ಶಿವಮೊಗ್ಗ: ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದ್ದು, ಮಲೆನಾಡಿನ ಹಲವು ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಇಂದು ಬೆಳಿಗ್ಗೆ 7:00 ಗಂಟೆಗೆ ಕೊನೆಗೊಂಡಂತೆ ಸಾಗರ ತಾಲೂಕಿನ ಹೊಸೂರಿನಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ 62.0 ಮಿ.ಮೀ ಮಳೆ ದಾಖಲಾಗಿದೆ.
ಶಿವಮೊಗ್ಗ, ಸಾಗರ, ಭದ್ರಾವತಿ ಹಾಗೂ ಹೊಸನಗರ ತಾಲೂಕಿನ ವಿವಿಧೆಡೆ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಗಿದ್ದು, ಕೃಷಿ ಚಟುವಟಿಕೆಗಳಿಗೆ ಚೇತರಿಕೆ ಸಿಕ್ಕಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾದ ಪ್ರಮುಖ ಸ್ಥಳಗಳ ವಿವರ (ಮಿ.ಮೀ ಗಳಲ್ಲಿ):
- ಸಾಗರ – ಹೊಸೂರು : 62.0
- ಭದ್ರಾವತಿ – ಭದ್ರಾವತಿ : 53.0
- ಹೊಸನಗರ – ಮತ್ತಿಮನೆ : 49.75
- ಶಿವಮೊಗ್ಗ – ಚೋರಡಿ : 44.5
- ಸಾಗರ – ಯಡಜಿಗಳಿಮನೆ : 42.75
- ಸಾಗರ – ಯಡೆಹಳ್ಳಿ : 41.5
- ಭದ್ರಾವತಿ – ತಾವರಘಟ್ಟ : 41.0
- ಶಿವಮೊಗ್ಗ – ತುಪ್ಪೂರು : 39.5
- ಸಾಗರ – ಗೌತಮಪುರ : 39.5
- ಶಿವಮೊಗ್ಗ – ಪುರದಾಳು : 37.5
ಒಟ್ಟಾರೆಯಾಗಿ ಸಾಗರ, ಶಿವಮೊಗ್ಗ, ಹೊಸನಗರ ಮತ್ತು ಭದ್ರಾವತಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಹಳ್ಳ-ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಮುಂದಿನ ಕೆಲವು ದಿನಗಳ ಕಾಲ ಜಿಲ್ಲೆಯಲ್ಲಿ ಇದೇ ರೀತಿ ಮೋಡ ಕವಿದ ವಾತಾವರಣ ಸಂಜೆ ಅಥವಾ ರಾತ್ರಿ ವೇಳೆ ಸಾಧಾರಣದಿಂದ ಜೋರು ಮಳೆಯಾಗುವ ಸಾಧ್ಯತೆಯಿದೆ.

