News

FASTag ವಾರ್ಷಿಕ ಪಾಸ್ : ಏನಿದು? ಪ್ರಸ್ತುತ ಬಳಕೆದಾರರ ಮೇಲೆ ಎಫೆಕ್ಟ್ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

FASTag Annual Pass
FASTag Annual Pass

FASTag Annual Pass:ಈ ನಿರ್ದೇಶಿತ ನೀತಿಯನುಸಾರ, ಮಾಲೀಕರು ಕೇವಲ ಒಂದು ಬಾರಿ ವಾರ್ಷಿಕ ರೂ. 3,000 ಪಾವತಿಸುವ ಮೂಲಕ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ ವೇ ಗಳು ಮತ್ತು ರಾಜ್ಯ ಎಕ್ಸ್‌ಪ್ರೆಸ್‌ ವೇಗಳಲ್ಲಿ ಅನಿಯಮಿತ ದೂರದ ವರೆಗೂ ಪ್ರಯಾಣಿಸಬಹುದಾಗಿದೆ. ಈ ನೀತಿ ಜಾರಿಗೆ ಬಂದ ಬಳಿಕ, ದೇಶದಾದ್ಯಂತ ಪ್ರಯಾಣಕ್ಕಾಗಿ FASTag ರೀಚಾರ್ಜ್ ಮಾಡುವ ಅವಶ್ಯಕತೆ ಇರುವುದಿಲ್ಲ.

WhatsApp Group Join Now
Telegram Group Join Now
Instagram Group Join Now

ದೂರವನ್ನು ಆಧರಿಸಿದ ದರದ ವಿಧಾನ:

ಈ ನೀತಿಯಲ್ಲಿ ಪ್ರಯಾಣಿಸಿದಷ್ಟು ಪಾವತಿ (pay – as – you – go – modal) ಮಾದರಿಯನ್ನು ಪ್ರಸ್ತಾಪಿಸಲಾಗಿದ್ದು, 100 ಕಿಮೀಗೆ ₹50 ದರವನ್ನು ನಿಗದಿಪಡಿಸಲಾಗಿದೆ. ಇದು ಆಗಾಗ ಪ್ರಯಾಣಿಸದೇ ಇರುವವರಿಗೆ ಹೆಚ್ಚು ಉಪಯುಕ್ತವಾಗಿದೆ.

ಪ್ರಸ್ತುತ FASTag ಇರುವ ಬಳಕೆದಾರರ ಬಗ್ಗೆ ಏನು?

ವಾಹನದ ಮಾಲೀಕರು ಯಾವುದೇ ಹೆಚ್ಚುವರಿ ದಾಖಲೆಗಳು ಅಥವಾ ಖಾತೆ ಬದಲಾವಣೆಗಳ ಅಗತ್ಯವಿಲ್ಲದೇ, FASTag ಬಳಕೆದಾರರು ತಮ್ಮ ಈಗಿನ ಖಾತೆಗಳಿಂದಲೇ ಹೊಸ ನೀತಿಗೆ ಬದಲಾಯಿಸಬಹುದಾಗಿದೆ. ಜೊತೆಗೆ ಈ ಹಿಂದಿನ 15 ವರ್ಷಗಳ ಅವಧಿಗೆ ₹30,000 ರ ಒಂದು ಬಾರಿ ಪಾವತಿಸುವ ಲೈಫ್ ಟೈಮ್ FASTag ನೀತಿಯನ್ನು ರದ್ದು ಮಾಡಲಾಗಿದೆ.

ಟೋಲ್ ಬೂತ್‌ಗಳಲ್ಲಿ ಅಡ್ಡಿ ತಡೆಗಳು ಇಲ್ಲ :

ಪ್ರಸ್ತಾಪಿತ ನೀತಿಯಂತೆ, ಟೋಲ್ ಬೂತ್‌ಗಳಲ್ಲಿ ಯಾವುದೇ ರೀತಿಯ ಭೌತಿಕ ಅಡ್ಡಿ ತಡೆಗಳು ಇರದು. ಇತ್ತೀಚಿನ ಸೆನ್ಸರ್ ಆಧಾರಿತ ವ್ಯವಸ್ಥೆಗಳನ್ನು ಕೂಡಾ ಹಂತಹಂತವಾಗಿ ತೆರೆವು ಮಾಡಲಾಗುತ್ತದೆ. ಈ ಬದಲಾವಣೆಯಿಂದ ಪ್ರಯಾಣವು ಮತ್ತಷ್ಟು ಸುಲಭ ಮತ್ತು ವೇಗವಾಗುವ ನಿರೀಕ್ಷೆಗಳಿವೆ. ಜೊತೆಗೆ, ಅಡೆ ತಡೆಯಿಲ್ಲದ ಟೋಲ್ ಬೂತ್‌ ಗಳಿಂದಾಗಿ ವಾಹನ ದಟ್ಟಣೆ ಕಡಿಮೆಯಾಗುತ್ತದೆ ಹಾಗೂ ಇದರಿಂದ ಇಂಧನ ಬಳಕೆ ಸಹಾ ಕಡಿಮೆಯಾಗುತ್ತದೆ ಎನ್ನಲಾಗಿದೆ.

ಟೋಲ್ ಆದಾಯ ಏನಾಗಲಿದೆ ?

ಈ ನೀತಿಯು ಜಾರಿಗೆ ಬಂದಲ್ಲಿ ಹೆದ್ದಾರಿ ಗುತ್ತಿಗೆದಾರರ ಟೋಲ್ ಆದಾಯದ ಮೇಲೆ ಇದು ಪರಿಣಾಮವನ್ನು ಬೀರುತ್ತದೆ ಎನ್ನುವ ನಿರೀಕ್ಷೆ ಇದೆ. ಇದರ ಪರಿಣಾಮವಾಗಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಡಿಜಿಟಲ್ ಪ್ರಯಾಣ ದತ್ತಾಂಶವನ್ನು ಆಧರಿಸಿ ಪರಿಹಾರ ಯೋಜನೆಯನ್ನು ರೂಪಿಸುತ್ತದೆ. ಹಲವು ನೂತನ ಕ್ರಮಗಳನ್ನು ಪರಿಚಯಿಸುವ ಮೂಲಕ ಟೋಲ್ ವಂಚನೆಯನ್ನು ತಡೆಯಲು ಬ್ಯಾಂಕ್‌ ಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗುವುದು.

ಗಮನಿಸಬೇಕಾದ ವಿಚಾರ ಏನೆಂದರೆ ಈ ಹೊಸ ಟೋಲ್ ಸಂಗ್ರಹ ನೀತಿಯ ಬಗ್ಗೆ ಸರ್ಕಾರ ಇನ್ನೂ ಕೂಡಾ ಯಾವುದೇ ಅಧಿಕೃತ ದೃಢೀಕರಣವನ್ನು ನೀಡಿಲ್ಲ.

Read More

ಹೊಸನಗರ : ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ಗೆ ನವಮಿ ಸೇರ್ಪಡೆ

ಜೂನ್ 30ರಿಂದ ಹಣ ಕಳಿಸುವ ಮೊದಲು ಫೋನ್ ಪೇ, ಗೂಗಲ್ ಪೇ ಬಗ್ಗೆ ತಿಳಿದುಕೊಂಡರೆ ಒಳ್ಳೆಯದು!

ಹೊಸನಗರ ; ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 18 ಸೆಂ.ಮೀ. ಮಳೆ

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Koushik Kaapi

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.

Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ವೆಬ್‌ಸೈಟ್

error: Content is protected !!