EPFO:ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ತನ್ನ ಲಕ್ಷಾಂತರ ಸದಸ್ಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇಪಿಎಫ್‌ಒ ಚಂದಾದಾರರು ತುರ್ತು ಅವಸ್ಥೆಗಳಲ್ಲಿ ತಮ್ಮ ಹಣವನ್ನು ಇನ್ನಷ್ಟು ವೇಗವಾಗಿ ಹಿಂಪಡೆಯಲು ಅವಕಾಶ ಸಿಕ್ಕಿದೆ.
ಮುಂಗಡ ಹಣ ಮಿತಿ ಹೆಚ್ಚಳ:
ಇದು ಸ್ವತಃ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಜೂನ್ 24ರಂದು ಘೋಷಿಸಿದ ಮಹತ್ವದ ನಿರ್ಧಾರ. ಈ ಪ್ರಕಾರ, ಇಪಿಎಫ್‌ಓ ಮುಂಗಡ ಹಣದ ಆಟೋ-ಸೆಟಲ್ಮೆಂಟ್ ಮಿತಿಯನ್ನು ₹1 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಸುಲಭ, ವೇಗದ ಕ್ಲೈಮ್ ಪ್ರಕ್ರಿಯೆ:ಈ ಹೊಸ ವ್ಯವಸ್ಥೆಯಡಿ, ಸದಸ್ಯರು ತುರ್ತು ಅವಶ್ಯಕತೆಗಳ ಸಮಯದಲ್ಲಿ ಕೇವಲ ಮೂರೇ ದಿನಗಳಲ್ಲಿ ₹5 ಲಕ್ಷವರೆಗೆ ಮುಂಗಡ ಹಣ ಪಡೆಯಬಹುದು. ಇದರಿಂದ ತೀವ್ರ ಅಗತ್ಯದ ಸಂದರ್ಭಗಳಲ್ಲಿ ನೌಕರರಿಗೆ ಹೆಚ್ಚಿನ ಆರ್ಥಿಕ ನೆರವು ಸಿಗಲಿದೆ.
ಈ ಮೊದಲು:ಹಳೆಯ ನಿಯಮದಂತೆ, ಆಟೋ-ಸೆಟಲ್ಮೆಂಟ್ ಮೂಲಕ ಕೇವಲ ₹1 ಲಕ್ಷವರೆಗೆ ಮಾತ್ರ ಹಣ ಹಿಂಪಡೆಯಲು ಅವಕಾಶವಿತ್ತು ಮತ್ತು ಹೆಚ್ಚಿನ ಮೊತ್ತಕ್ಕಾಗಿ ಹೆಚ್ಚಿನ ತಪಾಸಣಾ ಕ್ರಮಗಳ ಅಗತ್ಯವಿತ್ತು.
ಇದರಿಂದ ಲಾಭವಾಗುವವರು:
- ತುರ್ತು ಚಿಕಿತ್ಸೆಗೆ ಹಣ ಬೇಕಾದವರು
- ಮನೆ ಬಾಡಿಗೆ ಅಥವಾ ಇತರೆ ಆರ್ಥಿಕ ತೊಂದರೆ ಎದುರಿಸುತ್ತಿರುವವರು
- ತಾತ್ಕಾಲಿಕ ಹಣಕಾಸು ನೆರವಿಗೆ ಕಾಯುತ್ತಿದ್ದವರು
ಈ ನಿರ್ಧಾರ ಇಪಿಎಫ್‌ಓ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿ, ವೇಗದ ಮತ್ತು ನೌಕರ ಮಿತ್ರವಾಗಿಸಲು ಪಟ್ಟಿ ಹಾಕಿದ ದೊಡ್ಡ ಹೆಜ್ಜೆಯಾಗಿದೆ
Read More :ರೈತರೆ ಗಮನಿಸಿ! ಈ ಯೋಜನೆಯಡಿ ಮಿನಿ ಟ್ರ್ಯಾಕ್ಟರ್‌ಗೆ ಶೇ.90ರಷ್ಟು ಸಬ್ಸಿಡಿ ಪಡೆಯಬಹುದು!
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650