ಬಿರುಸುಗೊಂಡ ಪುಷ್ಯ, ಮೀನು ಬೇಟೆಯ ಹರ್ಷ !

Written by malnadtimes.com

Updated on:

RIPPONPETE | ಮಲೆನಾಡಿನಲ್ಲಿ ಬಿರುಸುಕೊಂಡ ಪುಷ್ಯ ಮಳೆಯಿಂದಾಗಿ ಸಮೀಪದ ಹೆದ್ದಾರಿಪುರ ಹಾಗೂ ಕಲ್ಲೂರು ನಡುವೆ ಸಂಪರ್ಕಕ್ಕೆ ಇರುವ ಕುಮದ್ವತಿ ನದಿಯ ಕಿರುಸೇತುವೆ ಮೇಲೆ ಶುಕ್ರವಾರ ಬೆಳಗಿನಿಂದ ಸುರಿದ ಭಾರಿ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿದ್ದು, ಅಕ್ಕಪಕ್ಕದ ಹಳ್ಳಿ ಜನರು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜಮಾಯಿಸಿದ್ದು ಕಂಡು ಬಂತು.

WhatsApp Group Join Now
Telegram Group Join Now
Instagram Group Join Now

ಈ ಭಾಗದಲ್ಲಿ ಕುಮುದ್ವತಿ ನದಿ ಉಕ್ಕಿ ಹರಿದಿದ್ದರಿಂದಾಗಿ ಅಕ್ಕಪಕ್ಕದ ಕೃಷಿ ಜಮೀನುಗಳು ಜಲಾವೃತಗೊಂಡಿದ್ದು, ಅಲ್ಲಿ ಸಂತಾನೋತ್ಪತ್ತಿಗಾಗಿ ಬರುತ್ತಿದ್ದ ಮೀನುಗಳನ್ನು ಬಲೆ ಬಿಟ್ಟು ಹಿಡಿಯುವುದರಲ್ಲಿ ಸ್ಥಳೀಯರು ನಿರತರಾಗಿದ್ದರು.

ವಾರದಿಂದೀಚೆಗೆ ಬಿರುಸು ಪಡೆದು ಎಡಬಿಡದೆ ಸುರಿಯುತ್ತಿರುವ ಪುಷ್ಯ ಮಳೆಯು, ಈ ಭಾಗದಲ್ಲಿ ಕೃಷಿ ಚಟುವಟಿಕೆ ಸ್ವಲ್ಪ ಹಿನ್ನಡೆಯನ್ನುಂಟು ಮಾಡಿದೆ. ಆದರೂ ಅಲ್ಲಲ್ಲಿ ಸಸಿಮಡಿಗಳಿಂದ ಸಸಿ ಕೀಳುವುದು ಸೇರಿದಂತೆ ಇತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬರುತ್ತಿದೆ.

Leave a Comment