ಹೊಸನಗರ : ಮಲೆನಾಡ ನಡುಮನೆ ಹೊಸನಗರ ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ರಾಮಚಂದ್ರಾಪುರ ಮಠದಲ್ಲಿ ಶ್ರೀರಾಮನ ಅನುಪಮ ಉಪಾಸನೆಯ ಮತ್ತೊಂದು ಸಂಭ್ರಮದ ಮಹೋತ್ಸವಕ್ಕೆ ಸಿದ್ದತೆ ನಡೆದಿದೆ.

ಮಾ. 24 ರಿಂದ ಪರಾಭವ ಸಂವತ್ಸರ ರಾಮೋತ್ಸವ ಕಾರ‍್ಯಕ್ರಮಗಳು ಅತ್ಯಂತ ಅದ್ದೂರಿಯಿಂದ ಮಾ. 29 ರವರೆಗೆ ಜರುಗಲಿದೆ. ವಿಶೇಷವಾಗಿ ಪೂಗ ಪೂಜೆ, ವಿರಾಟ್ ಶ್ರೀರಾಮ ಪೂಜೆ ಹಾಗೂ ಮಾತೃ ಸಮಾವೇಶ ಈ ಬಾರಿಯ ಪ್ರಮುಖ.

ಕಾರ‍್ಯಕ್ರಮಗಳ ವಿವರ ;
- ಮಾ. 24 ರಂದು ಕಂಕಣ, ಧ್ವಜಾರೋಹಣ, ಶಿಬಿಕಾ ಯಂತ್ರೋತ್ಸವ ಕಾರ್ಯಕ್ರಮ
- ಮಾ. 25 ಬೆಳಗ್ಗೆ ಗರುಡೋತ್ಸವ, ಸಂಜೆ ಶ್ರೀರಾಘವೇಶ್ವರ ಭಾರತೀ ಶ್ರೀಗಳವರ ದಿವ್ಯಾಗಮನ ಪೂರ್ಣ ಕುಂಭ ಸ್ವಾಗತ ನಂತರ ದೀಪಮಾಲಿಕೆ ಕಾರ‍್ಯಕ್ರಮ.
- ಮಾ. 26 ರಂದು ಪುಷ್ಪ ರಥೋತ್ಸವ, ಅಖಂಡ ಭಜನೆ ಆರಂಭ, ಶ್ರೀಕರಗಳಿಂದ ಪೂಗ (ಅಡಿಕೆ ರಾಶಿ) ಪೂಜೆ, ಮಾತೃ ಸಮಾವೇಶ ಹಾಗೂ ವಸಂತ ಮಂತ್ರಾಕ್ಷತೆ ವಿತರಣೆ.
- ಮಾ. 27 ರಂದು ಶ್ರೀರಾಮಜನ್ಮೋತ್ಸವ, ಶ್ರೀಮನ್ಮಹಾರಥೋತ್ಸವ, ವಿರಾಟ್ ಶ್ರೀರಾಮಪೂಜೆ ಹಾಗೂ ಆಶೀರ್ವಚನ.
- ಮಾ. 28 ರಂದು ಕುಂಕುಮೋತ್ಸವ, ವೈಷ್ಣವ ಮೃಗಯಾತ್ರಾ, ಲಕ್ಷ್ಮಿನಾರಾಯಣ ಸಂವಾದ, ಸೀತಾ ರಾಮ ಕಲ್ಯಾಣ, ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ, ಅಖಂಡ ಭಜನಾ ಮಂಗಲ, ಶ್ರೀಗಳವರಿಂದ ಆಶೀರ್ವಚನ, ಶ್ರೀ ಮಂತ್ರಾಕ್ಷತೆ ಹಾಗೂ ಸಂಜೆ ಶ್ರೀರಾಮಲೀಲಾ, ರಾವಣದಹನ ಕಾರ‍್ಯಕ್ರಮ.
- ಮಾ 29 ರಂದು ಅವಭೃಥ ಅಂಕುರ ಪ್ರಸಾದದೊಂದಿಗೆ ರಾಮೋತ್ಸವದ ಕಾರ‍್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಸಮಿತಿಯ ಸದಸ್ಯ ರಮೇಶ್ ಗುಂಡೂಮನೆ ತಿಳಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

