Ripponpete

ಕಣ್ಮುಚ್ಚಿ ಕುಳಿತ ಅಧಿಕಾರಿ ವರ್ಗ ; ಒತ್ತುವರಿ ಹೆಸರಲ್ಲಿ ಅರಣ್ಯ, ಕಂದಾಯ ಭೂಮಿ ಕಬಳಿಕೆ, ಲಕ್ಷಾಂತರ ರೂ‌.ಗಳಿಗೆ ಮಾರಾಟ !

ರಿಪ್ಪನ್‌ಪೇಟೆ ; ಹೊಸನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಒತ್ತುವರಿ ಹೆಸರಿನಲ್ಲಿ ಕಂದಾಯ, ಅರಣ್ಯ ಭೂಮಿ ಕಬಳಿಸಿ ಲಕ್ಷಾಂತರ ರೂಪಾಯಿಗಳಿಗೆ ಬಾಂಡ್ ಪೇಪರ ಮೂಲಕ ಕರಾರು ಪತ್ರ ಮಾಡಿ ಮಾರಾಟ ಮಾಡುತ್ತಿರುವುದು ಅವ್ಯಾಹತವಾಗಿ ನಡೆಯುತ್ತಿದ್ದರೂ ಕೂಡಾ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ತಮ್ಮ ಜೇಬು ಭರ್ತಿ ಮಾಡಿಕೊಂಡು ಗಪ್ ಚುಪ್ ಆಗಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಹೌದು, ಬಗರ್‌ಹುಕುಂ ನೆಪದಲ್ಲಿ ಅರಣ್ಯದಲ್ಲಿ ಸಾಕಷ್ಟು ಬೆಲೆ ಬಾಳುವ ಮರಗಳ ಅಕ್ರಮ ಕಡಿತಲೆ ಮಾಡಿ ಕೆಲವರು ಮಣ್ಣಿನಡಿ ಮುಚ್ಚಿಡಲಾಗಿ ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳ ಜೇಬು ತುಂಬಿ ಇತ್ತ ತಲೆ ಹಾಕಿಯೂ ಸಹ ನೋಡದಂತೆ ಮಂಕುಬೂದಿ ಎರಚಿ ಅಕ್ರಮ ಭೂಮಿ ಒತ್ತುವರಿ ಮಾಡಿ ಸ್ವಾಹ ಮಾಡಿಕೊಳ್ಳುತ್ತಿದ್ದರು ಅಧಿಕಾರಿಗಳು ಮಾತ್ರ ತಮಗೇನು ಗೊತ್ತಿಲ್ಲದವರಂತೆ ಇರುವುದರ ಹಿಂದಿನ ಮರ್ಮ ಏನು? ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.

ಕೆಲವು ರೈತರು ತಮ್ಮ ಖಾತೆ ಜಮೀನಿನಲ್ಲಿ ಅಡಿಕೆ, ಬಾಳೆ ಹಾಕುವ ಉದ್ದೇಶದಿಂದ ಜಮೀನಿನಲ್ಲಿನ ಬೆಲೆ ಬಾಳುವ ಮರಗಳನ್ನು ಇಲಾಖೆಯವರ ಅನುಮತಿ ಇಲ್ಲದೆ ಅಕ್ರಮವಾಗಿ ಕಡಿತಲೆ ಮಾಡುತ್ತಿದ್ದರೂ ಅರಣ್ಯ ರಕ್ಷಕರು ಮಾತ್ರ ಕಣ್ಮುಚ್ಚಿ ಕೊಂಡಿರುವುದು ಸಾರ್ವಜನಿಕರಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಯಾರಾದರೂ ಬಡವರು ಅಲ್ಪ-ಸ್ವಲ್ಪ ಜಾಗ ಮಾಡಿಕೊಂಡು ಬೇಲಿ ಹಾಕಿದರೆ ಸಾಕು ಅರಣ್ಯ ರಕ್ಷಕರು, ವೀಕ್ಷಕರು ಹಾಜರ್ ಆಗಿ ತೆರವುಗೊಳಿಸುವಂತೆ ದುಬಾಲು ಬೀಳುವುದರೊಂದಿಗೆ ಹಣ ಪೀಕುವಂತೆ ಒತ್ತಡ ಹಾಕಿ ಕುಳಿತು ಬಿಡುತ್ತಾರೆ. ಹಣ ಕೊಟ್ಟರೆ ನಮಗೂ ಈ ಜಾಗಕ್ಕೂ ಸಂಬಂಧವಿಲ್ಲ ಕಂದಾಯ ಜಮೀನು ಎಂದು ಹೇಳಿ ಅಲ್ಲಿಂದ ಕಾಲ್ಕೀಳುತ್ತಾರೆ.

ಹೊಸನಗರ ತಾಲ್ಲೂಕಿನ ಹುಂಚ ಹೋಬಳಿ ವ್ಯಾಪ್ತಿಯ ಕೊಳವಳ್ಳಿ, ಬಿದರಹಳ್ಳಿ, ವಡಾಹೊಸಳ್ಳಿ, ಹಾಲಂದೂರು, ಕೋಟೆತಾರಿಗ, ಬೆಳಕೋಡು ಹಾಗೂ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಕ್ಕಳಲೇ, ನೇರಲುಮನೆ, ಬಾಳೂರು, ಗವಟೂರು ಮತ್ತು ಹರತಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿ ದೊಂಬೆಕೊಪ್ಪ ಗ್ರಾಮದ ಸುತ್ತಮುತ್ತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಮೀಸಲಿರಿಸಲಾಗಿದ್ದ ಜಾಗದಲ್ಲಿನ ಬೃಹತ್ ಗಾತ್ರದ ಬೆಲೆ ಬಾಳುವ ಮರಗಳ ಮಾರಣ ಹೋಮದೊಂದಿಗೆ ಜಾಗ ಬರಿದಾಗುತ್ತಿದ್ದರೂ ಅಧಿಕಾರಿ ವರ್ಗ ಮಾತ್ರ ತಮಗೇನು ಗೊತ್ತಿಲ್ಲವೆಂಬಂತೆ ಜಾಣಕುರುಡಾಗಿರುವುದರ ಹಿಂದೆ ಲಂಚದ ಹಣ ಕೆಲಸ ಮಾಡಿದಂತಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಇದರ ಮಧ್ಯೆ ಹಲವರು ಸರ್ಕಾರಿ ಜಾಗವನ್ನು ಸಹ ಖಾತೆ ಜಮೀನಿನ ಜೊತೆ ಸೇರಿಸಿ ಭೂ ಪರಿವರ್ತನೆ ಮಾಡುವ ಹುನ್ನಾರ ಸಹ ನಡೆಯುತ್ತಿದ್ದು ಅಧಿಕಾರಿಗಳು ಮಾತ್ರ ಐಶಾರಾಮಿ ಜೀವನ ಮಾಡುವುದರಲ್ಲಿ ಯಾವ ಜಾಗವಾದರೇನು ನಮಗೆ ಸೇರಬೇಕಾದ ಹಣ ಬಂದರೆ ಸಾಕು ಎಂದು ಬಕಪಕ್ಷಿಯಂತೆ ಕಾಯುತ್ತಿರುತ್ತಾರೆ.

ಇನ್ನಾದರೂ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಭೂ ಒತ್ತುವರಿ ದಾರರಿಗೆ ಕ್ರಮ ಕೈಗೊಳ್ಳಲು ಮುಂದಾಗುವರೆ ಕಾದು ನೋಡಬೇಕಾಗಿದೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]