹಿರಿಯರು ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಅಡಿಕೆ ಬೆಳೆಗಾರ ಸಂಘದ ಸಹ ಸಂಚಾಲಕ ಹಕ್ರೆ ಮಲ್ಲಿಕಾರ್ಜುನ, ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎನ್.ಸತೀಶ್, ಮುಖಂಡರಾದ ಆರ್.ಟಿ.ಗೋಪಾಲ, ಸುಧೀಂದ್ರ ಪೂಜಾರಿ, ಎಂ.ಸುರೇಶ್‌ಸಿಂಗ್, ನಾಗಾರ್ಜುನಸ್ವಾಮಿ, ಮಂಜುಳಾ ಕೇತಾರ್ಜಿರಾವ್, ಯೋಗೇಂದ್ರಗೌಡ, ದೀಪಾ, ಪಿ.ರಮೇಶ್, ಸುಧೀರ್, ಮುರುಳಿಧರ ಕೆರೆಹಳ್ಳಿ ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>