ಹೊಸನಗರ ; ಮಾಜಿ ಸಚಿವ ಹರತಾಳು ಹಾಲಪ್ಪರ 64ನೇ ಹುಟ್ಟುಹಬ್ಬ ಆಚರಣೆ

Written by malnadtimes.com

Published on:

ಹೊಸನಗರ ; ಕ್ಷೇತ್ರಕ್ಕೆ ಶಾಸಕರಾಗಿ ಕರ್ನಾಟಕ ರಾಜ್ಯದ ಸಚಿವರಾಗಿ ಸೇವೆ ಸಲ್ಲಿಸುವುದರ ಜೊತೆಗೆ ತಾಲ್ಲೂಕಿನ ಅಭಿವೃದ್ಧಿಯಲ್ಲಿ ಚಾಣಕ್ಷ ರಾಜಕಾರಣಿಯಾಗಿ ಹೊಸನಗರ ತಾಲ್ಲೂಕನ್ನು ಅಭಿವೃದ್ಧಿ ಮಾಡುವುದರಲ್ಲಿ ಹರತಾಳು ಹಾಲಪ್ಪ ಶ್ರಮಿಸಿದ್ದಾರೆ ಎಂದು ಬಿಜೆಪಿ ಮಂಡಲದ ಅಧ್ಯಕ್ಷ ಮತ್ತಿಮನೆ ಸುಬ್ರಮಣ್ಯ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಬಿಜೆಪಿ ಕಛೇರಿಯಲ್ಲಿ ಹರತಾಳು ಹಾಲಪ್ಪನವರ 64ನೇ ಹುಟ್ಟು ಹಬ್ಬವನ್ನು ಆಚರಿಸಲಾಗಿದ್ದು ಈ ಸಂದರ್ಭದಲ್ಲಿ ಹೊಸನಗರದ ಸಾರ್ವಜನಿಕ ಆಸ್ಪತ್ರೆಯ ಹೊರ ಮತ್ತು ಒಳ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ನಂತರ ರಾಮಚಂದ್ರಪುರ ಮಠದ ಗೋಶಾಲೆಗೆ ಒಣಹುಲ್ಲು ವಿತರಿಸಿ ತಾಲ್ಲೂಕಿನ ಕೆಲವು ಬಸ್ ಸ್ಟ್ಯಾಂಡ್‌ಗಳಿಗೆ ಸುಣ್ಣ-ಬಣ್ಣ ಹಚ್ಚಿ ನಂತರ ಮಾತನಾಡಿದರು.

ಹಾಲಪ್ಪನವರ ಮನಸ್ಸು ಮೃದು ರೀತಿಯಲ್ಲಿದ್ದು ಯಾವುದೇ ವಿಷಯವನ್ನು ನೇರ ನುಡಿಗಳಿಂದ ಮಾತನಾಡುತ್ತಾರೆ, ಅದು ಇಂದಿನ ಯುವ ಪೀಳಿಗೆಗೆ ಆಗುತ್ತಿಲ್ಲ. ಕೆಲವು ರಾಜಕಾರಣಿಗಳು ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದರೆ ಸಾಕು ಭಾರಿ ಒಳ್ಳೆಯವರಾಗಿ ಕಾಣುತ್ತಾರೆ. ಯಾವ ಅಭಿವೃದ್ಧಿ ಮಾಡದಿದ್ದರೂ ಯಾವ ಕೆಲಸ ಮಾಡದಿದ್ದರೂ ಅವರು ಒಳ್ಳೆಯವರಾಗಿ ಕಾಣುತ್ತಾರೆ. ಹಾಲಪ್ಪನವರು ಅಭಿವೃದ್ಧಿ ವಿಷಯದಲ್ಲಿ ಯಾರು ಮಾತನಾಡುವ ಹಾಗಿಲ್ಲ. ಇವರು ಇನ್ನೂ ಬಹಳ ವರ್ಷಗಳ ಕಾಲ ರಾಜಕೀಯದಲ್ಲಿದ್ದು ಇನ್ನಷ್ಟು ಅಭಿವೃದ್ಧಿ ಮಾಡಲಿ ಎಂದರು.

ಈ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಗಣಪತಿ ಬಿಳಗೋಡು, ಮಂಡಾನಿ ಮೋಹನ್, ಸುರೇಶ್ ಸ್ವಾಮಿರಾವ್, ಉಮೇಶ್ ಹಾಲಗದ್ದೆ, ಎ.ವಿ. ಮಲ್ಲಿಕಾರ್ಜುನ, ಶ್ರೀಪತಿರಾವ್, ಮನೋಧರ್, ನೇರಲೆ ರಮೇಶ್, ಆಶಾ ರವೀಂದ್ರ, ಸುಮಾ ಸುರೇಶ್, ಅಭಿಲಾಷ್ ಚಿಕ್ಕಮಣತಿ, ಅಬ್ಬಿ ಕಿರಣ್, ಕಾಲಸಸಿ ಸತೀಶ, ಹರೀಶ್, ಗಣೇಶ್‌ ಹೀರೆಮಣತಿ, ಓಂಕೇಶ ಗೌಡ, ಶ್ರೀಧರ ಚಿಕ್ಕನಕೊಪ್ಪ, ಪ್ರವೀಣ್ ಕುಮಾರ್, ವಿಜಯ ಕುಮಾರ, ಕಾವೇರಿ, ಸತ್ಯನಾರಾಯಣ ವಿ, ಮಹೇಶ, ಮಂಜುನಾಥ ಸಂಜೀವ, ಪುರುಷೋತ್ತಮ, ಬಸವರಾಜ್ ಚಾಲುಕ್ಯ, ಗಣಪತಿ, ಕಾರಣಗಿರಿ ಕಾವ್ಯ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment