ರಿಪ್ಪನ್ಪೇಟೆ ; ತಾಯಿ-ಗುರುಗಳ ಋಣ ತೀರಿಸಲಾಗದು .ಶಿಕ್ಷಕರಾದವರಲ್ಲಿ ತಾಳ್ಮೆ ಸಹನೆ ಮುಖ್ಯವಾಗಿದೆ. ವಿದ್ಯಾರ್ಥಿಗಳು ಪಾಠಪ್ರವಚನದಲ್ಲಿ ಶ್ರದ್ದೆಯಿಂದ ಕಲಿತರೆ ಮುಂದೆ ಜೀವನದಲ್ಲಿ ಸಾಧನೆ ಮಾಡಿದರೆ ಅದೇ ಗುರುಗಳಿಗೆ ಕೊಡುವ ಗೌರವ ಎಂದು ನಿವೃತ್ತ ಶಿಕ್ಷಕಿ ತ್ರಿವೇಣಿ ಹೇಳಿದರು.
ರಿಪ್ಪನ್ಪೇಟೆಯ ಬರುವೆ ಗ್ರಾಮದ ಶ್ರೀರಾಷ್ಟ್ರೋತ್ಥಾನ ಶಿಶು ಮಂದಿರದಲ್ಲಿ 1984-85ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಆಯೋಜಿಸಲಾದ ಗುರುವಂದನಾ ಮತ್ತು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಗುರು-ಹಿರಿಯರಿಗೆ ಸಲ್ಲಿಸಿದರೆ ಅದೇ ಗುರುಗಳಿಗೆ ನೀಡುವ ಗುರುಕಾಣಿಕೆಯಾಗಿದೆ. ವಿದ್ಯಾರ್ಥಿ ಜೀವನದಲ್ಲಿ ತಪ್ಪುಗಳಾಗಿರಬಹುದು. ಆದರೆ ಅದನ್ನು ತಮ್ಮ ಜೀವನದಲ್ಲಿ ಮರೆತು ಎಲ್ಲರೂ ಸ್ನೇಹದಿಂದ ಇದ್ದಾಗ ಮಾತ್ರ ಪಾಠ ಕಲಿಸಿದ ಗುರುಗಳಿಗೆ ಸಾರ್ಥಕವಾಗಿದೆ ಎನ್ನಲು ಸಾಧ್ಯವೆಂದರು.

1984-85ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಗುರುವಂದನಾ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಉಮೇಶ ಆರ್, ಹುಟ್ಟಿ ಬೆಳೆದ ನಮ್ಮೂರಿನಲ್ಲಿ ಕಲಿತು ಸರ್ಕಾರಿ ಉದ್ಯೋಗ ಪಡೆಯುವುದರೊಂದಿಗೆ ನಿವೃತ್ತಿಯ ಜೀವನ ನಡೆಸುತ್ತಿರುವ ನನಗೆ ನಿತ್ಯ ಕಾಣಸಿಗುವ ನಾನು ಕಲಿಸಿದ ವಿದ್ಯಾರ್ಥಿಗಳಲ್ಲಿನ ಗುರುಭಕ್ತಿ ಅವರು ಕೊಡುವ ಗೌರವ ನನಗೆ ಸಂತೃಪ್ತಿ ತಂದಿದೆ ಎಂದರು. ನಿಮ್ಮ ಈ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅತಿಥಿ ಸತ್ಕಾರ ನನ್ನ ಮನಸ್ಸಿಗೆ ತುಂಬ ಸಂತಸ ತಂದಿದೆ ಎಂದು ಹೇಳಿ ಪ್ರಶಂಸೆ ವ್ಯಕ್ತಪಡಿಸಿದರು.

ನಿವೃತ್ತಿ ಜೀವನ ನಡೆಸುತ್ತಿರುವ ಗಣಿತ ಶಿಕ್ಷಕ ಎ.ಎಸ್.ಭೋಜರಾಜ್ರನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ 1984-85ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





