Ripponpete

ರಾತ್ರೋರಾತ್ರಿ ದಿಢೀರ್ ತಲೆ ಎತ್ತಿದ ಶೆಡ್‌ಗಳು ; ಅಕ್ರಮ ಒತ್ತುವರಿ ತೆರವುಗೊಳಿಸಿದ ರಿಪ್ಪನ್‌ಪೇಟೆ ಗ್ರಾಮಾಡಳಿತ

ರಿಪ್ಪನ್‌ಪೇಟೆ ; ಇಲ್ಲಿನ ಹಳೆ ಸಂತೇ ಮಾರ್ಕೆಟ್ ಪ್ರದೇಶದಲ್ಲಿ ಇರುವ ಸ.ನಂ 43ರ ಗ್ರಾಮ  ಪಂಚಾಯಿತ್ ಜಾಗದಲ್ಲಿ ಅಕ್ರಮವಾಗಿ ಒತ್ತುವರಿ ಮಾಡುವ ಮೂಲಕ ರಾತ್ರೋರಾತ್ರಿ ಅಕ್ರಮ ಗುಡಿಸಲು ನಿರ್ಮಿಸಲಾಗಿ ಅದನ್ನು ಗ್ರಾಮಾಡಳಿತ ಸಿಬ್ಬಂದಿವರ್ಗ ತೆರವುಗೊಳಿಸುವ ಮೂಲಕ ಗುಡಿಸಲಿಗೆ ಅಳವಡಿಸಲಾದ ಮರದ ಕಂಬ ಇನ್ನಿತರ ಸಾಮಗ್ರಿಗಳನ್ನು ವಶಪಡಿಸಿಕೊಂಡರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಳೆದ ಒಂದು ವರ್ಷದ ಹಿಂದೆ ಸಹ ಇದೇ ರೀತಿಯಲ್ಲಿ ರಾತ್ರೋರಾತ್ರಿ ಸದರಿ ಜಾಗದಲ್ಲಿ ಅಕ್ರಮ ಗುಡಿಸಲು ನಿರ್ಮಿಸಿಲಾಗಿದ್ದು ಆಗ ಸ್ಥಳೀಯ ಆಡಳಿತ ಸಹ ಅಕ್ರಮ ಶೆಡ್‌ಗಳನ್ನು ಕಿತ್ತು ಹಾಕಿರುವುದು ಇನ್ನೂ ಮಾಸುವ ಮುನ್ನವೇ ಪುನಃ ಶುಕ್ರವಾರ ರಾತ್ರಿ ದಿಢೀರ್ ಶೆಡ್ ನಿರ್ಮಿಸಿ ಬೇಲಿ ಕಟ್ಟಿರುವ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಗ್ರಾಮ ಪಂಚಾಯಿತ್ ಪಿಡಿಒ ನಾಗರಾಜ್ ಮತ್ತು ಸಿಬ್ಬಂದಿವರ್ಗ ಹಾಗೂ ನಿಕಟಪೂರ್ವ ಗ್ರಾಮ ಪಂಚಾಯಿತ್ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ನಿರ್ಮಿಸಲಾದ ಗುಡಿಸಲು ಮತ್ತು ಬೇಲಿಯನ್ನು ಕಿತ್ತು ತಮ್ಮ ವಶಕ್ಕೆ ಪಡೆದರು.

ನಿಕಟಪೂರ್ವ ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ನಿರೂಪ್ ಕುಮಾರ್, ಪ್ರಕಾಶ ಪಾಲೇಕರ್, ಜಿ.ಡಿ.ಮಲ್ಲಿಕಾರ್ಜುನ, ಇನ್ನಿತರ ಸದಸ್ಯರು ಪಾಲ್ಗೊಂಡು ತೆರವು ಕಾರ್ಯಾಚರಣೆ ನಡೆಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ
ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>