B-Khata :ಗ್ರಾಮೀಣ ಪ್ರದೇಶದ ಲಕ್ಷಾಂತರ ಅನಧಿಕೃತ ಆಸ್ತಿದಾರರಿಗೆ ಸರ್ಕಾರ ಶುಭಸಮಾಚಾರ ನೀಡಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯ ಅನಧಿಕೃತ ಮನೆಗಳು, ನಿವೇಶನಗಳು, ಕಟ್ಟಡಗಳಿಗೆ ಬಿ ಖಾತೆ ವಿತರಿಸಲು ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದು ಜುಲೈ ಎರಡನೇ ವಾರದಿಂದ ಈ ಕಾರ್ಯ ಪ್ರಾರಂಭವಾಗಲಿದೆ. ಸುಮಾರು 95 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬಿ-ಖಾತೆ ಎನ್ನುವುದು ಗ್ರಾಮ ಪಂಚಾಯತಿಯ ಪ್ರದೇಶದಲ್ಲಿ ಮನೆ ಅಥವಾ ನಿವೇಶನ ಹೊಂದಿರುವ ಮಾಲೀಕರಿಗೆ ನೀಡಲಾಗುವ ಆಸ್ತಿ ದಾಖಲೆ ಪ್ರಮಾಣಪತ್ರವಾಗಿದೆ. ಬಿ ಖಾತೆ ಮಾಡಿಸುವುದರಿಂದ ಆಸ್ತಿಯು ಗ್ರಾಮಪಂಚಾಯತಿಯಲ್ಲಿ ದಾಖಲಾತಿಯಾಗುತ್ತದೆ. ಜೊತೆಗೆ ಆಸ್ತಿ ಮಾಲೀಕರು ಕೆಲವೊಂದು ಸವಲತ್ತುಗಳನ್ನು ಪಡೆಯಲು ಸಹಾಯವಾಗುತ್ತದೆ. ಅದೇನೆಂದರೆ ಸ್ಥಳೀಯ ಸಂಸ್ಥೆಗಳಿಂದ ಮೂಲಸೌಕರ್ಯ, ಆಸ್ತಿ ಸಂಗ್ರಹಿತ ಮಾಹಿತಿ, ಆಸ್ತಿ ತೆರಿಗೆ ಪಾವತಿ, ಇ-ಸ್ವತ್ತು ನೊಂದಣಿಯಾಗುತ್ತದೆ.
ಈ ಮೊದಲು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಹಲವು ನಿವೇಶನಗಳು, ಬಡಾವಣೆಗಳು ದಾಖಲೆ ಇಲ್ಲದೇ ನಿರ್ಮಾಣವಾಗಿವೆ ಎಂದು ಆಸ್ತಿಯನ್ನು ಕೊಳ್ಳಲು ಮತ್ತು ಮಾರಲು ತೊಂದರೆಯಾಗುತ್ತಿತ್ತು. ಇ-ಸ್ವತ್ತು ವ್ಯವಸ್ಥೆಯಡಿಯಲ್ಲಿ ಈ ಆಸ್ತಿಗಳನ್ನು ದಾಖಲಿಸಬೇಕಾದರೇ ಮೊದಲಿಗೆ ಬಿ-ಖಾತೆ ಅಗತ್ಯವಿತ್ತು. ಆದರೇ ಸರ್ಕಾರ ಈವೆರೆಗೆ ಅನಧಿಕೃತ ಆಸ್ತಿಗಳಿಗೆ ಬಿ-ಖಾತೆ ನೀಡುತ್ತಿರಲಿಲ್ಲ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉದ್ದೇಶದಿಂದ ಸರ್ಕಾರ 2025ರ ಕರ್ನಾಟಕ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮವನ್ನು ಜಾರಿಗೆ ತಂದಿದ್ದು, ಈಗ ಬಿ-ಖಾತೆ ವಿತರಣೆ ಸಾಧ್ಯವಾಗಿದೆ. ಬಿ-ಖಾತೆ ನೀಡಿದ ತಕ್ಷಣ ಆ ಆಸ್ತಿ ಅಧಿಕೃತವಲ್ಲ ಅದು ತಾತ್ಕಾಲಿಕ ದಾಖಲೆಯಾಗಿರುತ್ತದೆ. ಇಂತಹ ಆಸ್ತಿಗಳಿಗೆ ಮುಂದೆ ಸರ್ಕಾರ ಕಾನೂನು ಬದ್ಧವಾಗಿ ಮಾನ್ಯತೆ ನೀಡುವ ವ್ಯವಸ್ಥೆಯನ್ನು ಮಾಡಬಹುದು. ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತರುವ ಮೊದಲು ಸಾರ್ವಜನಿಕರ ಅಭಿಪ್ರಾಯಕ್ಕೆ ಅವಕಾಶವಿದೆ. ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳನ್ನು ಸರ್ಕಾರ ಬಹಿರಂಗಪಡಿಸಿದ ನಂತರ ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯಲಾಗುತ್ತದೆ.
ಈ ಬಿ-ಖಾತೆಯಿಂದ ಸಿಗುವ ಅನುಕೂಲಗಳೆಂದರೆ
ಪಂಚಾಯತಿಗಳ ಆದಾಯ ಹೆಚ್ಚಾಗಿ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೆ ತರಲು ಅನುಕೂಲವಾಗುತ್ತದೆ. ಭವಿಷ್ಯದಲ್ಲಿ ಆಸ್ತಿ ಹಕ್ಕಸ್ವಾಮ್ಯ ಪಡೆಯಲು ಮೊದಲ ಹೆಜ್ಜೆಯಾಗಿ ಬಿ-ಖಾತೆ ಮಾರ್ಗದರ್ಶನ ಆಗಬಹುದು. ಆಸ್ತಿ ಮಾಹಿತಿ ರಾಜ್ಯದ ಡಿಜಿಟಲ್ ಪೋರ್ಟಲ್ನಲ್ಲಿ ದಾಖಲಾಗುವುದರಿಂದ ತಪ್ಪು ದಾಖಲೆಗಳ ಅಪಾಯ ಕಡಿಮೆಯಾಗುತ್ತದೆ. ಮೂಲಸೌಲಭ್ಯಕ್ಕಾಗಿ ಗ್ರಾಮೀಣ ಸಂಸ್ಥೆಗಳಿಗೆ ತೆರಿಗೆ ನೀಡಬೇಕಾಗುತ್ತದೆ. ಮೊದಲ ವರ್ಷದಲ್ಲಿ ಎರಡು ಪಟ್ಟು ತೆರಿಗೆ ವಿಧಿಸಲಾಗುತ್ತದೆ.
ಆನ್ಲೈನ್ ಅಥವಾ ಗ್ರಾಮಪಂಚಾಯತ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಬಹುದು ಅಥವಾ ಇ-ಸ್ವತ್ತು ಪೋರ್ಟಲ್ ಮೂಲಕ ಅರ್ಜಿ ಭರ್ತಿ ಮಾಡುವ ವ್ಯವಸ್ಥೆ ರೂಪಿಸಲಾಗುತ್ತದೆ. ಗ್ರಾಮ ಪಂಚಾಯತ್ ಅಧಿಕಾರಿಗಳು ಮೊದಲಿಗೆ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಅರ್ಜಿ ಸ್ವೀಕರಿಸಿದ ಬಳಿಕ ಬಿ-ಖಾತೆ ಪ್ರಮಾಣಪತ್ರ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು ಬೇಕಾಗುತ್ತವೆ. ಅವುಗಳೆಂದರೆ ಆಸ್ತಿಯ ಖರೀದಿ ದಾಖಲೆ ಅಥವಾ ಷರತ್ತು ಪತ್ರ, ಗುರುತಿನ ಪತ್ರವಾದ ಆಧಾರ ಅಥವಾ ಮತದಾರರ ಗುರುತಿನ ಚೀಟಿ, ಮೊತ್ತದ ಹೂಡಿಕೆ ಕಾಗದ ಪತ್ರ, ನಿರ್ವಹಣಾ ವಸತಿ ಕಚ್ಚಾ ಪತ್ರವಾದ ವಿದ್ಯುತ್ ಬಿಲ್, ನೀರಿನ ಬಿಲ್ನ್ನು ಲಗತ್ತಿಸಬೇಕು. ಬಿ-ಖಾತೆ ದೊರೆತರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನಧಿಕೃತ ಆಸ್ತಿಗಳನ್ನು ಕೂಡ ಆನ್ಲೈನ್ನಲ್ಲಿ ಸುಲಭವಾಗಿ ಪರಿಶೀಲಿಸಬಹುದಾಗಿದೆ.
Read More
ಸುಲಭವಾಗಿ ಇ-ಸ್ವತ್ತು ದಾಖಲೆಯನ್ನು ನಿಮ್ಮ ಮೊಬೈಲ್ನಲ್ಲೇ ಉಚಿತವಾಗಿ ಪಡೆಯಬಹುದು.
ಸರ್ಕಾರಿ ನೌಕರರೇ ಇದನ್ನ ಗಮನಿಸಿ: ಆರೋಗ್ಯ ಸಂಜೀವಿನಿ ಯೋಜನೆಗೆ ಈ ದಾಖಲೆಗಳು ಕಡ್ಡಾಯ!
ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ನ್ಯೂಸ್ ! ರದ್ದಾಗಲಿವೆ ಈ ಕಾರ್ಡ್ ಗಳು !
MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.