ಹೊಸನಗರ

ಹೊಂಬುಜದಲ್ಲಿ ವೈಭವದ ಶರನ್ನವರಾತ್ರಿ: 7ನೇ ದಿನದಂದು ವಿಶೇಷ ಸರಸ್ವತಿ ಪೂಜೆ ಸಂಪನ್ನ

ಹೊಂಬುಜದಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವದ 7ನೇ ದಿನದ ಅಂಗವಾಗಿ ವಿಶೇಷ ಸರಸ್ವತಿ ಪೂಜೆಯು ಭಕ್ತಿಭಾವದಿಂದ ಜರುಗಿತು.

Hombuja Dasara 7day

ಹೊಸನಗರ: ಪ್ರಸಿದ್ಧ ಜೈನ ಕಾಶಿ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವದ 7ನೇ ದಿನದ ಅಂಗವಾಗಿ ವಿಶೇಷ ಸರಸ್ವತಿ ಪೂಜೆಯು ಭಕ್ತಿಭಾವದಿಂದ ಜರುಗಿತು.

WhatsApp Group Join Now
Telegram Group Join Now
Instagram Group Join Now

ಮುಂಜಾನೆ ಮಂಗಳವಾದ್ಯಗಳ ವೈಭವದೊಂದಿಗೆ ಕುಮುದ್ವತಿ ತೀರ್ಥದಿಂದ ಪವಿತ್ರ ಜಲವನ್ನು ತರುವ ಮೂಲಕ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು. ಕ್ಷೇತ್ರದ ಸಂಪ್ರದಾಯದಂತೆ ಶ್ರೀ ಪಾರ್ಶ್ವನಾಥ ತೀರ್ಥಂಕರರು, ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ತೀರ್ಥಂಕರ, ಶ್ರೀ ಕೂಷ್ಮಾಂಡಿನಿ ದೇವಿ ಹಾಗೂ ಶ್ರೀ ಸರಸ್ವತಿ ದೇವಿಯ ಸನ್ನಿಧಿಯಲ್ಲಿ ಆಗಮೋಕ್ತ ಪೂಜೆಗಳನ್ನು ಸಲ್ಲಿಸಲಾಯಿತು. ಇದರ ಜೊತೆಗೆ ಶ್ರೀ ಆದಿನಾಥ ತೀರ್ಥಂಕರ, ಶ್ರೀ ಮಹಾವೀರ ತೀರ್ಥಂಕರ, ಶ್ರೀ ಕ್ಷೇತ್ರಪಾಲ ಮತ್ತು ನಾಗಸನ್ನಿಧಿಗಳಲ್ಲಿಯೂ ವಿಶೇಷ ಅಲಂಕಾರ ಪೂಜೆಗಳು ನೆರವೇರಿದವು.

ಹೊಂಬುಜ ಜೈನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಜಿನನಾಮ ಸ್ತೋತ್ರ ಪಠಣದೊಂದಿಗೆ ಷೋಡಶೋಪಚಾರ ಪೂಜೆ ಜರುಗಿತು.

ಜೀವದಯೆ ಮತ್ತು ಕಲಾರಾಧನೆಯ ಸಂದೇಶ:

ಪೂಜಾ ಕಾರ್ಯಕ್ರಮದ ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಶರನ್ನವರಾತ್ರಿಯನ್ನು ನಾಡಹಬ್ಬ ಹಾಗೂ ರಾಷ್ಟ್ರೀಯ ಹಬ್ಬವಾಗಿ ಆಚರಿಸುವುದು ಭಾರತದ ಪ್ರಾಚೀನ ಜೈನ ಧರ್ಮ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ನವಿಲುಗರಿಗಳ ಅಲಂಕಾರದಲ್ಲಿ ಶ್ರೀ ಪದ್ಮಾವತಿ ದೇವಿಯು ಕಂಗೊಳಿಸುತ್ತಿದ್ದಾಳೆ. ಪ್ರಕೃತಿಯ ಪ್ರಾಣಿ-ಪಕ್ಷಿಗಳು ತೀರ್ಥಂಕರರ ಹಾಗೂ ಯಕ್ಷಿ ದೇವತೆಗಳ ಲಾಂಛನಗಳಾಗಿರುವುದು ಜೀವದಯೆ ಮತ್ತು ವಾತ್ಸಲ್ಯದ ಸಂದೇಶವನ್ನು ಸಾರುತ್ತದೆ ಎಂದು ಜೈನ ಧರ್ಮಗ್ರಂಥಗಳು ತಿಳಿಸಿವೆ. ದೇವಿಯ ಸನ್ನಿಧಿಯಲ್ಲಿ ಸಂಗೀತ ವಾದ್ಯಗಳನ್ನಿಟ್ಟು ಪೂಜಿಸುವುದು ಸಂಗೀತ ಮತ್ತು ನೃತ್ಯ ಕಲೆಯ ಆರಾಧನೆಯ ಸಂಕೇತವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಭಕ್ತರೆಲ್ಲರ ಇಷ್ಟಾರ್ಥಗಳು ನೆರವೇರಲಿ ಎಂದು ಹರಸಿ ಶ್ರೀಗಳು ಫಲ-ಮಂತ್ರಾಕ್ಷತೆ ನೀಡಿದರು. ಇದೇ ಸಂದರ್ಭದಲ್ಲಿ ಪೂಜಾ ಸೇವಾಕರ್ತರಾದ ಬೆಂಗಳೂರಿನ ಚೂಡಾಮಣಿ ಮತ್ತು ರವಿರಾಜ್ ಜೈನ್ ಕುಟುಂಬದವರಿಗೆ ವಿಶೇಷ ಆಶೀರ್ವಾದ ಮಾಡಿದರು.

ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಂಘದ ಸದಸ್ಯೆಯರು ಸೇರಿದಂತೆ ಸ್ಥಳೀಯ ಹಾಗೂ ಪರಸ್ಥಳದ ಅಪಾರ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ರಾತ್ರಿ ದೇವಿಗೆ ಅಷ್ಟಾವಧಾನ ಸೇವೆ ಹಾಗೂ ಇನ್ನಿತರ ಧಾರ್ಮಿಕ ಕೈಂಕರ್ಯಗಳು ಸಾಂಗವಾಗಿ ನೆರವೇರಿದವು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!