ಜುಲೈ ತಿಂಗಳಿನಿಂದ ಈ ಜನರಿಗೆ ಗ್ಯಾರಂಟಿ ಯೋಜನೆ ಬಂದ್!

Written by Koushik G K

Updated on:

Guarantee scheme:ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹತೆ ಇಲ್ಲದವರಿಗೆ ಬಂದ್ ಮಾಡಲಾಗುತ್ತಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಅರ್ಹತೆ ಇರುವವರಿಗೆ ಮಾತ್ರ ಮೀಸಲಾಗುವ ಯೋಜನೆಯಾಗಿದೆ. ಅನರ್ಹರು ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಒಳಪಡುವುದಿಲ್ಲ. ರಾಜ್ಯ ಸರ್ಕಾರದ ಐದು ಮಹತ್ವದ ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿ ಲಕ್ಷಾಂತರ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುತ್ತಿವೆ. ಆದರೇ ಅನರ್ಹ ಫಲಾನುಭವಿಗಳು ಈ ಯೋಜನೆಗಳ ಲಾಭ ಪಡೆಯುತ್ತಿದ್ದಾರೆಂಬ ಆರೋಪಗಳು ಬರುತ್ತಿವೆ. ಆದ್ದರಿಂದ ರಾಜ್ಯ ಸರ್ಕಾರ ಜುಲೈ 2025ರಿಂದ ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅನರ್ಹರನ್ನು ಪತ್ತೆಹಚ್ಚಲು ರಾಜ್ಯಾದ್ಯಂತ ಡಿಜಿಟಲ್ ವೆರಿಫಿಕೇಶನ್ ಪ್ರಕ್ರಿಯೆ ಆರಂಭಿಸಿದೆ. ಆಧಾರ್ ಲಿಂಕ್, ಪಡಿತರ ಕಾರ್ಡ್, ಬ್ಯಾಂಕ್ ಖಾತೆಗಳ ಡೇಟಾವನ್ನು ತಪಾಸಣೆ ಮಾಡಲಾಗುತ್ತಿದೆ. ಡೇಟಾವನ್ನು ಹೇಗೆ ಸಂಗ್ರಹಣೆ ಮಾಡಿ ಅನರ್ಹರನ್ನು ಹೇಗೆ ಪತ್ತೆಹಚ್ಚುತ್ತಾರೆಂದರೆ ಗೃಹಜ್ಯೋತಿ ವಿದ್ಯುತ್ ಖಾತೆಗಳನ್ನು ಮನೆ ಮಾಲೀಕರು ಬಳಸುತ್ತಿರುವ ಬಗ್ಗೆ ದಾಖಲೆ ಪರಿಶೀಲನೆ ಮಾಡಲಾಗುತ್ತದೆ.ಶಕ್ತಿ ಯೋಜನೆಯ ಪ್ರಯಾಣಿಕ ಮಾಹಿತಿಯನ್ನು ಕೆಎಸ್ಆರ್ಟಿಸಿ ಮೂಲಕ ಸ್ಕ್ಯಾನ್ ಮಾಡಲಾಗುತ್ತದೆ. ಗೃಹಲಕ್ಷ್ಮಿಗೆ ಅರ್ಹ ಮಹಿಳೆಯರು ಐಟಿ ತೆರಿಗೆ ಪಾವತಿಸುತ್ತಿಲ್ಲ ಎಂಬುದನ್ನು ಪತ್ತೆ ಮಾಡಲಾಗುತ್ತದೆ. ಬಡವರ ಪಡಿತರ ಕಾರ್ಡ್ಗಳನ್ನು ಪರಿಶೀಲಿಸುವುದರ ಮೂಲಕ ನಿಜವಾದ ಫಲಾನುಭವಿಗಳಿಗೆ ಸರ್ಕಾರ ನೆರವು ನೀಡುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿರವರು ಯೋಜನೆಗಳ ಬಗ್ಗೆ ಪರಿಶೀಲಿಸಿದ್ದಾರೆ. ಅನರ್ಹ ವ್ಯಕ್ತಿಗಳಿಗೂ ಯೋಜನೆಗಳ ಲಾಭ ತಲುಪುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ದುರುಪಯೋಗವನ್ನು ತಡೆಗಟ್ಟುವಲ್ಲಿ ಸರ್ಕಾರ ಕ್ರಮಕೈಗೊಳ್ಳುತ್ತಿದೆ.

ರಾಜ್ಯ ಸರ್ಕಾರದ ಈ ಐದು ಯೋಜನೆಗಳಿಗೆ ಪ್ರತಿ ವರ್ಷ ಸರಾಸರಿ 68000 ರೂಪಾಯಿ ಕೋಟಿ ವೆಚ್ಚವಾಗುತ್ತಿದೆ. ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಗೆ 4.10 ಕೋಟಿ ಜನ ಫಲಾನುಭವಿಗಳಿಗೆ ಸುಮಾರು 1000 ಕೋಟಿ ರೂಪಾಯಿಯಷ್ಟು ಆಗುತ್ತದೆ. ಶಕ್ತಿ ಯೋಜನೆಗೆ ಪ್ರತಿದಿನ 62 ಲಕ್ಷ ಮಹಿಳೆಯರ ಪ್ರಯಾಣಕ್ಕೆ ಪ್ರತೀ ತಿಂಗಳು ಸುಮಾರು 600ರಿಂದ 800 ಕೋಟಿ ರೂಪಾಯಿಯಷ್ಟಾಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ 1.29 ಕೋಟಿ ಮಹಿಳೆಯರಿಗೆ ಸುಮಾರು 2,500 ಕೋಟಿ ರೂಪಾಯಿಯಷ್ಟಾಗುತ್ತದೆ.

ರಾಜ್ಯ ಸರ್ಕಾರದ ಈ ಗ್ಯಾರಂಟಿ ಯೋಜನೆಗಳು ಬಡವರಿಗೋಸ್ಕರ ರೂಪುಗೊಂಡ ಈ ಯೋಜನೆಗಳು ಅನರ್ಹ ಫಲಾನುಭವಿಗಳ ದುರುಪಯೋಗದಿಂದ ರಾಜ್ಯಸರ್ಕಾರಕ್ಕೆ ನಷ್ಟವಾಗುತ್ತಿದೆ. ಇಂತಹ ಯೋಜನೆಗಳು ಬಡವರಿಗೆ ಮಾತ್ರ ಸೀಮಿತವಾಗಿ ಬಡವರ ಆರ್ಥಿಕ ಮಟ್ಟವು ಸುಧಾರಣೆಯಾಗಬೇಕು. ಇಂತಹ ಯೋಜನೆಗಳು ಅರ್ಹರಿಗೆ ಸಿಗುವಂತಾಗಬೇಕು ಅನರ್ಹರ ಪಟ್ಟಿಯನ್ನು ಸಿದ್ಧಗೊಳಿಸಿ ಈ ಯೋಜನೆಯಿಂದ ಅರ್ಹರಿಗೆ ಲಾಭವಾಗಬೇಕು.

Read More

ಎಸ್ಎಸ್ಎಲ್ಸಿ ಪಾಸಾದವರಿಗೆ ಪ್ರತೀ ತಿಂಗಳು 3500 ರೂ ಸ್ಕಾಲರ್ಶಿಪ್ !

ರೈತರ ಸಾಲಕ್ಕೆ ಬಡ್ಡಿ ರಿಯಾಯಿತಿ ಘೋಷಣೆ!

ರೈತರಿಗೆ ಮಿನಿ ಟ್ರ್ಯಾಕ್ಟರ್, ಪಾಲಿಹೌಸ್, ಹನಿ ನೀರಾವರಿ ಸಹಾಯಧನಕ್ಕೆ ಅರ್ಜಿ ಆಹ್ವಾನ!

Leave a Comment