Ripponpete

ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ; ಮಳಲಿ ಶ್ರೀ

ರಿಪ್ಪನ್‌ಪೇಟೆ ; ಯಾವುದೇ ವ್ಯಕ್ತಿ ಹಣದಿಂದ ಶ್ರೀಮಂತನಾಗುವುದಿಲ್ಲ. ಧಾರ್ಮಿಕ ಅಚರಣೆ ಮತ್ತು ಸಂಸ್ಕಾರದಿಂದ ಮಾತ್ರ ಶ್ರೀಮಂತನಾಗಿರಬೇಕು ಅಗ ಮಾತ್ರ ಜೀವನದಲ್ಲಿ ಯಶಸ್ವು ಕಾಣಲು ಸಾದ್ಯವೆಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

WhatsApp Group Join Now
Telegram Group Join Now
Instagram Group Join Now

ಹಾರಂಬಳ್ಳಿ ಗ್ರಾಮದಲ್ಲಿ ಶ್ರೀ ಈಶ್ವರ ಮತ್ತು ಪರಿವಾರ ದೇವರುಗಳ ಪುನರ್ ಪ್ರತಿಷ್ಟಾಪನಾ ಸಮಾರಂಭ ಹಾಗೂ ನೂತನ ದೇವಾಲಯದ ಲೋಕಾರ್ಪಣೆ ಧರ್ಮ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ. ಉತ್ತಮ ಆಹಾರಚರ್ಯೆ, ಉತ್ತಮ ನಡವಳಿಕೆ ನೀಡುವುದು ಇಂದಿನ ಅಗತ್ಯ. ಭಗವಂತನ ಚಿಂತನೆಯಲ್ಲಿ ಇರಬೇಕೆ ವಿನಹ ಸಂಪತ್ತಿನ ಚಿಂತೆಯಲ್ಲಿ ಇರಬಾರದು. ಬಲ್ಲವರ ನುಡಿ ಮುತ್ತುಗಳು ಸುಖಕ್ಕೆ ಸಾಧನ. ಅದ್ದರಿಂದ ಮಹಾತ್ಮರ ಸಂತರ ಸತ್ಪುರುಷರ ಸಂಘದಲ್ಲಿ ಇರಬೇಕು. ಸುಖ-ದುಃಖವನ್ನು ಬೇರೆಯವರಿಗೆ ಕೊಡಲು ಅಥವಾ ಬೇರೆಯವರಿಂದ ಪಡೆಯಲು ಬರುವುದಿಲ್ಲ ಎಂದರು.

ಧರ್ಮ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಈಶ್ವರ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಸೀತಾರಾಮಹಿರಗ್ಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಹಾಗೂ ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಹೆಚ್.ಎಸ್. ದಿನೇಶಗೌಡ, ಹೆದ್ದಾರಿಪುರ ಗ್ರಾಮ ಪಂಚಾಯಿತ್ ಮಾಜಿ ಸದಸ್ಯರಾದ ಜಾನಕಮ್ಮ ಹೆಚ್.ಕೆ.ರತ್ನಮ್ಮಬಸಪ್ಪ ಗಾಜಿನಗೋಡು, ಹೆಚ್.ಪಿ.ಉಮೇಶ್, ಗಂಗಾಧರ ಹಿರಗ್ಗಿ, ಹೆಚ್.ಜಿ.ಈಶ್ವರಪ್ಪ, ಕವಿತಾ, ಚಂದ್ರಶೇಖರ ಎಂ.ಕೆ.,ಪುಟ್ಟಸ್ವಾಮಿ ಹಿರಗ್ಗಿ ಹಾಗೂ ಈಶ್ವರ ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಸೋಮವಾರ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯಸಾನ್ನಿಧ್ಯದಲ್ಲಿ ಶ್ರೀ ಈಶ್ವರ ಶ್ರೀಬಸವಣ್ಣ ಹಾಗೂ ಶ್ರೀಮಹಾಗಣಪತಿ ಶ್ರೀದುರ್ಗಮ್ಮ ಮತ್ತು ಶ್ರೀನಾಗ ಹಾಗೂ ಸಪ್ತಮಾತೃಕೆಯರು ದೇವರುಗಳ ಪುನರ್ ಪ್ರತಿಷ್ಟಾಪನೆ ನಂತರ ಕಲಶಾಭಿಷೇಕ ಕುಂಭಾಭಿಷೇಕ ರುದ್ರಾಭಿಷೇಕ ವಿಶೇಷ ಪೂಜೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಂತರ ಮಧ್ಯಹ್ನ 1 ಗಂಟೆಗೆ ಸಾರ್ವಜನಿಕರಿಗೆ ಸಾಮೂಹಿಕ ಅನ್ನ ಸಂತರ್ಪಣೆ ಜರುಗಿತು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!