Ripponpete

ಗವಟೂರು ಜಾತ್ರೋತ್ಸವ – ಸತ್ಕಾರ್ಯಗಳಿಗೆ ದಾನ ಮಾಡುವುದು ಪುಣ್ಯದ ಕೆಲಸ ; ಮಳಲಿ ಶ್ರೀ

ರಿಪ್ಪನ್‌ಪೇಟೆ ; ಬಾಳುವುದಾದರೆ ಸಮುದ್ರದಂತೆ ಬಾಳಿ. ಬೇಕಾದವರು ನದಿಯಂತೆ ಬಂದು ನಿಮ್ಮನ್ನು ಸೇರುತ್ತಾರೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇತಿಹಾಸ ಪ್ರಸಿದ್ಧ ಗವಟೂರು ಶ್ರೀಹೊಳೆಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮತ್ತು ರುದ್ರಾಭಿಷೇಕ ಧರ್ಮಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ನಮ್ಮ ಕಣ್ಣು ಚನ್ನಾಗಿದ್ದರೆ ಇಡೀ ಜಗತ್ತು ನಮಗೆ ಚನ್ನಾಗಿ ಕಾಣುತ್ತದೆ.ಅದರೆ ನಮ್ಮ ನಾಲಿಗೆ ಒಳ್ಳೆಯದಾಗಿದ್ದರೆ ಇಡೀ ಜಗತ್ತಿಗೆ ನಾವು ಚನ್ನಗಿ ಕಾಣುತ್ತೇವೆ. ಯಥಾ ದೃಷ್ಠಿ ತಥಾ ಸೃಷ್ಟಿ ಮತ್ತು ನಾಲಿಗೆ ಒಳ್ಳೆಯದಾದರೆ ನಾಡಲ್ಲಾ ಒಳ್ಳೆಯದು ಎಂಬ ಈ ಎರಡು ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಜಗದ್ಗುರು ರೇಣುಕಾಚಾರ್ಯರು ಸಿದ್ದಾಂತ ಶಿಖಾಮಣಿಯಲ್ಲಿ ದಶಧರ್ಮಸೂತ್ರಗಳಲ್ಲಿ ಒಂದಾದ ದಾನದ ಮಹತ್ವವನ್ನು ಹೇಳುವಾಗ ‘ಸಹಜ ದಾನಂ ಉತ್ಕಷ್ಟ ದಾನಂ’ ಎಂದಿದ್ದಾರೆ. ಹಾಗಾಗಿ ಸತ್ಕಾರ್ಯಗಳಿಗೆ ದಾನವನ್ನು ಮಾಡುವುದು ಒಳಿತೆಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ದೇವಸ್ಥಾನ ಸೇವಾ ಸಮಿತಿ ಉಲ್ಲಾಸ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದುಂಡರಾಜಪ್ಪಗೌಡ, ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ, ಅರುಣ್, ಕುಬೇರಪ್ಪ ಕೃಷ್ಣಯ್ಯಶೆಟ್ಟಿ ಜನಾರ್ಧನ್, ಪರಮೇಶ, ರಾಜು, ಜಿ.ಡಿ.ಮಲ್ಲಿಕಾರ್ಜುನ, ನಾಗೇಂದ್ರ ಹಾಜರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>