ಹೊಸನಗರ

ಹೊಂಬುಜದಲ್ಲಿ ಶರನ್ನವರಾತ್ರಿ ಘಟಸ್ಥಾಪನೆ: ಧಾರ್ಮಿಕ ಆಚರಣೆಗಳಿಂದ ಸದ್ಗುಣಗಳ ವೃದ್ಧಿ – ಶ್ರೀಗಳು

ಶ್ರೀಕ್ಷೇತ್ರ ಹೊಂಬುಜದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ, ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಸಂಪ್ರದಾಯದಂತೆ ಆಶ್ವಯುಜ ಪಾಡ್ಯದಂದು ಘಟಸ್ಥಾಪನೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ಹೊಂಬುಜದಲ್ಲಿ ಶರನ್ನವರಾತ್ರಿ ಘಟಸ್ಥಾಪನೆ hombuja

ಹೊಸನಗರ : ಶ್ರೀಕ್ಷೇತ್ರ ಹೊಂಬುಜದಲ್ಲಿ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ, ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ಸಂಪ್ರದಾಯದಂತೆ ಆಶ್ವಯುಜ ಪಾಡ್ಯದಂದು ಘಟಸ್ಥಾಪನೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ಹೊಂಬುಜ ಜೈನ ಮಠದ ಪೀಠಾಧ್ಯಕ್ಷ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಈ ಎಲ್ಲಾ ಆಗಮೋಕ್ತ ಪೂಜಾ ಕೈಂಕರ್ಯಗಳು ಸ್ಥಳೀಯ ಹಾಗೂ ನಾಡಿನೆಲ್ಲೆಡೆಯಿಂದ ಆಗಮಿಸಿದ ಭಕ್ತಾದಿಗಳ ಸಮ್ಮುಖದಲ್ಲಿ ಸಂಪನ್ನಗೊಂಡವು.

ಈ ಸಂದರ್ಭದಲ್ಲಿ ಮಂಗಲ ಪ್ರವಚನ ನೀಡಿದ ಶ್ರೀಗಳು, “ನಮ್ಮ ಧಾರ್ಮಿಕ ವಿಧಿ-ವಿಧಾನಗಳು ಪ್ರತಿಯೊಬ್ಬರಲ್ಲೂ ಸಮ್ಯಕ್ತ್ವ (ಸದ್ಗುಣ) ಬೆಳೆಸಲು ಮತ್ತು ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಲು ಪ್ರೇರಣೆ ನೀಡುತ್ತವೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಉಪವಾಸ ಹಾಗೂ ಸ್ವಾಧ್ಯಾಯದಲ್ಲಿ ತೊಡಗಿಸಿಕೊಂಡು, ತೀರ್ಥಂಕರರು ಹಾಗೂ ಪದ್ಮಾವತಿ, ಕೂಷ್ಮಾಂಡಿನಿ, ಸರಸ್ವತಿ ದೇವಿಯರನ್ನು ಆರಾಧಿಸುವುದರಿಂದ ಬದುಕಿನ ಕಷ್ಟಗಳು ದೂರವಾಗಿ ಶಾಂತಿ, ನೆಮ್ಮದಿ ದೊರೆಯುತ್ತದೆ” ಎಂದು ತಿಳಿಸಿದರು.

ಬೆಳಗ್ಗೆ ಕುಮುದ್ವತಿ ನದಿಯಿಂದ ಬೆಳ್ಳಿ ಕಳಶದಲ್ಲಿ ಪವಿತ್ರ ಜಲವನ್ನು ಮಠದ ಆನೆ ಐಶ್ವರ್ಯಳ ಬೆಂಗಾವಲಿನೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ಬಳಿಕ ಶ್ರೀ ನೇಮಿನಾಥ ಸ್ವಾಮಿ, ಆದಿನಾಥ ಸ್ವಾಮಿ, ಮಹಾವೀರ ಸ್ವಾಮಿ, ಕ್ಷೇತ್ರಪಾಲ ಹಾಗೂ ನಾಗದೇವರ ಸನ್ನಿಧಿಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.

ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಪದ್ಮಾವತಿ ದೇವಿಗೆ ಭಕ್ತರು ನಾನಾ ಬಗೆಯ ಹಣ್ಣು-ಹಂಪಲು, ಪುಷ್ಪಗಳನ್ನು ಸಮರ್ಪಿಸಿ ಕೃತಾರ್ಥರಾದರು. ಇದೇ ವೇಳೆ ಕುಂದಕುಂದ ಗುರುಕುಲದ ವಿದ್ಯಾರ್ಥಿಗಳು ಹಾಗೂ ಪದ್ಮಾವತಿ ಮಹಿಳಾ ಮಂಡಳಿಯ ಸದಸ್ಯರು ಜಿನ ಸ್ತೋತ್ರಗಳನ್ನು ಪಠಿಸಿದರು. ಇಂದಿನ ಪೂಜಾ ಕೈಂಕರ್ಯಗಳ ಸೇವಾಕರ್ತರಾಗಿದ್ದ ಚೆನ್ನೈ ಮೂಲದ ನೀಲು ಶ್ರೀ ಲಲಿತ್ ಬಡಜ್ಯಾತೆ ಮತ್ತವರ ಕುಟುಂಬದವರು ಶ್ರೀಗಳಿಂದ ಮಂತ್ರಾಕ್ಷತೆ ಹಾಗೂ ಆಶೀರ್ವಾದ ಪಡೆದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!