ಹೊಸನಗರ

ತ್ಯಾರಂದೂರು ಗವಿಮಠದ ನೂತನ ಶಿವಾಚಾರ್ಯರಿಗೆ ಶ್ರೀಶೈಲ ಜಗದ್ಗುರುಗಳ ಶುಭಾಶೀರ್ವಾದ ಗುರುರಕ್ಷೆ

InShot 20260903 193854749

ರಿಪ್ಪನ್‌ಪೇಟೆ : ಕೋಣಂದೂರು ಸಮೀಪದ ಕೋಟೆಗದ್ದೆ-ತ್ಯಾರಂದೂರು ಗವಿಮಠಕ್ಕೆ ನೂತನ ಪಟ್ಟಾಧ್ಯಕ್ಷರಾಗಿ ಸಾನಂದ ಪಂಡಿತ್ಯಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಇಂದು ಶ್ರೀಶೈಲ ಪೀಠಕ್ಕೆ ತೆರಳಿ ಶ್ರೀಶೈಲ ಪಂಚಾಪೀಠಾಧೀಶ್ವರ ಜಗದ್ಗುರು ಡಾ. ಚನ್ನಸಿದ್ದ ಪಂಡಿತಾರಾಧ್ಯ ಭಗವತ್ಪಾದಂಗಳವರ ದರ್ಶನಾಶೀರ್ವಾದ ಪಡೆದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶ್ರೀಶೈಲ ಪಂಚಾಪೀಠಾಧೀಶ್ವರ ಜಗದ್ಗುರು ಡಾ.ಚನ್ನಸಿದ್ದ ಪಂಡಿತಾರಾಧ್ಯ ಭಗವತ್ಪಾದಂಗಳವರ ತ್ಯಾರಂದೂರು ಗವಿಮಠದ ನೂತನ ಶಿವಾಚಾರ್ಯರಿಗೆ ಶುಭಾಶೀರ್ವಾದದೊಂದಿಗೆ ಶಿವಾಚಾರ್ಯರು ಧರ್ಮದ ಪರಿಪಾಲನೆಯೊಂದಿಗೆ ಸಮಾಜದ ಸಂಘಟನೆ ಮಠದ ಶ್ರಯೋಭಿವೃದ್ದಿಗೆ ಶ್ರಮಿಸುವಂತೆ ಕರೆ ನೀಡಿ ಭಕ್ತರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲುವುದರೊಂದಿಗೆ ಧರ್ಮಭೋದನೆ ಮಾಡುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಿಳಕಿ ಮಠದ ಷ.ಬ್ರ.ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಜಿ, ದಿಂಡದಹಳ್ಳಿ ಮಠದ ಪಶುಪತಿ ಶಿವಾಚಾರ್ಯರು,ಬಿರೂರು ಮಠದ ಶ್ರೀಗಳು ಇನ್ನಿತರ ಮಠದ ಶ್ರೀಗಳು ಹಾಜರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಲಿಂ. ಮಹಾಶಿವಯೋಗಿಗಳ ಕರ್ತೃ ಗದ್ದುಗೆಗೆ ಲೋಕಕಲ್ಯಾರ್ಣಾಥವಾಗಿ ಮಹಾರುದ್ರಾಭಿಷೇಕ

ರಿಪ್ಪನ್‌ಪೇಟೆ : ಮಲೆನಾಡಿನ ತಪೋಕ್ಷೇತ್ರವಾದ ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ ಈ ಹಿಂದಿನ ಲಿಂ.ಚನ್ನಬಸವ ಮಹಾಶಿವಯೋಗಿಗಳ ಮತ್ತು ಲಿಂ. ಸಿದ್ದಲಿಂಗ ಮಹಾಶಿವಯೋಗಿಗಳ ಕರ್ತೃ ಗದ್ದುಗೆಗೆ ಲೋಕಕಲ್ಯಾಣಾರ್ಥವಾಗಿ ಹಾಗೂ ಕ್ಷೇತ್ರಾಭವೃದ್ದಿಗಾಗಿ ಕುಟುಂಬದ ಅಭಿವೃದ್ದಿಗಾಗಿ ಸಂಕಲ್ಪಿಸಿ ಶ್ರಾವಣ ಮಾಸದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿಯವರಿಂದ ಮಹಾರುದ್ರಾಭಿಷೇಕ ಇನ್ನಿತರ ಪೂಜಾ ಕೈಂಕರ್ಯಗಳು ಶ್ರೀ ಮಠದಲ್ಲಿ ಏರ್ಪಡಿಸಲಾಗಿದೆ.

ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿಯವರಿಂದ ಮಹಾರುದ್ರಾಭಿಷೇಕ ಮತ್ತು ಶ್ರಾವಣ ಚಿಂತನ ಮಂಥನ ಕಾರ್ಯಕ್ರಮ ನಂತರ ವಿಶೇಷ ಹೂವಿನ ಅಲಂಕಾರ ಪೂಜೆ ನೈವೇದ್ಯ ತೀರ್ಥ ಪ್ರಸಾದ ಹಾಗೂ ಸಾಮೂಹಿಕ ದಾಸೋಹ ನಡೆಯುತ್ತಿದ್ದು ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಲಿಂ.ಚನ್ನಬಸವ ಮಹಾಶಿವಯೋಗಿಗಳ ಮತ್ತು ಲಿಂ. ಸಿದ್ದಲಿಂಗ ಮಹಾಶಿವಯೋಗಿಗಳ ಕರ್ತೃ ಗದ್ದುಗೆಯ ದರ್ಶನಾಶಿರ್ವಾದ ಪಡೆಯುವುದರೊಂದಿಗೆ ಗುರುಗಳ ಕೃಪಾಶೀರ್ವಾದ ಪಡೆಯುವಂತೆ ಮಠದ ಪ್ರಕಟಣೆ ತಿಳಿಸಿದೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]