Ripponpete

ಆನೆ ತಡೆಗೆ ಸೋಲಾರ್ ಬೇಲಿ ಅಳವಡಿಸುವಂತೆ ಅರಣ್ಯಾಧಿಕಾರಿಗಳಿಗೆ ಬೇಳೂರು ಗೋಪಾಲಕೃಷ್ಣ ಸೂಚನೆ

ರಿಪ್ಪನ್‌ಪೇಟೆ ; ಅರಸಾಳು, ಕೆಂಚನಾಲ, ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ದಿಢೀರ್ ಕಾಣಿಕೊಂಡಿರುವ ಆನೆಗಳು ರೈತರು ಬೆಳೆದ ಬಾಳೆ ಮತ್ತು ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ತಿಂದು ಧ್ವಂಸಗೊಳಿಸಿರುವ ಪ್ರದೇಶಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಶುಕ್ರವಾರ ಮಧ್ಯಾಹ್ನ ಅರಣ್ಯ ಇಲಾಖೆಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವುದರೊಂದಿಗೆ ಹಾನಿಗೊಳಗಾಗಿರುವ ರೈತರಿಗೆ ವೈಯಕ್ತಿಕ ಧನ ಸಹಾಯವನ್ನು ನೀಡುವ ಮೂಲಕ ಅರಣ್ಯ ಇಲಾಖೆಯಿಂದ ಪರಿಹಾರ ಕೊಡುವಂತೆ ಸೂಚನೆ ನೀಡಿದರು.

WhatsApp Group Join Now
Telegram Group Join Now
Instagram Group Join Now

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕೆಂಚನಾಲ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮಸರೂರು, ಮಾಣಿಕೆರೆ, ಹೊನ್ನಕೊಪ್ಪ, ಕಮದೂರು ಬಳಿ ತೋಟಕ್ಕೆ ಆನೆ ದಾಳಿ ನಡೆಸಿ ಬಾಳೆ ಧ್ವಂಸಗೊಳಿಸಿದ್ದು ಕಳೆದ ವರ್ಷ ಸಹ ಇದೇ ಜಾಗದಲ್ಲಿ ಆನೆ ಬಂದು ಹೋಗುವ ಮೂಲಕ ಬೆಳೆ ಹಾನಿಗೊಳಿಸಿರುತ್ತವೆ‌. ಆದ್ದರಿಂದ ಮುಂದಿನ ದಿನಗಳಲ್ಲಿ ಆನೆ ಬಾರದಂತೆ ಸೋಲಾರ್ ಗಾರ್ಡ್ ಅಳವಡಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ತಕ್ಷಣ ಅಳವಡಿಸುವ ಕಾರ್ಯ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ಬೆಳ್ಳೂರು ಗ್ರಾಮ ಪಂಚಾಯಿತ್ ವ್ಯಾಪ್ತಿಯ ಕಳಸೆ ಗ್ರಾಮದಲ್ಲಿ ಸಹ ಇದೇ ರೀತಿಯಲ್ಲಿ ರೈತರ ಜಮೀನಿಗೆ ನುಗ್ಗಿ ಬೆಳೆ ನಾಶಗೊಳಿಸಿರುತ್ತವೆ. ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ ಎಂದು ರೈತರು ತಮ್ಮ ನೋವನ್ನು ತೊಡಿಕೊಂಡಾಗ ಶಾಸಕರು ಸ್ಪಂದಿಸಿ ವೈಯಕ್ತಿಕ ಧನ ಸಹಾಯ ನೀಡುವುದರೊಂದಿಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗಳಿಗೆ ಆನೆಗಳ ಸ್ಥಳಾಂತರ ಮಾಡಿ ರೈತರನ್ನು ಉಳಿಸುವ ಕೆಲಸ ಮಾಡಿ ಬೆಳೆ ಹಾನಿಯಾದ ಯಾವುದೇ ರೈತನಿಗೂ ಪರಿಹಾರ ನೀಡುವ ಬಗ್ಗೆ ತಾರತಮ್ಯ ಮಾಡದೆ ಸಮರ್ಪಕವಾಗಿ ಪರಿಶೀಲನೆ ನಡಸಿ ಪರಿಹಾರ ಕೊಡುವ ವ್ಯವಸ್ಥೆ ಮಾಡುವಂತೆ ಖಡಕ್ ಸೂಚನೆ ನೀಡಿದರು.

ಅರಣ್ಯ ಜಾಗ ಒತ್ತುವರಿದಾರರ ರೈತರಿಗೆ ನೋಟಿಸ್ !

ಕೆಂಚನಾಲ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಅರಸಾಳು ವಲಯ ವ್ಯಾಪ್ತಿಯಲ್ಲಿ ಬರುವ ಮಸರೂರು ಮಾಣಿಕೆರೆ ಗ್ರಾಮದ ಅರಣ್ಯ ಸರ್ವೇ ನಂಬರ್‌ನಲ್ಲಿ ಅಕ್ರಮ ಸಾಗುವಳಿ ಮಾಡಿಕೊಂಡಿರುವ ರೈತನೋರ್ವರಿಗೆ ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದು ಶಾಸಕರ ಬಳಿ ರೈತ ನೋಟಿಸ್ ಹಿಡಿದುಕೊಂಡು ತೋರಿಸಿದಾಗ ಸ್ಥಳದಲ್ಲಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಅವರು, ಈ ರೀತಿಯಾಗಿ ನೋಟಿಸ್ ನೀಡಿದರೆ ಮುಂದೆ ನಿಮ್ಮಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಹಾಸನ-ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಾಗಿ ಆನೆಗಳು ವಾಸ ಮಾಡುತ್ತಿದ್ದು ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಅವುಗಳು ಬರುವ ಜಾಗವನ್ನು ಬಂದ್ ಮಾಡುವ ಕಾರ್ಯ ಮಾಡಲಾಗುವುದು ಅಲ್ಲದೆ ಕಳೆದ ವರ್ಷ ರೈತನೋರ್ವನನ್ನು ಬಲಿ ಪಡೆದಿರುವುದು ಇನ್ನು ಜನಮಾನಸದಲ್ಲಿ ಮಾಸುವ ಮುನ್ನವೇ ಪುನಃ ಆನೆಗಳು ಬಂದಿರುತ್ತವೆ. ಆದರೆ ವಿರೋಧ ಪಕ್ಷದವರು ಉದ್ದೇಶ ಪೂರ್ವಕವಾಗಿ ಇಲ್ಲಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ. ಅವರ ಅವಧಿಯಲ್ಲಿ ಈ ರೀತಿ ದಾಳಿ ಮಾಡಿದಾಗ ಏನು ಕಡಿದು ಗುಡ್ಡೆ ಹಾಕಿದ್ದಾರೆ ಹೇಳಲ್ಲಿ ಎಂದು ಸವಾಲು ಹಾಕಿದ ಅವರು, ಅವರ ಅವಧಿಯಲ್ಲಿ ಯಾವ ಅರಣ್ಯಾಧಿಕಾರಿಗಳನ್ನು ಅಮಾನತುಪಡಿಸಿ ಕ್ರಮ ಜರುಗಿಸಿದ್ದಾರೆಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಹೊಸನಗರ ತಹಸೀಲ್ದಾರ್ ಭರತ್‌ರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ. ಈಶ್ವರಪ್ಪಗೌಡ, ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದಮೌಳಿಗೌಡ, ಮುಖಂಡರಾದ ರವೀಂದ್ರ ಕೆರೆಹಳ್ಳಿ, ಡಿ.ಈ.ಮಧುಸೂದನ್, ಗಣಪತಿ, ಎನ್.ಚಂದ್ರೇಶ್, ನಿರೂಪ್‌ಕುಮಾರ್, ಆಸೀಫ್‌ಭಾಷಾ, ಧನಲಕ್ಷ್ಮಿ, ನಿರುಪಮ ರಾಕೇಶ್, ಹೇಮಾ ಮಂಜಪ್ಪ, ಶಾಹಿರಾಬಾನು, ಉಬೇದುಲ್ಲ ಶರೀಫ್ ಸೇರಿದಂತೆ ಹಲವರು ಹಾಜರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!