Ripponpete

ರಿಪ್ಪನ್‌ಪೇಟೆ ; ವಿದ್ಯುತ್ ಅವ್ಯವಸ್ಥೆ ವಿರೋಧಿಸಿ ರೈತರಿಂದ ಮೆಸ್ಕಾಂ ಕಚೇರಿಗೆ ಮುತ್ತಿಗೆ

ರಿಪ್ಪನ್‌ಪೇಟೆ ; ಕಳೆದೊಂದು ವಾರದಿಂದ ಲೋಡ್‌ಶೆಡ್ಡಿಂಗ್‌ನಿಂದಾಗಿ ವಿದ್ಯುತ್ ಬಂದ ತಕ್ಷಣ ಕೃಷಿ ಎಲ್ಲಾ ಪಂಪ್‌ಸೆಟ್‌ಗಳು ಚಾಲು ಆಗುವುದರಿಂದ ಪರಿವರ್ತಕವು ಪದೇ ಪದೇ ಸುಟ್ಟು ಹೋಗುತ್ತಿದ್ದು ಈಗಾಗಲೇ 2-3 ಬಾರಿ ಸುಟ್ಟು ಹೋಗಿರುವ ಟಿ.ಸಿ.ಯನ್ನು ದುರಸ್ಥಿಗೊಳಿಸಿ ತಂದು ಅಳವಡಿಸಲಾದರೂ ಕೂಡಾ ನಮ್ಮೂರಿನಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿ ಕಗ್ಗಲಿ ಶರಾವತಿ ಕಾಲೋನಿ ಗ್ರಾಮಸ್ಥರು ಇಂದು ರಿಪ್ಪನ್‌ಪೇಟೆ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದರೊಂದಿಗೆ ಅರೆ ಬೆತ್ತಲೆ ಪ್ರತಿಭಟನೆಗೆ ಮುಂದಾದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಹಿಂದೆ 63 ಕೆ.ವಿ. ಟ್ರಾನ್ಸ್‌ಫಾರ್ಮರ್ ಅನ್ನು ಅಳವಡಿಸಲಾಗಿದ್ದು ಇದರಿಂದ ಗೃಹ ಬಳಕೆ ಹಾಗೂ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ 63 ಕೆ.ವಿ. ಟಿಸಿಗೆ ಅಧಿಕವಾಗಿ ವಿದ್ಯುತ್ ಬಳಕೆ ಮಾಡಿಕೊಳ್ಳುವುದರಿಂದಾಗಿ ಟಿಸಿ ಸುಟ್ಟು ಹೋಗಲು ಕಾರಣವಾಗಿದೆ. ಆದ್ದರಿಂದ ಹೆಚ್ಚುವರಿಯಾಗಿ ಇನ್ನೊಂದು 63 ಕೆ‌.ವಿ ಟಿ.ಸಿಯನ್ನು ಅಳವಡಿಸಿ ಎಂದು ಪ್ರತಿಭಟನಾ ನಿರಂತರು ಆಗ್ರಹಿಸಿದರು.

ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು ಇದೇ ತಿಂಗಳಲ್ಲಿ ಎಸ್‌ಎಸ್ಎಲ್ಸಿ ಪರೀಕ್ಷೆ ಆರಂಭವಾಗುತ್ತಿದ್ದು ನಮ್ಮೂರಿನಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಆದ್ದರಿಂದ ಕೂಡಲೇ ನಮ್ಮೂರಿಗೆ ಹೆಚ್ಚುವರಿ ಎರಡು 63 ಕೆ.ವಿ. ಪರಿವರ್ತಕವನ್ನು ಅಳವಡಿಸುವಂತೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ಮನವಿ ಮೂಲಕ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಗ್ಗಲಿ ಶರಾವತಿ ಕಾಲೋನಿಯ ಗ್ರಾಮಸ್ಥರಾದ ಲಿಂಗಪ್ಪ ಕಗ್ಗಲಿ, ಯುವರಾಜಗೌಡ, ಮಲ್ಲಿಕಾರ್ಜುನ ಗವಟೂರು, ಷಣ್ಮುಖಪ್ಪಗೌಡ, ಜಯರಾಮ, ಶ್ರೇಯಸ್, ಕಾರ್ತಿಕ, ಚಂದ್ರಶೇಖರ್, ಬಸವರಾಜ್, ಪೊನ್ನಪ್ಪ, ರಮೇಶ,
ನಾಗರತ್ನ ಶ್ಯಾಮಸುಂದರ್, ಯುವರಾಜ್, ಕೆ.ಎಂ. ವಾಸು, ವಿಜಯ, ಗೌರಮ್ಮ, ಇನ್ನಿತರರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>