ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಾದ್ಯಂತ ಭರ್ಜರಿ ಮಳೆ: ಎಲ್ಲೆಲ್ಲಿ ಎಷ್ಟಾಗಿದೆ?

The northeast monsoon has intensified across the state, and several parts of Shivamogga district have received good rainfall over the last 24 hours.

Rainfall in Shivamogga

ಶಿವಮೊಗ್ಗ: ರಾಜ್ಯಾದ್ಯಂತ ಹಿಂಗಾರು ಮಳೆ ಚುರುಕುಗೊಂಡಿದ್ದು, ಶಿವಮೊಗ್ಗ ಜಿಲ್ಲೆಯ ಹಲವೆಡೆ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಇಂದು ಬೆಳಿಗ್ಗೆ 7:00 ಗಂಟೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಜಿಲ್ಲೆಯ ಶಿಕಾರಿಪುರ, ಹೊಸನಗರ ಹಾಗೂ ಸಾಗರ ತಾಲೂಕಿನ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿದಿದೆ.

WhatsApp Group Join Now
Telegram Group Join Now
Instagram Group Join Now

ಜಿಲ್ಲೆಯ ಪೈಕಿ ಶಿಕಾರಿಪುರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ತಾಲೂಕಿನ ಹೊಸೂರು ವ್ಯಾಪ್ತಿಯಲ್ಲಿ ಬರೋಬ್ಬರಿ 82.5 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ಕಾಗಿನೆಲ್ಲಿಯಲ್ಲಿ 79.5 ಮಿ.ಮೀ. ಹಾಗೂ ಗೊಗ್ಗದಲ್ಲಿ 73.0 ಮಿ.ಮೀ. ಮಳೆಯಾಗಿದೆ. ಮಲೆನಾಡು ಭಾಗವಾದ ಹೊಸನಗರ ತಾಲೂಕಿನ ಹರತಾಳು ಮತ್ತು ಕರಿಮನೆ ಭಾಗದಲ್ಲೂ ಉತ್ತಮ ಮಳೆಯಾದ ವರದಿಯಾಗಿದೆ.

ತಾಲೂಕುವಾರು ದಾಖಲಾದ ಪ್ರಮುಖ ಮಳೆ ವಿವರ ಇಂತಿದೆ:

ಶಿಕಾರಿಪುರ ತಾಲೂಕು:

  • ಹೊಸೂರು (82.5 ಮಿ.ಮೀ)
  • ಕಾಗಿನೆಲ್ಲಿ (79.5 ಮಿ.ಮೀ)
  • ಗೊಗ್ಗ (73.0 ಮಿ.ಮೀ)
  • ನೆಲವಾಗಿಲು (71.5 ಮಿ.ಮೀ)
  • ಕಿಟ್ಟದಹಳ್ಳಿ (69.0 ಮಿ.ಮೀ)
  • ಮಟ್ಟಿಕೋಟೆ (63.5 ಮಿ.ಮೀ)
  • ಮಾರವಳ್ಳಿ (58.0 ಮಿ.ಮೀ)
  • ಮುದ್ದನಹಳ್ಳಿ (57.0 ಮಿ.ಮೀ)

ಹೊಸನಗರ ತಾಲೂಕು:

  • ಹರತಾಳು (70.0 ಮಿ.ಮೀ)
  • ಕರಿಮನೆ (62.5 ಮಿ.ಮೀ)

ಸಾಗರ ತಾಲೂಕು:

  • ಮಾಸೂರು (57.0 ಮಿ.ಮೀ)

ಇನ್ನು ರಾಜ್ಯಮಟ್ಟದಲ್ಲಿ ಗಮನಿಸುವುದಾದರೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಪುನದಹಳ್ಳಿ ಗ್ರಾಮದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 137.0 ಮಿ.ಮೀ. ಮಳೆ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ನೆಲ್ಲಿಕಾರಿನಲ್ಲಿ 135.5 ಮಿ.ಮೀ. ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸುರಿದ ಈ ಧಾರಾಕಾರ ಮಳೆಯಿಂದಾಗಿ ವಾತಾವರಣ ತಂಪಾಗಿದ್ದು, ಕೃಷಿ ಚಟುವಟಿಕೆಗಳಿಗೆ ಹಾಗೂ ಕೆರೆ-ಕಟ್ಟೆಗಳಿಗೆ ಮತ್ತಷ್ಟು ನೀರು ಹರಿದುಬರಲು ಸಹಕಾರಿಯಾಗಿದೆ. ಇಂದು ಸಹ ಮಳೆ ಮುಂದುವರಿಯುವ ಸಾಧ್ಯತೆ ಇದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!