ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡ ಹಡ್ಲುಬೈಲು ಶಾಲೆ !

Written by Mahesha Hindlemane

Published on:

HOSANAGARA | ಪರಿಸರ ಮಿತ್ರ, ತಾಲೂಕಿನ ಅತ್ಯುತ್ತಮ ಕಿರಿಯ ಪ್ರಾಥಮಿಕ ಶಾಲೆ ಪ್ರಶಸ್ತಿಗಳಿಗೆ ಪಾತ್ರವಾಗಿದ್ದ ಹಚ್ಚ ಹಸಿರಿನ ಅತ್ಯುತ್ತಮ ಉದ್ಯಾನವನ, ಪರಿಸರ ಕಲಿಕೆ, ಬಾಲವನವನ್ನು ಹೊಂದಿರುವ ಹುಂಚ ಗ್ರಾಪಂ ವ್ಯಾಪ್ತಿಯ ಸ.ಕಿ.ಪ್ರಾ. ಶಾಲೆ ಹಡ್ಲುಬೈಲು (Hadlubailu) ಮತ್ತೊಂದು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

WhatsApp Group Join Now
Telegram Group Join Now
Instagram Group Join Now

ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಇತ್ತೀಚೆಗೆ ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ ನೀಡಿದ್ದು, ಇದು 40 ಮಾನದಂಡಗಳನ್ನು ಹೊಂದಿರುವ ಶಾಲೆಗಳಿಗೆ ನೀಡಲಾಯಿತು.

ಈ ಪ್ರಶಸ್ತಿಯನ್ನು ಸಂಸ್ಥಾಪಕ ಸದ್ಗುರು ಮಧುಸೂದನ್ ಸಾಯಿರವರು ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಹೆಚ್.ವೈ. ರವರಿಗೆ ಪ್ರದಾನ ಮಾಡಿದರು‌.

ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ 10 ಸಾವಿರ ರೂ. ನಗದು, 8 ಸಾವಿರ ರೂ. ಬೆಲೆಯ ಗ್ರಂಥಾಲಯ ಪುಸ್ತಕಗಳು, ದಿನಚರಿಗಳು, ಎಲ್ಲಾ ಮಕ್ಕಳಿಗೂ ಚಾಕೊಲೇಟ್ ಹಾಗೂ ಮುಖ್ಯ ಶಿಕ್ಷಕರಿಗೆ ಕೈಗಡಿಯಾರವನ್ನೊಳಗೊಂಡಿದೆ.

ಈ ಕುರಿತು ಮುಖ್ಯ ಶಿಕ್ಷಕ ಚಂದ್ರಶೇಖರ ಪ್ರತಿಕ್ರಿಯೆ ನೀಡಿ, ಕಾಡಂಚಿನ ಕುಗ್ರಾಮದಲ್ಲಿರುವ ಹಡ್ಲುಬೈಲು ಶಾಲೆಗೆ ರಾಜ್ಯ ಮಟ್ಟದ ಪ್ರಶಸ್ತಿ ದೊರೆತಿರುವುದು ನಮಗೆ ಸಂಭ್ರಮ ತಂದಿದೆ. ಈ ಪ್ರಶಸ್ತಿ ನೀಡಿದ ಅನ್ನಪೂರ್ಣ ಟ್ರಸ್ಟ್‌ನ ಸಮಿತಿಯವರಿಗೆ ಹಾಗೂ ಶಾಲೆಯ ಸಹ ಶಿಕ್ಷಕಿ ಕಲಾವತಿ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರಗಳಿಗೆ, ಗ್ರಾಮಸ್ಥರಿಗೆ, ಸಿ.ಆರ್.ಪಿ ದೀಪಾರವರಿಗೆ, ಗ್ರಾ.ಪಂ ಸದಸ್ಯರಿಗೆ, ಸಹಕರಿಸಿದ ಶಿಕ್ಷಣ ಇಲಾಖೆಯ ಸರ್ವರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

Leave a Comment