ಪ್ರತಿಭಾ ಕಾರಂಜಿ ಮಕ್ಕಳ ಸಾಂಸ್ಕೃತಿಕ ಮತ್ತು ಮಾನಸಿಕ ಜ್ಞಾನತ್ವಕ್ಕೆ ಪೂರಕ ; ಶೇಷಾಚಲ ಜಿ.ನಾಯ್ಕ್

Written by Mahesha Hindlemane

Published on:

ರಿಪ್ಪನ್‌ಪೇಟೆ ; ಪ್ರತಿಭಾ ಕಾರಂಜಿ ಮಕ್ಕಳ ಸಾಂಸ್ಕೃತಿಕ ಮತ್ತು ಮಾನಸಿಕ ಜ್ಞಾನತ್ವಕ್ಕೆ ಪೂರಕ ವಾತಾವರಣ ಸೃಷ್ಠಿಸಲಿದೆ ಎಂದು ಹೊಸನಗರ ತಾಲ್ಲೂಕು ಅಕ್ಷರ ದಾಸೋಹ ಮತ್ತು ಪಿ.ಎಂ.ಪೋಷಣ್ ಅಭಿಯಾನ ಸಹಾಯಕ ನಿರ್ದೇಶಕ ಶೇಷಾಚಲ ಜಿ.ನಾಯ್ಕ್ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಸರ್ಕಾರಿ ಸದವಿ ಪೂರ್ವ ಕಾಲೇಜ್‌ನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಕೆರೆಹಳ್ಳಿ ಹೋಬಳಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ 2025-26ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜ್ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ. ಅಧ್ಯಕ್ಷ ಚಂದ್ರಪ್ಪ ಡಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳು ಪಠ್ಯೇತರ ಚಟುವಟಿಕೆಗೆ ಪೂರಕವಾಗಿದ್ದು ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರ ಆಸಕ್ತಿಗನುಗುಣವಾಗಿ ಪ್ರೋತ್ಸಾಹಿಸುವಂತಾಗಬೇಕು ಎಂದ ಅವರು, ಸರ್ಕಾರ ಪ್ರತಿಭೆಗೆ ಹೆಚ್ಚಿನ ಅನುದಾನವನ್ನು ನೀಡಬೇಕು, ಸ್ಪರ್ಧೆಗೆ ಹಾಜರಾಗುವ ಪ್ರತಿಯೊಂದು ಶಾಲೆಗಳಿಂದ ಹಣ ಸಂಗ್ರಹಣೆ ಮಾಡಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸುವುದು ಕಷ್ಟ ಕರವಾಗಿದೆ. ಇನ್ನಾದರೂ ಸರ್ಕಾರ ಗಮನಹರಿಸಿ ಹೆಚ್ಚಿನ ಅನುದಾನ ನೀಡುವಂತಾಗಬೇಕು ಎಂದು ಅಗ್ರಹಿಸಿದರು.

ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಬಿ.ಆರ್.ಸಿ. ಸಮನ್ವಯಾಧಿಕಾರಿ ರಂಗನಾಥ್, ಉಪಪ್ರಾಚಾರ್ಯ ಕೆಸವಿನಮನೆ ರತ್ನಾಕರ್, ನೋಡಲ್ ಅಧಿಕಾರಿ ಕರಿಬಸಪ್ಪ, ಸಿ.ಆರ್.ಪಿ.ಮಂಜುನಾಥ, ಎಸ್.ಡಿ.ಎಂ.ಸಿ. ಸದಸ್ಯರಾದ ಪುಣ್ಣೋಜಿರಾವ್, ಈಶ್ವರ ಹನೀಫ್ ಶಿಕ್ಷಕ ವೃಂದ, ಇನ್ನಿತರರು ಹಾಜರಿದ್ದರು.

ಯುವರಾಜ್ ಪ್ರಾರ್ಥಿಸಿದರು. ಕೆ.ಚಂದ್ರಪ್ಪ ಸ್ವಾಗತಿಸಿದರು, ರವಿಕುಮಾರ್ ನಿರೂಪಿಸಿದರು. ರಾಮಕೃಷ್ಣ ವಂದಿಸಿದರು.

Leave a Comment