ಹೊಸನಗರ ; ಪಟ್ಟಣದ ಮಠದಗುಡ್ಡ ನಿವಾಸಿಗಳು ಚೌಡಮ್ಮ ದೇವಸ್ಥಾನ ರಸ್ತೆಯ ಹೋಟೆಲ್ ಸುವರ್ಣ ಮಾಲೀಕರಾದ ಸುರೇಶ್ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರಿಯಾದ ವಿಕಲಚೇತನ ಯುವತಿ ಕು. ಜ್ಯೋತಿ (28) ಅನಾರೋಗ್ಯದಿಂದ ಮೃತರಾದರು.
6ನೇ ತರಗತಿವರೆಗೆ ವ್ಯಾಸಂಗ ಮಾಡಿದ ಜ್ಯೋತಿ ವಿಕಲಚೇತನಕ್ಕೆ ತುತ್ತಾಗಿ ವಿದ್ಯಾಭ್ಯಾಸ ಮೊಟಕುಗೊಳಿಸಿ ಹಾಸಿಗೆ ಹಿಡಿದಿದ್ದರು. ಎರಡು ದಶಕಗಳ ಕಾಲ ಹಾಸಿಗೆ ಹಿಡಿದಿದ್ದ ಜ್ಯೋತಿ ರಾಮನವಮಿ ದಿನದ ಬೆಳಗಿನಜಾವ ಇಹಲೋಕ ತ್ಯಜಿಸಿದ್ದಾರೆ.
ಜ್ಯೋತಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್ ಮತ್ತಿತರು ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪುತ್ರ ಶೋಕ ನಿರಂತರ ಎಂಬಂತೆ ಸುರೇಶ್, ಮೀನಾಕ್ಷಿ ದಂಪತಿಗಳ ಪುತ್ರ ದರ್ಶನ್ (20) ಮಹಾಮಾರಿ ಕ್ಯಾನ್ಸರ್‌ಗೆ ತುತ್ತಾಗಿ ಈ ಹಿಂದೆ ಕೊನೆಯುಸಿರೆಳೆದಿದ್ದರು.